ನಿಜಕ್ಕೂ ಕಾಂತಾರ 300 ಕೋಟಿ ಕಲೆಕ್ಷನ್ ಮಾಡಿದೆಯೇ? ಅದೆಲ್ಲ ಸುಳ್ಳಾ? ಅಸಲಿ ಲೆಕ್ಕಾಚಾರದ ಬಗ್ಗೆ ಮಾತನಾಡಿದ ರಿಷಬ್ ಹೇಳಿದ್ದೇನು ಗೊತ್ತೇ??
ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಇಂದಿಗೂ ನಂಬರ್ 1 ಸಿನಿಮಾ ಆಗಿ ಮುಂದುವರೆಯುತ್ತಿದೆ. ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ, ಕಾಂತಾರ ಸಿನಿಮಾದ ಹವಾ ಮುಗಿಯುವುದಿಲ್ಲ, ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಕಥೆ, ಸಂಭಾಷಣೆ, ಅಭಿನಯ ಎಲ್ಲವನ್ನು ಜನರು ಇಷ್ಟಪಟ್ಟಿದ್ದಾರೆ. ಸಿನಿಮಾ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ, ಸಿಂಗಾರ ಸಿರಿಯೇ ಮತ್ತು ವಾರಹ ರೂಪಂ ಹಾಡಿನ ಟ್ರಾನ್ಸ್ ಇಂದ ಹೊರಬರಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದಾರೆ. ಚಿತ್ರರಂಗದ ಸ್ಟಾರ್ ನಟನಟಿಯರು, ತೆಲುಗಿನ ನಟ ಪ್ರಭಾಸ್, ರಾಣಾ ದಗ್ಗುಬಾಟಿ, ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಎಲ್ಲರು ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ ಮೆಚ್ಚಿಕೊಂಡು ಟ್ವೀಟ್ ಮಾಡಿ, ಮರುದಿನ ರಿಷಬ್ ಅವರನ್ನು ಮನೆಗೆ ಕರೆಸಿ ಮಾತನಾಡಿದ್ದಾರೆ, ರಿಷಬ್ ಅವರಿಗೆ ಸನ್ಮಾನ ಸಹ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದರು.
ಹೀಗೆ ಎಲ್ಲರೂ ಮೆಚ್ಚಿಕೊಂಡಿರುವ ಕಾಂತಾರ ಸಿನಿಮಾ 300 ಕೋಟಿ ಹಣಗಳಿಕೆ ಮಾಡಿದೆ ಎನ್ನುವ ಸುದ್ದಿಯೊಂದು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಅದರ ಬಗ್ಗೆ ಸ್ವತಃ ರಿಷಬ್ ಅವರು ಮಾತನಾಡಿದ್ದಾರೆ, ಧರ್ಮಸ್ಥಳಕ್ಕೆ ರಿಷಬ್ ಶೆಟ್ಟಿ ಅವರು ಭೇಟಿ ನೀಡಿದಾಗ, ತುಳುವಿನಲ್ಲಿ ಸಿನಿಮಾ ಬಿಡುಗಡೆ ಆಗುವ ಬಗ್ಗೆ ಮತ್ತು 300 ಕೋಟಿ ಕಲೆಕ್ಷನ್ ಬಗ್ಗಗೆ ಮಾತನಾಡಿದ್ದು, “ತುಳು ಡಬ್ಬಿಂಗ್ ಕೆಲಸಗಳು ನಡೀತಾ ಇದೆ. ಎಲ್ಲಾನೂ ಚೆನ್ನಾಗಿ ಆಗ್ತಿದೆ. 30 ದಿನ ಥುಯೇಟರ್ ನಲ್ಲಿ ಪ್ರದರ್ಶನಗೊಂಡು ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತಿದೆ. ನೀವು ಈಗ ಕೇಳಿರುವ ಎಲ್ಲಾ ವಿಷಯಗಳು ನಿಜ. ತುಳು ವರ್ಷನ್ ಬಿಡುಗಡೆ ಬಗ್ಗೆ ನಿರ್ಮಾಪಕರು ನಿರ್ಧಾರ ತೆಗೆದುಕೊಳ್ಳುತ್ತಾರೆ..” ಎಂದು ಹೇಳಿದ್ದಾರೆ ರಿಷಬ್ ಶೆಟ್ಟಿ.