Big Shocking: ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ನಿಂತ ಚೇತನ್: ಪಾಕ್ ಪರ ಘೋಷಣೆ ಕುರಿತು ಹೇಳಿದ್ದೇನು ಗೊತ್ತೆ?
Big Shocking: ನಟ ಚೇತನ್ ಅಹಿಂಸಾ (Chetan Ahimsa) ಅವರು ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ವಿಚಾರದ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ. ಇದೀಗ ನಟ ಚೇತನ್ ಅವರು ಬೆಂಗಳೂರಿನಲ್ಲಿ (Bangalore) ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ್ದಾರೆ. ಮಾರತ್ತಹಳ್ಳಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದ್ದು, ಚೇತನ್ ಅವರು ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಮಾರತ್ತಹಳ್ಳಿಯ (Marathalli) ಒಂದು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಿಯಾ, ಆರ್ಯನ್ ಮತ್ತು ದಿನಕರ್ ಎನ್ನುವ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು, ಪೊಲೀಸರು ಇವರನ್ನು ಅರೆಸ್ಟ್ ಮಾಡಿ, ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಈ ವಿದ್ಯಾರ್ಥಿಗಳು ಆ ರೀತಿ ಘೋಷಣೆ ಕೂಗಿದ್ದು, ತಮಾಷೆಗಾಗಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಆದರೆ ಪೊಲೀಸರು ಇವರ ಮಾತಿಗೆ ಸೊಪ್ಪು ಹಾಕಿಲ್ಲ, ಬದಲಾಗಿ ಇದೊಂದು ಗಂಭೀರ ಆರೋಪವಾಗಿ ಪರಿಗಣಿಸಿ, ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳಲಿದ್ದು, ತಮಾಷೆಗೆ ಮಾಡಿದ ಕೆಲಸದಿಂದ ಈಗ ಕಷ್ಟಕ್ಕೆ ಸಿಲುಕೊಂಡಿದ್ದಾರೆ. ಇದರ ಬಗ್ಗೆ ನಟ ಚೇತನ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ.. Rashmika Mandanna : ಆ ಮೂಡ್ ಬರಬೇಕು ಎಂದರೆ, ಆ ಕೆಲಸ ಮಾಡಲೇಬೇಕು. ಎಲ್ಲವನ್ನು ಬಿಟ್ಟು ಮೀಡಿಯಾ ಮುಂದೇನೆ ಸತ್ಯ ಹೇಳಿದ ರಶ್ಮಿಕಾ.
“ಕುವೆಂಪು (Kuvempu) ಅವರ ‘ವಿಶ್ವಮಾನವ’ ವನ್ನು ಕರ್ನಾಟಕದಲ್ಲಿ (Karnataka) ನಾವು ಪಾಲಿಸಬೇಕು. ನಮ್ಮ ಸರ್ಕಾರವೂ ಸೇರಿದಂತೆ ಎಲ್ಲಾ ಸರ್ಕಾರಗಳ ತಪ್ಪುಗಳನ್ನೂ ಕೂಡ ನಾವು ವಿರೋಧಿಸಬೇಕು… ಆದರೆ ಬೇರೆಲ್ಲಾ ದೇಶದ ಜನರು ಒಳ್ಳೆಯವರು, ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿದ್ದಾರೆ ಎಂಬ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ನಮ್ಮ ಮಾನವೀಯತೆಯನ್ನು ರಾಜಕೀಯ ಗಡಿಗಳು ಅಥವಾ ಡೆಮೋಗಾಗರೀ ಮಿತಿಗೊಳಿಸಬಾರದು..” ಎಂದು ಬರೆದುಕೊಂಡಿದ್ದಾರೆ ನಟ ಚೇತನ್. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಣ್ಣ ಇವತ್ತಿನ ಕಾಲದಲ್ಲಿ ವಿಶ್ವ ಮಾನವ ಕುವೆಂಪು ಅವರ ಕಾಲ ದಾರಿ ಅನುಸರಿದರೆ ಮುಂದೆ ಬರೋಕ್ಕೆ ಹಾಗಲ್ಲ ವಿಶ್ವ ಗುರು ಮೋದಿ ಕಾಲ ಅನುಸಿದರೆ ನಾವು ನೀವು ಈ ಶತಮಾನದ ಕಲಿ ಗಳು ನಾವೇ. ದನವಂತ್ತ ಅರೋಗ್ಯ ಆಯಸ್ಸು ನಮ್ಮ ಹಿಂದು ದೇವರು ಕೊಡುತ್ತಾನೆ..” ಎಂದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ. ಅವರು ತಮಾಷೆಗೆ ಮಾಡಿದ್ದಾರೆ ಎಂದು ಬಿಟ್ಟರೆ ನಾಳೆ ಬೇರೇನನ್ನೋ ಮಾಡುತ್ತಾರೆ ಎಂದು ಚೇತನ್ ಅವರ ಈ ಪೋಸ್ಟ್ ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..ಮತ್ತಷ್ಟು ಹೊಸ ಫೋಟೋ ಬಿಡುಗಡೆ ಮಾಡಿದ ಜಾನ್ವಿ ಕಪ್ಪೋರ್: ನಡುಗಿದ ಹುಡುಗರು, ಫೋಟೋ ನೋಡಿದರೆ ರಾತ್ರಿ ಎಲ್ಲ ನಿದ್ದೆ ಬರಲ್ಲ.