Darshan: ಇದು ಡಿ ಬಾಸ್ ಅಂದ್ರೆ: ಮತ್ತೊಮ್ಮೆ ದರ್ಶನ್ ರವರನ್ನು ಹುಡುಕಿಕೊಂಡು ಬಂದ ಮತ್ತೊಂದು ಗೌರವ. ಏನು ಗೊತ್ತೇ??
Darshan: ನಟ ದರ್ಶನ್ ಅವರಿಗೆ ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಎಷ್ಟು ಒಳವಿದೆ ಎಂದು ನಮಗೆಲ್ಲ ಗೊತ್ತಿದೆ. ಚಿತ್ರೀಕರಣದಿಂದ ಬಿಡುವು ಸಿಕ್ಕಾಗ ದರ್ಶನ್ ಅವರು, ಕಾಡು ಮೇಡುಗಳನ್ನು ಸುತ್ತಿ ಬರುತ್ತಾರೆ. ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಒಂದು ಮಿನಿ ಜೂ ಅನ್ನೇ ಸೃಷ್ಟಿ ಮಾಡಿದ್ದಾರೆ. ಕುದುರೆ, ನಾಯಿ, ಹಸುಗಳು ಹೀಗೆ ಸಾಕಷ್ಟು ಪ್ರಾಣಿಗಳಿವೆ. ಹೀಗೆ ಪ್ರಕೃತಿ ಮೇಲೆ ಪ್ರೇಮ ಇಟ್ಟುಕೊಂಡಿರುವ ದರ್ಶನ್ ಅವರಿಗೆ ಸರ್ಕಾರದಿಂದ ಗೌರವ ಸಿಕ್ಕಿದೆ.
ದರ್ಶನ್ ಅವರ ಕ್ರಾಂತಿ ಸಿನಿಮಾ ಮುಂದಿನ ವರ್ಷ ಜನವರಿ 26ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾಗಾಗಿ ಈಗಾಗಲೇ ಪ್ರಚಾರದ ಶುರು ಮಾಡಲಾಗಿದ. ಈ ಸಂತೋಷದ ನಡುವೆಯೇ ದರ್ಶನ್ ಅವರಿಗೆ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ ಅದೇನೆಂದರೆ ದರ್ಶನ್ ಅವರು ಕರ್ನಾಟಕ ವನ್ಯ ಜೀವಿ ಮಂಡಳಿಗ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಸಂತೋಷದ ವಿಷಯವನ್ನು ನವೆಂಬರ್ 19ರಂದು ಅಧಿಕೃತವಾಗಿ ಸರ್ಕಾರ ತಿಳಿಸಿದೆ..
ಇದು ಬಹಳ ಸಂತೋಷವೇ, ಏಕೆಂದರೆ ದರ್ಶನ್ ಅವರಿಗೆ ಕಾಡು ಮತ್ತು ಪ್ರಾಣಿಗಳು ಎಂದರೆ ಬಹಳ ಇಷ್ಟ. ವನ್ಯಜೀವಿ ಛಾಯಾಗ್ರಹಕರು, ಮತ್ತು ಪ್ರಾಣಿಶಾಸ್ತ್ರಕ್ಕೆ ದರ್ಶನ್ ಅವರು ಈಗಾಗಲೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅದರ ಜೊತೆಗೆ ಈಗ ಮತ್ತೊಂದು ವಿಶೇಷವಾದ ಸ್ಥಾನ ದರ್ಶನ್ ಅವರಿಗೆ ಸಿಕ್ಕಿದ್ದು, ಇದನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸುಮಾರು ಎರಡು ವರ್ಷಗಳ ನಂತರ ದರ್ಶನ್ ಅವರು ಅಭಿನಯಿಸಿರುವ ಕ್ರಾಂತಿ ಸಿನಿಮಾ ತೆರೆಮೇಲೆ ಬರಲಿದೆ.