Kannada News: ಎರಡನೇ ಪತ್ನಿಯಾದರೂ ರಾಧಿಕಾರವರನ್ನು ಪ್ರೀತಿ ಮಾಡಿ ಮದುವೆಯಾಗಿದ್ದ ಕುಮಾರಣ್ಣನ, ಪ್ರೀತಿ ಇಂದ ಆಕೆಯನ್ನು ಏನು ಕರೆಯುತ್ತಿದ್ದರು ಗೊತ್ತೇ??

88

Get real time updates directly on you device, subscribe now.

Kannada News: 2002 ರಲ್ಲಿ ತೆರೆಕಂಡ ನಿನಗಾಗಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು ನಟಿ ರಾಧಿಕಾ. ರಾಧಿಕಾ (Radhika Kumaraswamy) ಮೂಲತಃ ಮಂಗಳೂರು ಜಿಲ್ಲೆಯವರು. ಹುಟ್ಟಿದ್ದು ನವೆಂಬರ್ 12, 1986 ರಲ್ಲಿ. ಓದಿನಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ರಾಧಿಕಾ ಅವರು ಮುಂದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ 14 ವರ್ಷದಲ್ಲಿದ್ದಾಗ ರತನ್ ಕುಮಾರ್ ಎನ್ನುವರ ಜೊತೆ ಇವರಿಗೆ ಬಾಲ್ಯ ವಿವಾಹ ಆಗುತ್ತದೆ. ಮದುವೆಯಾದ ಎರಡು ವರ್ಷಕ್ಕೆ ಅವರ ಪತಿ ಹೃದಯಾಘಾತದಿಂದ ನಿಧನರಾಗುತ್ತಾರೆ. ಸಂತೋಷವಾಗಿರಬೇಕಿದ್ದ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಳ್ಳುತ್ತಾರೆ ರಾಧಿಕಾ, ಆದರೆ ಅದೇ ವರ್ಷ ಅವರ ಅದೃಷ್ಟ ಕೂಡ ಬದಲಾಗುತ್ತದೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದ ರಾಧಿಕಾ ಅವರಿಗೆ ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಮೊದಲ ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ರಾಧಿಕಾ ಅವರಿಗೆ ಅಲ್ಲಿಂದ ಹೆಚ್ಚಿನ ಅವಕಾಶಗಳು ಸಿಗಲು ಆರಂಭವಾದವು. ಎರಡನೇ ಸಿನಿಮಾ ನಿನಗಾಗಿ ಭರ್ಜರಿ ಹಿಟ್ ಆಯಿತು. ನಂತರ ಹಲವಾರು ಸಿನಿಮಾಗಳಲ್ಲಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದರು. ಅದರಲ್ಲೂ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ (Shiva Rajkumar) ಅವರ ತಂಗಿಯಾಗಿ ಅಭಿನಯಿಸಿದ ತವರಿಗೆ ಬಾ ತಂಗಿ, ಅಣ್ಣ ತಂಗಿ ಸಿನಿಮಾಗಳು ಸೂಪರ್ ಹಿಟ್ ಆದವು. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲೂ ಸಹ ನಟಿಸಿ ಯಶಸ್ಸು ಪಡೆದರು ರಾಧಿಕಾ. 2008 ರಿಂದ 2012 ರ ವರೆಗು ಚಿತ್ರರಂಗದಿಂದ ದೂರ ಉಳಿದಿದ್ದರು ರಾಧಿಕಾ. ಇದನ್ನು ಓದಿ.. Kannada Astrology: ಶುರುವಾಗುತ್ತಿದೆ ಮಂಗಳ ದೇವನ ಕೃಪೆ; ಇನ್ನೆರಡು ದಿನಗಳಲ್ಲಿ ಅದೃಷ್ಟ ಪಡೆಯುತ್ತಿರುವುದು ಯಾವ ರಾಶಿಗಳು ಗೊತ್ತೇ??

2012 ರಲ್ಲಿ ಲಕ್ಕಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ವಾಪಸ್ ಬರುತ್ತಾರೆ. ಮುಂದಿನ ವರ್ಷ 2013 ರಲ್ಲಿ ನಂತರ 2010 ರಲ್ಲಿ ರಾಜಕಾರಣಿ ಕುಮಾರಸ್ವಾಮಿ (H D Kumaraswamy) ಅವರೊಡನೆ ಮದುವೆ ಆಗಿರುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. 2006 ರಲ್ಲಿ ಮದುವೆಯಾಗುವುದಾಗಿ ಹೇಳಿದ್ದರು ರಾಧಕಾ. ರಾಧಿಕಾ ಅವರಿಗೆ ಮುದ್ದಾದ ಹೆಣ್ಣು ಮಗು ಇದ್ದು, ಆ ಮಗುವಿನ ಹೆಸರು ಶಮಿಕಾ (Shamika). ಇತ್ತೀಚಿನ ಸಂದರ್ಶನ ಒಂದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂದು ಹೇಳಿದ್ದಾರೆ ರಾಧಿಕಾ. ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಪ್ರೀತಿಯಿಂದ ‘ರೀ’ ಎಂದು ಕರೆಯುತ್ತಾರಂತೆ. ಇನ್ನು ಕುಮಾರಸ್ವಾಮಿ ಅವರು ತಮ್ಮನ್ನು ಏನೆಂದು ಕರೆಯುತ್ತಾರೆ ಎಂದು ಕೇಳಿದಾಗ, ರಾಧಿಕಾ ಅವರ ಬಹಳ ನಾಚಿಕೊಂಡು, ‘ಚಿನ್ನು’ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಓದಿ.. ನಿನ್ನೆ ತಾನೇ ನೇರವಾಗಿ ಬೌಲರ್ ಗಳೇ ಕಾರಣ ಎಂಬಂತೆ ಮಾತನಾಡಿದ್ದ ರೋಹಿತ್, ಇಂದು ಆಟಗಾರರ ಬಗ್ಗೆ ಹೇಳಿದ್ದೇನು ಗೊತ್ತೇ??

Get real time updates directly on you device, subscribe now.