ಸಮುದ್ರವೇ ಎದ್ದು ನಿಂತು ನೋಡುವಂತೆ ಬೀಚ್ ನಲ್ಲಿ ಮಸ್ತ್ ಡಾನ್ಸ್ ಮಾಡಿದ ರಾಗಿಣಿ. ಹೇಗಿತ್ತು ಗೊತ್ತೇ ಡಾನ್ಸ್ ವಿಡಿಯೋ??

55

Get real time updates directly on you device, subscribe now.

ಒಂದು ಕಾಲದಲ್ಲಿ ರಾಗಿಣಿ ದ್ವಿವೇದಿ ಅವರ ಹೆಸರು ಚಂದನವನದಲ್ಲಿ ದೊಡ್ಡ ಮಟ್ಟದ ಹೈಪ್ ಪಡೆದುಕೊಂಡಿತ್ತು. ಆ ನಂತರ ಸ್ಯಾಂಡಲ್ವುಡ್ ನಲ್ಲಿ ನಟಿಮಣಿಯರ ಸಂಖ್ಯೆ ಹೆಚ್ಚುತ್ತಿದ್ದಂತೆ ಈಕೆಯ ಬೇಡಿಕೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಿತು.ಆದರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಆಳಿದ ನಟಿಯರಲ್ಲಿ ಒಬ್ಬರು ರಾಗಿಣಿ ದ್ವಿವೇದಿ ಎಂದರೆ ತಪ್ಪಾಗಲಾರದು. ಆದ್ರೆ 2020ರಲ್ಲಿ ಇವರ ಹಣೆ ಬರಹ ಸಂಪೂರ್ಣ ಬದಲಾಗಿತ್ತು. ಕಾರಣ ವಿಭದಾಗಳಿಗೆ ಸಿಲುಕಿದ ಕಾರಣದಿಂದ. ಸಿನಿಮಾ ರಂಗದಲ್ಲಿ ಎಡ ಬಿಡದೆ ಸೆಲಬ್ರೆಟಿಗಳಿಗೆ ಕಾಡುವ ವಿಚಾರ ಎಂದರೆ ಅದು ಡ್ರಗ್ಸ್ ವಿಚಾರ.ಇದೊಂದು ವಿಚಾರದಿಂದ ರಾಗಿಣಿ ಅವರು ಇಷ್ಟು ವರ್ಷಗಳಿಂದ ಸಂಪಾದಿಸಿ ಕೊಂಡು ಬಂದ ಗೌರವ ಎಲ್ಲವೂ ಕೂಡ ಮಣ್ಣು ಪಾಲು ಆಗುವಂತೆ ಮಾಡಿತ್ತು.

ಆದರೆ ಈ ನಟಿ ಈ ಪ್ರಕರಣದಿಂದ ಅದೆಷ್ಟ ವಶಾತ್ ಪಾರಾಗಿ ಜೈಲುವಾಸದಿಂದ ಹೊರಬಂದರು.ಈ ಪ್ರಕರಣ ಗಳಿಂದ ಹೊರ ಬಂದ ನಂತರ ಕೆಲ ಸಮಯ ತೆಗೆದುಕೊಂಡು ಈ ನಟಿ ಬಣ್ಣದ ಲೋಕಕ್ಕೆ ಮರಳಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ದೊಡ್ಡ ಪರದೆಯಲ್ಲಿ ಮತ್ತೆ ನೋಡಬಹುದು ಎಂಬ ಖುಷಿಯಲ್ಲಿ ಇದ್ದ ಅಭಿಮಾನಿಗಳಿಗೆ ಬಂಪರ್ ಅಪರ್ ನೀಡಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ನಟಿ ಎಲ್ಲಾ ಬೇಸರಗಳನ್ನು ಹಾಗೂ ಬುಗುಮಾನಗಳನ್ನು ತಮ್ಮ ಅಭಿಮಾನಿಗಳಿಗಾಗಿ ಬದಿಗಿಟ್ಟು ತಮ್ಮ ನೆಚ್ಚಿನ ಪ್ರೇಕ್ಷಕರನ್ನು ರಂಜಿಸಲು ನಿರ್ಧರಿಸಿದ್ದನ್ನು ನೋಡಿ ಎಲ್ಲರೂ ಕೂಡ ಮೆಚ್ಚುಗೆ ಸೂಚಿಸಿದ್ದರು. ಈಗ ರಾಗಿಣಿ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ.ಇದೀಗ ಒನ್ ಟು ಒನ್, ಕರ್ವ 3 ಜಾನಿವಾಕರ್ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಗ್ರೀನ್ ಸಿಗನಲ್ ನೀಡಿದ್ದಾರೆ . ಅದರೊಟ್ಟಿಗೆ, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ.

ಸಂತಾನಂ ಅವರು ಈ ಸಿನಿಮಾದ ಹೀರೋ, ನಾಯಕಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ.‘ಶಂಭೋ ಶಿವ ಶಂಕರ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ಸಾರಿ ಕರ್ಮ ರಿಟನರ್ಸ್ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ರಾಗಿಣಿ ಸಿನಿಮಾ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬಹಳ ಆಕ್ಟಿವ್ ಇದ್ದಾರೆ. ತಮ್ಮ ದಿನ ನಿತ್ಯದ ಕ್ರಮಗಳ ಪೋಟೋಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ಕಡಲ ತೀರದಲ್ಲಿ ತೆಗೆಸಿಕೊಂಡ ಭಾವಚಿತ್ರವನ್ನು ಹಾಗೂ ಹಾಡಿ ಕುಣಿದಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ತುಂಡು ಬಟ್ಟೆಯನ್ನು ತೊಟ್ಟು ಸೂರ್ಯಾಸ್ತಮದ ಸಮಯದಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಹಾಗೂ ಫೋಟೋಗಳು ಪಡ್ಡೆಹುಡುಗರ ನಿದ್ದೆ ಗೆಡೆಸಿದೆ. ಲೈಕ್ ಗಳಂತೂ ಹಿಡಿತಕ್ಕೆ ಸಿಗುತ್ತಿಲ್ಲ ಎಂದರೆ ತಪ್ಪಾಗಲಾರದು.

Get real time updates directly on you device, subscribe now.