Cricket News: ಹಾರ್ಧಿಕ್ ಪಾಂಡ್ಯ ಎಂಟ್ರಿ ಯಾಗಿದ್ದೆ ತಡ ಭರವಸೆಯ ಯುವ ಆಟಗಾರನ ಕ್ರಿಕೆಟ್ ಜೀವನವೇ ಅಂತ್ಯವಾಯಿತೇ?? ವಾಪಸ್ಸು ಬರುವುದಿಲ್ಲವೇ ಸ್ಟಾರ್??

23

Get real time updates directly on you device, subscribe now.

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಸೋತ ನಂತರ ಬಿಸಿಸಿಐ (BCCI) ಈಗ ಭಾರಿ ಬದಲಾವಣೆ ಮಾಡಲು ತೀರ್ಮಾನ ಮಾಡಿದೆ. ಮುಂದಿನ ಟಿ20 ವಿಶ್ವಕಪ್ ಗೆ ಇನ್ನು ಎರಡು ವರ್ಷಗಳ ಸಮಯ ಇದೆ. ಅಷ್ಟರ ಒಳಗೆ ಬಲಿಷ್ಠ ತಂಡ ಕಟ್ಟಬೇಕಿದೆ. ಪ್ರಸ್ತುತ ನ್ಯೂಜಿಲೆಂಡ್ (New Zealand) ಪ್ರವಾಸಕ್ಕಾಗಿ ಭಾರತ ತಂಡ ನ್ಯೂಜಿಲೆಂಡ್ ಗೆ ಹೊರಟಿದೆ. ಭಾರತ ತಂಡದ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಅವರ ಅತ್ಯುತ್ತಮ ಆಲ್ ರೌಂಡರ್ ಪ್ರದರ್ಶನವು ಮತ್ತೊಮ್ಮೆ ನ್ಯಾಷನಲ್ ಟೀಮ್ ನಲ್ಲಿ ಸ್ಥಾನ ಪಡೆಯುವ ಹಾಗೆ ಮಾಡಿತು.

ಗಾಯದ ಕಾರಣದಿಂದ ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಈ ವರ್ಷ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ (Gujaraj Titans) ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ, ಕ್ಯಾಪ್ಟನ್ ಆಗಿ ತಮ್ಮ ತಂಡ ಮೊದಲ ಸೀಸನ್ ನಲ್ಲೇ ಐಪಿಎಲ್ (IPL) ಟ್ರೋಫಿ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಅವರು ಭಾರತ ತಂಡಕ್ಕೆ ಆಯ್ಕೆಯಾದರು. ಮುಂದಿನ ಕ್ಯಾಪ್ಟನ್ ಇವರೇ ಆಗುವ ಸಾಧ್ಯತೆ ಹೆಚ್ಚಿದೆ. ಹಾರ್ದಿಕ್ ಪಾಂಡ್ಯ ಅವರೇನೋ ಸಕ್ಸಸ್ ಫುಲ್ ಆಗಿ ಕೆರಿಯರ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಇವರಿಂದ ಮತ್ತೊಬ್ಬ ಯುವ ಕ್ರಿಕೆಟಿಗನ ಕೆರಿಯರ್ ಮರೆಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆ ಆಟಗಾರ ಮತ್ಯಾರು ಅಲ್ಲ, ವೆಂಕಟೇಶ್ ಅಯ್ಯರ್ (Venkatesh Iyer). ಇವರು ಕೂಡ ಹಾರ್ದಿಕ್ ಪಾಂಡ್ಯ ಅವರ ಹಾಗೆ ಉತ್ತಮ ಆಲ್ ರೌಂಡರ್. ವೆಂಕಟೇಶ್ ಅಯ್ಯರ್ ಅವರು ಕೂಡ ಹಾರ್ಡ್ ಹಿಟ್ಟರ್, ಪಾಂಡ್ಯ ಅವರು ಗಾಯದ ಕಾರಣ ತಂಡದಿಂದ ಹೊರಗಿದ್ದಾಗ, ವೆಂಕಟೇಶ್ ಅಯ್ಯರ್ ಅವರು ನ್ಯಾಷನಲ್ ಟೀಮ್ ಗೆ ಎಂಟ್ರಿಯಾಗಿ, ಉತ್ತಮ ಪ್ರದರ್ಶನ ನೀಡಿದರು. ಇವರು ತಂಡಕ್ಕೆ ಎಂಟ್ರಿಯಾದ ಬಳಿಕ, ಐರ್ಲೆಂಡ್ (India vs Ireland) ಸೀರೀಸ್ ಗೆ ಆಯ್ಕೆಯಾದರು ಕೂಡ, ವೆಂಕಟೇಶ್ ಅಯ್ಯರ್ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಕೂಡ ಸಿಗಲಿಲ್ಲ. ಹಾಗಾಗಿ ಪಾಂಡ್ಯ ಅವರು ಬಂದ ಬಳಿಕ ವೆಂಕಟೇಶ್ ಅಯ್ಯರ್ ಮರೆಯಾಗುತ್ತಿದ್ದಾರೆ ಎನ್ನುವ ಅಭಿಪ್ರಾಯ ಮೂಡಿದೆ.

Get real time updates directly on you device, subscribe now.