Lakshana: ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡ ವೈಷ್ಣವಿ ಗೆ ಗರಂ ಆಗಿ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು, ಯಾಕೆ ಗೊತ್ತೇ?? ವೈಷ್ಣವಿ ಮಾಡಿದ ತಪ್ಪೇನು ಗೊತ್ತೇ??
Lakshana: ಕಲರ್ಸ್ ಕನ್ನಡ (Colors Kannada) ವಾಹಿನಿಯ ಲಕ್ಷಣ ಧಾರವಾಹಿಯ ಕ್ರೇಜ್ ವೈಷ್ಣವಿ (Vaishnavi Gowda) ಅವರು ಬಂದ ನಂತರ ಜಾಸ್ತಿಯಾಗಿದೆ. ಅಗ್ನಿಸಾಕ್ಷಿ (Agnisakshi) ಧಾರಾವಾಹಿಯ ಮೂಲಕ ನಟನೆ ಶುರು ಮಾಡಿದ ವೈಷ್ಣವಿ ಅವರು, ಸನ್ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದರು. ಅಗ್ನಿಸಾಕ್ಷಿ ಧಾರವಾಹಿ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಅಂದ್ರೆ ಧಾರವಾಹಿ ನೋಡುವವರು ಮನೆಗೆ ಮಗಳು ಅಂದ್ರೆ ವೈಷ್ಣವಿ ಹಾಗಿರಬೇಕು, ಹೆಂಡತಿ ಅಂದ್ರೆ ವೈಷ್ಣವಿ ಥರ ಇರಬೇಕು ಎನ್ನುತ್ತಿದ್ದರು. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಹಲವು ವರ್ಷಗಳ ಕಾಲ ನಾಯಕಿಯಾಗಿ ನಟಿಸಿದರು ವೈಷ್ಣವಿ. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 8 ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.
ಬಿಗ್ ಬಾಸ್ ಮನೆಯಲ್ಲಿದ್ದಾಗ ವೈಷ್ಣವಿ ಅವರ ನಿಜ ಜೀವನದ ವ್ಯಕ್ತಿತ್ವವನ್ನು ಸಹ ಜನರು ತುಂಬಾ ಇಷ್ಟಪಟ್ಟಿದ್ದರು. ಬಿಗ್ ಬಾಸ್ ನಂತರ ವೈಷ್ಣವಿ ಅವರು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು, ತಮ್ಮದೇ ಯೂಟ್ಯೂಬ್ ಚಾನೆಲ್ ಶುರು ಮಾಡಿ, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ, ಅನೇಕ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ವೈಷ್ಣವಿ ಅವರು ಲಕ್ಷಣ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ಲಕ್ಷಣ ಧಾರವಾಹಿಯಲ್ಲಿ ವೈಷ್ಣವಿ ಅವರು ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಅವರನ್ನು ಮುದ್ದಾಗಿ ಹೀರೋಯಿನ್ ರೀತಿ ನೋಡಿದ್ದ ಜನಕ್ಕೆ ಈಗ ಅವರನ್ನು ಹೀಗೆ ವಿಲ್ಲನ್ ಆಗು ನೋಡಲು ಇಷ್ಟವಾಗುತ್ತಿಲ್ಲ. ಇದನ್ನು ಓದಿ.. Kannada News: ಸೋಶಿಯಲ್ ಮೀಡಿಯಾ ಅನ್ನು ಶೇಕ್ ಮಾಡಿದ ವಿಚಾರಕ್ಕೆ ಶಿವಣ್ಣ ಪ್ರತಿಕ್ರಿಯೆ: ಮೊಮ್ಮನಾಗಿ ಅಪ್ಪು ಬಂದ್ರ?? ಮಗುವಿನ ತಂದೆ ಹೇಳಿದ್ದೇನು ಗೊತ್ತೇ??
ಮುದ್ದಾದ ನಟಿಯನ್ನು ಹೀಗೆ ವಿಲ್ಲನ್ ಆಗಿ ಮಾಡಿರುವುದಕ್ಕೆ ಲಕ್ಷಣ ಸೀರಿಯಲ್ ನಾಯಕ ಜಗನ್ನಾಥ್ ಚಂದ್ರಶೇಖರ್ (Jagannath Chandrashekar) ಅವರ ಮೇಲೆ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಣ ಧಾರಾವಾಹಿ ವಿರುದ್ಧ ಕಮೆಂಟ್ಸ್ ಗಳು ಹರಿದು ಬರುತ್ತಿವೆ. “ಭೂಪತಿ ಮತ್ತು ವೈಷ್ಣವಿ ಸ್ನೇಹಿತರು. ಭೂಪತಿನೇ ವೈಷ್ಣವಿನ ಕರೆಸಿರುವುದು. ಶ್ವೇತಾಗೆ ಬುದ್ಧಿ ಕಲಿಸುವುದಕ್ಕೆ..”, “ಈಗ ವೈಷ್ಣವಿಯವರಿಗೆ ಬೇರೆ ಕೆಲಸ ಇಲ್ಲ. ಅದಿಕ್ಕೆ ಬಂದಿದ್ದಾಳೆ ಅಷ್ಟೆ…. “, “ನಮ್ಮ ರಿಯಾಕ್ಷನ್ ಏನು ಗೊತ್ತಾ… ಇಂತ ಕಚಡ ಧಾರಾವಾಹಿ ನೋಡೋ ಜನಕ್ಕೆ ಬುದ್ಧಿ ಇಲ್ಲ..”, “ಮೊದಲೇ ನೂರ್ ತರ ಕಥೆ ಈಗ ಇದು ಬೇರೆ ಪಾಪ ನಮ್ಮ ನಕ್ಷತ್ರ. ಏನು ಇಲ್ಲಿ ಟ್ವಿಸ್ಟ್‌ಗೆ ಒಂದು ಅರ್ಥ ಇರಬೇಕು ವೈಷ್ಣವಿ ಬಂದಿರೋದು ಯಾಕೆ ಅಂತ ಗೊತ್ತಿಲ್ಲ ಅದು ನಿಜವಾದ ಅವರ ಪಾತ್ರದಲ್ಲಿ ಬಂದಿರೋದು ಇಷ್ಟ ಆಗ್ತಿಲ್ಲ..”, “ಮುಂದಿನ ಕಥೆ ಡೈರೆಕ್ಟರ್‌ಗೆ ಗೊತ್ತಿಲ್ಲ ಅದಿಕ್ಕೆ ವೈಷ್ಣವಿ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರು ಸ್ನೇಹಿತರು ಇರಬೇಕು ಮನೆ ಮಂದಿ ಮುಂದೆ ನಾಟಕ ಮಾಡುತ್ತಿದ್ದಾರೆ.. ಇದನ್ನು ಓದಿ.. Kannada News: ದರ್ಶನ್ ಕೈಲಿ ಪ್ರಮೋಷನ್ ಮಾಡಿಸಿ ಖುಷಿಯಲ್ಲಿದ್ದ ಜೈದ್ ಖಾನ್ ಗೆ ಕರೆ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಯಶ್. ಖಡಕ್ ಆಗಿ ವಾರ್ನಿಂಗ್ ಏನು ಗೊತ್ತೇ??