Kantara: ಕಾಂತಾರ ಸಿನಿಮಾ ನೋಡಿ ಕಣ್ಣೀರು ಹಾಕಿದ ಬಾಲಿವುಡ್ ದೊರೆ ಸುನಿಲ್ ಶೆಟ್ಟಿ; ಹೇಳಿದ್ದೇನು ಗೊತ್ತೇ??

10

Get real time updates directly on you device, subscribe now.

Kantara: ಕನ್ನಡದ ಕಾಂತಾರ (Kantara) ಸಿನಿಮಾ ವಿಶ್ವದ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಮಣ್ಣಿನ ಕರಾವಳಿ ಭಾಗದ ಕಥೆ, ದೈವ ನರ್ತನ, ಭೂತಕೋಲ ಎಲ್ಲವೂ ಜನರನ್ನು ಆಕರ್ಷಿಸಿದೆ. ಸಿನಿಮಾ ಬಿಡುಗಡೆಯಾಗಿ 50 ದಿನಗಳು ಪೂರೈಸಿದ್ದು, ಇಷ್ಟು ದಿನಗಳಾಗಿದ್ದರು ಸಹ, ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇದೀಗ ಕಾಂತಾರ ಸಿನಿಮಾ 400 ಕೋಟಿ ಹಣಗಳಿಕೆಯ ಹತ್ತಿರದಲ್ಲಿದೆ. ಈ ಸಿನಿಮಾವನ್ನು ದೇಶದ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳೆ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ್ದರು. ಬಾಲಿವುಡ್ ನಟಿ ಕಂಗನಾ ರನಾವತ್ (Kangana Ranaut) ಸಿನಿಮಾ ನೋಡಿ, ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾ ಆಸ್ಕರ್ ಗೆ ಹೋಗಬೇಕು ಎಂದಿದ್ದರು. ಶಿಲ್ಪಾ ಶೆಟ್ಟಿ (Shilpa Shetty) ಅವರು ಸಿನಿಮಾ ನೋಡಿ ಗೂಸ್ ಬಂಪ್ಸ್ ಬಂತು, ನಾನು ಆ ಸಂಸ್ಕೃತಿಯ ಜೊತೆಗೆ ಬೆಳೆದವಳು ಎಂದಿದ್ದರು, ನಟಿ ಪೂಜಾ ಹೆಗ್ಡೆ (Pooja Hegde), ಅನುಷ್ಕಾ ಶೆಟ್ಟಿ (Anushka Shetty) ಎಲ್ಲರೂ ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರು ಕಾಂತಾರ ನೋಡಿ ಹಾಡಿ ಹೊಗಳಿದ್ದಾರೆ.

ಅವರ ವೆಬ್ ಸೀರೀಸ್ ಪ್ರೊಮೋಷನ್ ಗಾಗಿ ನಡೆದ ಇಂಟರ್ವ್ಯೂನಲ್ಲಿ ಕಾಂತಾರ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ ಅವರು, “ಈಗಷ್ಟೇ ಕುಟುಂಬದ ಜೊತೆಗೆ ಸಿನಿಮಾ ನೋಡಿದೆ, ಪಿವಿಆರ್ ನಲ್ಲಿ ಶೇ.60ಕ್ಕಿಂತ ಹೆಚ್ಚು ಜನ ಬಂದು ಸಿನಿಮಾ ನೋಡ್ತಾ ಇದ್ದಿದ್ದು ಆಶ್ಚರ್ಯವಾಯಿತು. ಕೊನೆಯ 20 ರಿಂದ 25 ನಿಮಿಷ ರೋಮಾಂಚನವಾಗಿತ್ತು, ಕಣ್ಣಲ್ಲಿ ನೀರು ಬಂತು. ಯಾಕಂದ್ರೆ ನಾನು ಕೂಡ ಅದೇ ಊರಿನವನು. ಪ್ರತಿ ವರ್ಷ ದೇವರ ಪೂಜೆ, ಕೋಲ ಇದೆಲ್ಲದಕ್ಕೂ ನಾನು ಹೋಗಿಬರುತ್ತೇನೆ. ಕಾಂತಾರ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕಾರಣ, ಜನರ ಮೆಚ್ಚುಗೆ ಇಂದ ಸಿಕ್ಕ ಪ್ರಚಾರದಿಂದ. ಸಿನಿಮಾ ಬಗ್ಗೆ ಒಬ್ಬರಿಂದ ಒಬ್ಬರು ದೊಡ್ಡದಾಗಿ ಚರ್ಚೆ ಮಾಡಿ, ಇಂದು ಇಷ್ಟರ ಮಟ್ಟಿಗೆ ಗೆದ್ದಿದೆ. ಕಂಟೆಂಟ್ ಇಸ್ ದಿ ಕಿಂಗ್..” ಎಂದು ಹೇಳಿದ್ದಾರೆ ಸುನೀಲ್ ಶೆಟ್ಟಿ.

Get real time updates directly on you device, subscribe now.