ಮಗಳ ಜೊತೆ ಸದಾ ಇರುತ್ತಿದ್ದ ಶ್ರೀದೇವಿ, ಮಗಳು ಬಾತ್ರೂಮ್ ಗೆ ಹೋದಾಗಲೂ ಹಾಕುತಿದ್ದ ಷರತ್ತು ಏನು ಗೊತ್ತೇ??

71

Get real time updates directly on you device, subscribe now.

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಜಾನ್ವಿ ಕಪೂರ್. ಈಕೆ ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ ಆದರೂ ಶ್ರೀದೇವಿ ಅವರ ಮಗಳು ಎನ್ನುವ ಕಾರಣಕ್ಕೆ ಇವರಿಗೆ ಬಾಲಿವುಡ್ ನಲ್ಲಿ ಬಹಳ ಬೇಡಿಕೆ ಇದೆ. ನಟಿ ಶ್ರೀದೇವಿ ನಿಧನರಾದ ನಂತರ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ಜಾನ್ವಿ ಕಪೂರ್. ಇವರು ನಟಿಸಿದ ಮೊದಲ ಸಿನಿಮಾ ಧಡಕ್, ಮರಾಠಿ ಸಿನಿಮಾ ಸೈರಾಟ್ ನ ರಿಮೇಕ್ ಆಗಿತ್ತು ಈ ಸಿನಿಮಾ.

ಮೊದಲ ಸಿನಿಮಾ ಯಶಸ್ವಿಯಾದರು ಜಾನ್ವಿ ಕಪೂರ್ ನಟಿಸಿದ ಎರಡನೇ ಸಿನಿಮಾ ಗುಂಜನ್ ಸಕ್ಸೆನಾ : ದಿ ಕಾರ್ಗಿಲ್ ಗರ್ಲ್ ಸಿನಿಮಾ ಯಶಸ್ಸು ಕಾಣಲಿಲ್ಲ. ಆದರೂ ಜಾನ್ವಿ ಕಪೂರ್ ಗೆ ಇರುವ ಬೇಡಿಕೆ ಏನು ಕಡಿಮೆ ಆಗಿಲ್ಲ. ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಬಾಲಿವುಡ್ ಅಂಗಳದಲ್ಲಿ ಸುದ್ದಿಯಲ್ಲಿರುತ್ತಾರೆ ಜಾನ್ವಿ ಕಪೂರ್. ಇದೀಗ ಜಾನ್ವಿ ಕಪೂರ್ ಅವರು ತಮ್ಮ ತಾಯಿಯ ಬಗ್ಗೆ ಒಂದು ಆಸಕ್ತಿಕರವಾದ ವಿಷಯವನ್ನು ತಿಳಿಸಿದ್ದಾರೆ. ಶ್ರೀದೇವಿ ಅವರು ಮದುವೆಯಾದ ನಂತರ ಮೊದಲ ಬಾರಿಗೆ ಖರೀದಿ ಮಾಡಿದ ಮನೆಯನ್ನು ತೋರಿಸಿರುವ ಜಾನ್ವಿ ಅವರು ಆ ಮನೆಯಲ್ಲಿ ಪ್ರಪಂಚದ ಹಲವು ಕಡೆಗಳಿಂದ ತಂದಿರುವ ವಸ್ತುಗಳನ್ನು ಇಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ.. Rashmika: ಕರ್ನಾಟಕದ ಕ್ರಶ್ ಆಗಿರುವ ರಶ್ಮಿಕಾ ರವರಿಗೆ ಗಂಡು ಹುಡುಕಿದ ರವಿ ಚಂದ್ರನ್, ಕರ್ನಾಟಕದ ಸೊಸೆ ಮಾಡಲು ಹುಡುಕಿದ ಗಂಡು ಯಾರು ಗೊತ್ತೇ?

ಹಾಗೂ ಮನೆಯಲ್ಲಿ ಮತ್ತೊಂದು ಆಸಕ್ತಿಕರ ವಿಚಾರ ತಿಳಿಸಿದ್ದಾರೆ, “ಈ ಮನೆಯಲ್ಲಿ ನನಗೆ ಬಹಳಷ್ಟು ನೆನಪುಗಳಿಗೆ. ಅದರಲ್ಲಿ ಒಂದು ಸ್ಪೆಷಲ್ ವಿಚಾರದ ಬಗ್ಗೆ ಹೇಳೋದಾದರೆ, ನನ್ನ ಬಾತ್ ರೂಮ್ ಗೆ ಲಾಕ್ ಇಲ್ಲ, ಅಮ್ಮನಿಗೆ ನಾನು ಬಾತ್ ರೂಮ್ ಲಾಕ್ ಮಾಡಿಕೊಂಡು ಹುಡುಗರ ಜೊತೆಗೆ ಮಾತಾಡ್ತೀನಿ ಅಂತ ಭಯ ಇತ್ತು. ಅದಕ್ಕೆ ನನ್ನ ಬಾತ್ ರೂಮ್ ಲಾಕ್ ಮಾಡೋದಕ್ಕೆ ಅಮ್ಮ ಪರ್ಮಿಶನ್ ಕೊಡ್ತಾ ಇರ್ಲಿಲ್ಲ ಈಗಲೂ ಈ ಮನೆಯಲ್ಲಿ ನನ್ನ ಬಾತ್ ರೂಮ್ ಗೆ ಲಾಕ್ ಇಲ್ಲ..” ಎಂದು ಹೇಳಿದ್ದಾರೆ ಜಾನ್ವಿ. ಇದನ್ನು ಕೇಳಿದ ನೆಟ್ಟಿಗರು. ಶ್ರೀದೇವಿ ಅವರು ಇಷ್ಟೊಂದು ಸ್ಟ್ರಿಕ್ಟ್ ಆಗಿದ್ರಾ ಎನ್ನುತ್ತಿದ್ದಾರೆ. ಇದನ್ನು ಓದಿ.. ಗೃಹಿಣಿಯರಿಗಿಂತ ಹಣ ಉಳಿಸೋರು ಯಾರು ಇಲ್ಲ, ಆದರೆ ಗೃಹಿಣಿಯರು ಕೂಡ ಹಣ ಮತ್ತಷ್ಟು ಹಣ ಉಳಿಸಲು ಏನು ಮಾಡಬೇಕು ಗೊತ್ತೇ??

Get real time updates directly on you device, subscribe now.