Kannada News: ಅಲ್ಲೂ ಅರ್ಜುನ್ ಹಾಗೂ ಪುಷ್ಪ ಡೈರೆಕ್ಟರ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದ ರಶ್ಮಿಕಾ ಮಂದಣ್ಣ. ತಿರುಗೇಟು ನೀಡಲು ಸಿದ್ಧವಾಗಿದ್ದಾರೆಯೇ ಅಲ್ಲೂ??

80

Get real time updates directly on you device, subscribe now.

Kannada News: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾದ ಪುಷ್ಪ (Pushpa) ಎಲ್ಲಾ ದಾಖಲೆಗಳನ್ನು ಮುರಿಯಿತು. ಸುಕುಮಾರ್ (Sukumar) ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ನಾಯಕನಾಗಿ ನಟಿಸಿದ್ದಾರೆ. ಮೊದಲ ಸಲ ಮಾಸ್ ಹೀರೋ ಆಗಿ ನಟಿಸಿ ಪ್ರೇಕ್ಷಕರ ಮನಗೆದ್ದರು, ಅಲ್ಲು ಅರ್ಜುನ್. ಈ ಸಿನಿಮಾದಲ್ಲಿ ಪುಷ್ಪ.. ಪುಷ್ಪ ರಾಜ್.. ತಗ್ಗೆದೆ ಲೇ, ಡೈಲಾಗ್ ತುಂಬ ಫೇಮಸ್ ಆಯಿತು. ಪುಷ್ಪ ಸಿನಿಮಾ ರಿಲೀಸ್ ಆದ ಮೇಲೆ ಈ ಡೈಲಾಗ್ ಜನರ ಬಾಯಲ್ಲಿ ಸದ್ದು ಮಾಡಿತು. ಅಷ್ಟೇ ಅಲ್ಲದೇ ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು. ಎಲ್ಲಾ ಕಡೆ ಪುಷ್ಪ ಹವಾ ಇತ್ತು. ಪ್ರಸ್ತುತ ಸುಕುಮಾರ್ ಅವರು ಪುಷ್ಪ 2 ತಯಾರಿಯಲ್ಲಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದರು. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಂತರ ಹೆಚ್ಚು ಕ್ರೇಜ್ ಪಡೆದವರು ರಶ್ಮಿಕಾ. ಪುಷ್ಪ ಸಿನಿಮಾದಲ್ಲಿ ಸಾಮಿ ಸಾಮಿ ಹಾಡಿನಲ್ಲಿ ರಶ್ಮಿಕಾ ಅವರ ಸ್ಟೆಪ್ ನೋಡಿ ಎಲ್ಲಾ ಹುಡುಗರು ಫಿದಾ ಆಗಿದ್ದರು. ಪುಷ್ಪ ಇಂದ ನಟಿ ರಶ್ಮಿಕಾ ಪ್ಯಾನ್ ಇಂಡಿಯಾ ಹೀರೋಯಿನ್ ಆದರು. ನಂತರ ರಶ್ಮಿಕಾ ಅವರು ಬಾಲಿವುಡ್‌ನಲ್ಲಿ 7 ಬಿಗ್ ಸಿನಿಮಾಗಳಿಗೆ ಸೈನ್ ಮಾಡಿದರು. ಆದರೆ ಇತ್ತೀಚೆಗೆ ಪುಷ್ಪ 2 ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಈ ಸಮಯದಲ್ಲಿ ರಶ್ಮಿಕಾ ಅವರಿಗೆ ಸಂಬಂಧಿಸಿದ ಹಾಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಪುಷ್ಪ ಸಿನಿಮಾ ದೊಡ್ಡ ಹಿಟ್ ಆದ ನಂತರ ರಶ್ಮಿಕಾ ಮಂದಣ್ಣ ಅವರು ಪುಷ್ಪ 2 ಸಿನಿಮಾಗೆ ದುಪ್ಪಟ್ಟು ಸಂಭಾವನೆ ಕೇಳಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೀಗಿರುವಾಗ ನಿರ್ದೇಶಕ ಸುಕುಮಾರ್ ಅವರು ಸಿನಿಮಾದ ಅರ್ಧದಲ್ಲಿ ಅವರ ಪಾತ್ರ ಸಾಯುವ ಹಾಗೆ ಬರೆದಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆಷ್ಟೇ ಅಲ್ಲದೆ ಆ ಜಾಗಕ್ಕೆ ಬಾಲಿವುಡ್ ನಟಿಯೊಬ್ಬರನ್ನು ಕರೆತರುವಂತೆ ಕಥೆಯನ್ನೇ ಬದಲಾಯಿಸಿದ್ದಾರಂತೆ, ಇದರಿಂದ ರಶ್ಮಿಕಾ ಅವರ ಕೆರಿಯರ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಚಿತ್ರವು ಹೆಚ್ಚು ಜನಪ್ರಿಯತೆಯನ್ನು ಗಳಿಸುವುದು ಗ್ಯಾರಂಟಿ. ದುರಾಸೆಯಿಂದ ಹೆಚ್ಚು ಸಂಭಾವನೆ ಕೇಳಿ ಅದರಿಂದ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಟಿಯ ಪಾತ್ರದಲ್ಲಿ ನಟಿಸುವ ಅವಕಾಶ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ರಶ್ಮಿಕಾ ಅವರ ಅಭಿಮಾನಿಗಳದ್ದು.

Get real time updates directly on you device, subscribe now.