ಕೆನ್ನೆಗೆ ಮುತ್ತುಕೊಡುವ ಸೀನ್ ನಲ್ಲಿ ಬಾಲಯ್ಯ ಮಾಡಿದ ಕೆಲಸಕ್ಕೆ ಜೋರಾಗಿ ಕಿರುಚಿದ್ದ ಮೀನಾ. ಏನಾಗಿತ್ತು ಗೊತ್ತೇ? ಮಿಸ್ ಆಗಿ ಬಾಲಯ್ಯ ಮಾಡಿದ್ದೇನು ಗೊತ್ತೇ??
ನಟಸಿಂಹಂ ಎಂದು ಕರೆಯಲ್ಪಡುವ ನಟ ನಂದಮೂರಿ ಬಾಲಕೃಷ್ಣ ಅವರು ಈಗ ಸಿನಿಮಾಗಳ ಜೊತೆಗೆ ಆಹಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಟಾಕ್ ಶೋ ಮೂಲಕ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಬಾಲಯ್ಯ ಅವರು ಆಹಾ ಒಟಿಟಿಯಲ್ಲಿ ಅನ್ ಸ್ಟಾಪಬಲ್ ಟಾಕ್ ಶೋ ಹೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಯುವ ನಾಯಕರಾದ ಅಡವಿ ಶೇಷ್ ಮತ್ತು ಶರ್ವಾನಂದ್ ಅತಿಥಿಗಳಾಗಿ ಬಂದಿದ್ದರು. ಆಗ ಬಾಲಯ್ಯ ಇಬ್ಬರು ಯುವ ಹೀರೋಗಳಿಗೆ ಒಂದು ಆಟವಾಡಿಸಿದರು. ಈ ಶೋಗಳಲ್ಲಿ, ಸಿನಿಮಾಗಳಲ್ಲಿ ನಾಯಕಿಯರ ಜೊತೆಗಿನ ಕಿಸ್ ಸೀನ್ ಗಳ ಬಗ್ಗೆ ಮಾತು ಶುರುವಾಯಿತು.
ಆಗ ಬಾಲಯ್ಯ ಅವರು ತಮ್ಮ ವೃತ್ತಿ ಜೀವನದಲ್ಲಿ ನಡೆದ ದೃಶ್ಯವೊಂದರ ಬಗ್ಗೆ ಮಾತನಾಡಿದರು. ಬಾಲಕೃಷ್ಣ ಅವರು 1994ರಲ್ಲಿ ಬೊಬ್ಬಿಲಿ ಸಿಂಹಂ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು, ಈ ಚಿತ್ರವನ್ನು ಕೋದಂಡರಾಮಿರೆಡ್ಡಿ ನಿರ್ದೇಶನ ಮಾಡಿದ್ದಾರೆ, ಎಂಎಂ ಕೀರವಾಣಿ ಅವರ ಸಂಗೀತ ನಿರ್ದೇಶನವಿತ್ತು, ಹಾಗು ನಟಿಯರಾದ ರೋಜಾ ಮತ್ತು ಮೀನಾ ಹೀರೋಯಿನ್ ಗಳಾಗಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ನಟಿ ಮೀನಾ ಅವರ ಜೊತೆಗಿನ ಅನುಭವದ ಬಗ್ಗೆ ಮಾತನಾಡಿದ್ದಾರೆ ಬಾಲಯ್ಯ. ವೇಮೂರು ಗುಡ್ಡದ ಮೇಲೆ ಬೊಬ್ಬಿಲಿ ಸಿಂಹಂ ಸಿನಿಮಾ ಮುಹೂರ್ತ ನಡೆದಿತ್ತು ಎಂದ ಬಾಲಯ್ಯ ಅವರು, ಪಕ್ಕದಲ್ಲೇ ರಜನಿಕಾಂತ್ ಮೀನಾ ಅವರ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು.
ಆ ಕಾರಣದಿಂದ ಬೊಬ್ಬಿಲಿ ಸಿಂಹಂ ಸಿನಿಮಾ ಮುಹೂರ್ತಕ್ಕೆ ಮೀನಾ ಅವರ ಜೊತೆಗೆ ರಜನಿಕಾಂತ್ ಕೂಡ ಬಂದಿದ್ದರು, ರಜನಿಕಾಂತ್ ಅವರು ಕಾರಣ ಬಾಲಯ್ಯ ಅವರ ಸಿನಿಮಾದಲ್ಲಿ ಮೀನಾ ಅವರು ಕೂಡ ನಾಯಕಿಯಾಗಿದ್ದರು. ಸಿನಿಮಾದಲ್ಲಿ ಮೊದಲ ಶಾಟ್ ಗೆ ರಜನಿಕಾಂತ್ ಕ್ಲಾಪ್ ಮಾಡಿದ್ದರು. ಆಗ ಸೀರಿಯಸ್ ಡೈಲಾಗ್ ಆಗಿ ಡೈಲಾಗ್ ಹೇಳಿ, ಆ ಡೈಲಾಗ್ ಮುಗಿದ ಮೇಲೆ ಮೀನಾ ಔಟ್ ಫೀಲ್ಡ್ ಇಂದ ಬಂದು ಕೆನ್ನೆಗೆ ಮುತ್ತು ಕೊಡಬೇಕು ಎಂದು ಹೇಳಿದ್ದರು. ಆ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಮೀನಾ ಅವರು ಇನ್ನು ಬಂದಿರಲಿಲ್ಲ ಎಂದು ಹೇಳಿ, ಹುಡುಕಿ, ಹಿಂದಿರುಗಿದಾಗ, ಓಡೋಡಿ ಬಂದಾಗ ಮೀನಾ ಅವರ ತುಟಿಗಳು ತಮ್ಮ ತುಟಿಗೆ ಬಹಳ ಹತ್ತಿರಕ್ಕೆ ಬಂದಿತು ಎಂದು ಹೇಳಿದ್ದಾರೆ, ಆಗ. ಏಕಾಏಕಿ ಮೀನಾ ಅವರು ಕಿರುಚಾಡಿದರು ಎಂದು ಹೇಳಿದ ಬಾಲಯ್ಯ ಅವರು, ಅದರಿಂದ ಮೀನಾ ಅವರು ಶಾಕ್ ಆದ ಘಟನೆಯನ್ನು ತಮಾಷೆಯಾಗಿ ಹೇಳಿದ್ದಾರೆ.