ಮಗಳು ಹುಟ್ಟಿದರೆ, ಏನು ಹೆಸರಿಡಬೇಕು ಎಂದು ಮೂರು ವರ್ಷದ ಹಿಂದೆಯೇ ಡಿಸೈಡ್ ಮಾಡಿದ್ದ ಅಲಿಯಾ ಭಟ್, ಅಂತಹ ವಿಚಿತ್ರ ಹೆಸರೇನು ಗೊತ್ತೇ??
ಬಾಲಿವುಡ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ, ಈ ವರ್ಷ ಮದುವೆಯಾದರು. ಮದುವೆ ನಂತರ ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಷನ್ ಗಳಲ್ಲಿ ಬ್ಯುಸಿ ಆಗಿ, ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಸುಮಾರು 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿತು. ಬ್ರಹ್ಮಾಸ್ತ್ರ ಡಾಕ್ಸಸ್ ಸಂತೋಷದಲ್ಲಿದ್ದ ಈ ಜೋಡಿ ಈಗ ತಮ್ಮ ಮನೆಗೆ, ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಟಿ ಆಲಿಯಾ ಭಟ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕಪೂರ್ ಕುಟುಂಬ ಮತ್ತು ಭಟ್ ಕುಟುಂಬ ಎರಡು ಸಹ ಹೊಸ ಅತಿಥಿಯ ಅಗಮನದಿಂದ ಬಹಳ ಸಂತೋಷವಾಗಿದೆ.. ಆಲಿಯಾ ಭಟ್ ಅವರು ಮಗುವಿಗೆ ಜನ್ಮ ನೀಡಿದ ಬಳಿಕ, ಇದೀಗ ಅವರ ಮಗುವಿಗೆ ಇಡುವ ಹೆಸರೇನು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಆಲಿಯಾ ಮತ್ತು ರಣಬೀರ್ ಜೋಡಿ ತಮ್ಮ ಮಗುವಿಗೆ ಯಾಕೆ ಹೆಸರಿಡಲು ಯೋಚನೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಮೂರು ವರ್ಷದ ಹಿಂದೆ ಆಲಿಯಾ ಭಟ್ ಅವರು ತಮ್ಮ ಮಗಳಿಗೆ ಇದೇ ಹೆಸರು ಇಡುವುದಾಗಿ, ಒಂದು ಹೆಸರನ್ನು ಸೆಲೆಕ್ಟ್ ಮಾಡಿದ್ದರು. ಮೂರು ವರ್ಷಗಳ ಹಿಂದೆ ರಣವೀರ್ ಸಿಂಗ್ ಅವರ ಗಲಿಬಾಯ್ ಸಿನಿಮಾ ಪ್ರೊಮೋಷನ್ ಗಾಗಿ ಆಲಿಯಾ ಭಟ್ ಒಂದು ಕಾರ್ಯಕ್ರಮಕ್ಕೆ ಹೋಗಿದ್ದರು.
ಅಲ್ಲಿ, ಪುಟ್ಟ ಹುಡುಗನೊಬ್ಬನಿಗೆ ಆಲಿಯಾ ಅವರ ಹೆಸರಿನ ಸ್ಪೆಲ್ಲಿಂಗ್ ಹೇಳುವಂತೆ ಕೇಳಿದರು, ಆಗ ಆ ಪುಟ್ಟ ಹುಡುಗ, ಎ.ಎಲ್.ಐ.ಎ ಎಂದು ಹೇಳುವ ಬದಲು ಎ.ಎಲ್.ಎಂ.ಎ.ಎ ಎಂದು ಹೇಳಿತು, ಆಗ ಪುಟ್ಟ ಹುಡುಗನ ಮುಗ್ಧತೆ ನೋಡಿ, ಆಲಿಯಾ ಭಟ್ ನಕ್ಕಿದ್ದರು, ನಂತರ ಬಾಲಕ ಹೇಳಿದ ಸ್ಪೆಲ್ಲಿಂಗ್ ಕೇಳಿ, ಅಲ್ಮಾ, ಈ ಹೆಸರು ನನಗೆ ತುಂಬಾ ಇಷ್ಟ ಆಯ್ತು. ಮುಂದೆ ನನ್ನ ಮಗಳಿಗೆ ಇದೇ ಹೆಸರು ಇಡುತ್ತೀನಿ ಎಂದಿದ್ದರು ಆಲಿಯಾ ಭಟ್. ಮೂರು ವರ್ಷದ ಹಿಂದೆ ಕಾರ್ಯಕ್ರಮದಲ್ಲಿ ಹೇಳಿದ್ದ ಹೆಸರನ್ನೇ ಅಲ್ಮಾ ಹೆಸರನ್ನೇ ತಮ್ಮ ಮಗುವಿಗೆ ಇಡುತ್ತಾರಾ ಎಂದು ಕಾದು ನೋಡಬೇಕಿದೆ.