ಒಂದು ಕಡೆ ಅಪ್ಪು ರವರಿಗೆ ಕರ್ನಾಟಕ ರತ್ನ ಸಿಕ್ಕರೆ, ಆ ಕಡೆ ಜರ್ಮನಿ ಯಲ್ಲಿ ಅಪ್ಪು ಮಗಳಿಗೆ ನೀಡಿದ ಸರ್ಪ್ರೈಸ್ ಏನು ಗೊತ್ತೇ??

348

Get real time updates directly on you device, subscribe now.

ಪುನೀತ್ ರಾಜ್ ಕುಮಾರ್ ಈ ಪ್ರಪಂಚವನ್ನು ದೈಹಿಕವಾಗಿ ಬಿಟ್ಟು ಹೋಗಿ 1 ವರ್ಷ ಕಳೆಯಿತು. ಆಕ್ಟೊಬರ್ 29ರ ಆ ದಿನ ಯಾಕಾದರೂ ಬಂದಿತು ಎಂದು ಅಭಿಮಾನಿಗಳು ಕಣ್ಣೀರು ಹಾಕಿದರು. ಇನ್ನು ದೊಡ್ಮನೆ ಮಂದಿಯ ನೋವಿನ ಬಗ್ಗೆ ಹೇಳಲು ಪದಗಳು ಸಾಕಾಗುವುದಿಲ್ಲ. ಅಪ್ಪು ಅವರು ಆ ಇಡೀ ಕುಟುಂಬದಲ್ಲಿ ಎಲ್ಲರು ತುಂಬಾ ಪ್ರೀತಿಸುವ, ಎಲ್ಲರಿಂದ ಅತಿಹೆಚ್ಚು ಪ್ರೀತಿ ಪಡೆದ ಕುಟುಂಬ ಕಿರಿಯ ಮಗ ಆಗಿದ್ದರು ಅಪ್ಪು. ಅಂತಹ ಅಪ್ಪು ಅವರಿಗೆ ಇಷ್ಟು ಬೇಗ ಈ ರೀತಿ ಆಗುತ್ತದೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಆ ದುರ್ಘಟನೆ ನಡೆದೇ ಹೋಯಿತು..

ಅಪ್ಪು ಅವರು ಅಗಲಿ ಒಂದು ವರ್ಷದ ಸಮಯಕ್ಕೆ ಗಂಧದಗುಡಿ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಕ್ಟೊಬರ್ 28ರಂದು ಬಿಡುಗಡೆ ಮಾಡಿದರು. ಮರುದಿನ ಅಪ್ಪು ಅವರ ಒಂದು ವರ್ಷದ ಪುಣ್ಯ ಸ್ಮರಣೆ ಇತ್ತು. ಆ ದಿನದಂದು ಇಡೀ ದೊಡ್ಮನೆ ಕುಟುಂಬ ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಅವರಿಗೆ ಪೂಜೆ ಸಲ್ಲಿಸಿದರು, ಇಡೀ ದೊಡ್ಮನೆ ಕುಟುಂಬ ಅಪ್ಪು ಅವರ ನೆನಪಿನಲ್ಲಿ ಕಣ್ಣೀರು ಹಾಕುತ್ತಲೇ ಪೂಜೆ ಮಾಡಿದರು. ಅಶ್ವಿನಿ ಅವರು ಕೂಡ ಬಹಳ ಭಾವುಕರಾಗಿದ್ದರು. ಆ ದಿನ ಎಲ್ಲರೂ ಬಂದಿದ್ದರು. ಆದರೆ ಅಪ್ಪು ಅವರ ಮೊದಲ ಮಗಳು ಧೃತಿ ಬಂದಿರಲಿಲ್ಲ.

ವಿದೇಶದಲ್ಲಿ ಧೃತಿ ಅವರು ಓದುತ್ತಿರುವ ಕಾರಣ, ಅವರ ಓದಿಗೆ ತೊಂದರೆ ಆಗುವುದು ಬೇಡ ಎಂದು ಧೃತಿ ಅವರಿಗೆ ಶಿವಣ್ಣ ಅವರೇ ಬರುವುದು ಬೇಡ ಎಂದಿದ್ದರು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪನ ಪರವಾಗಿ ಅಮ್ಮ ಸ್ವೀಕರಿಸುತ್ತಿರುವುದನ್ನು ನೋಡಲು ಧೃತಿ ಅವರಿಂದ ಆಗಲಿಲ್ಲ, ಆದರೆ ಜರ್ಮನಿಯಲ್ಲೇ ಧೃತಿ ಅವರಿಗೆ ಸರ್ಪ್ರೈಸ್ ಸಿಕ್ಕಿದೆ, ಅಲ್ಲಿನ ಟಿವಿ ಫಲಕಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವ ಫಲಕಗಳು ಸಿಕ್ಕಿದ್ದು ಅದನ್ನು ನೋಡಿ ಧೃತಿ ಅವರು ಸರ್ಪ್ರೈಸ್ ಆಗಿದ್ದಾರೆ, ಹಾಗೂ ಸಂತೋಷ ಪಟ್ಟಿದ್ದಾರೆ. ಜರ್ಮನಿಯಲ್ಲಿ ಸಹ ಅಪ್ಪು ಅವರ ಜನಪ್ರಿಯತೆ ಇಷ್ಟರ ಮಟ್ಟಿಗೆ ಇರುವುದು ಸಂತೋಷದ ವಿಚಾರವೇ ಆಗಿದೆ.

Get real time updates directly on you device, subscribe now.