Puneeth: ಸಮಾರಂಭ ನಡೆಯುತ್ತಿರುವಾಗ ಅಪ್ಪು ಮೇಲಿನ ಅಭಿಮಾನಕ್ಕೆ ಅನುಶ್ರೀ ಮಾಡಿದ್ದೇನು ಗೊತ್ತೇ?? ಇದು ನಿಜವಾದ ಅಭಿಮಾನ ಅಂದ್ರೆ, ಇವರೇ ಟಾಪ್ ಅಪ್ಪು ಫ್ಯಾನ್ ಬಿಡಿ.

131

Get real time updates directly on you device, subscribe now.

Puneeth: ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಸರಳತೆಗೆ ಹೆಚ್ಚು ಪ್ರಸಿದ್ಧಿ ಹೊಂದಿರುವವರು. ಅವರ ಬಗ್ಗೆ ಎಷ್ಟು ಹೇಳುತ್ತಾ ಹೋದರು ಕಡಿಮೆಯೇ. ಅಪ್ಪು (Appu) ಅವರಲ್ಲಿ ಇರುವ ಒಳ್ಳೆಯತನ ಎಲ್ಲರಿಗೂ ಬರುವುದಿಲ್ಲ. ಅದನ್ನು ತಿಳಿಸುವ ಹಲವು ಘಟನೆಗಳ ಬಗ್ಗೆ ನಾವು ಹಲವರು ಹೇಳುವುದನ್ನು ಕೇಳಿದ್ದೇವೆ. ಖ್ಯಾತ ನಿರೂಪಕಿ ಅನುಶ್ರೀ (Anushree) ಅವರು ಅಪ್ಪು ಅವರ ದೊಡ್ಡ ಅಭಿಮಾನಿ ಎಂದು ನಮಗೆಲ್ಲ ಗೊತ್ತಿದೆ, ಹಲವು ವೇದಿಕೆಗಳಲ್ಲಿ ಅನುಶ್ರೀ ಅವರು ಇದನ್ನು ಹೇಳಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಲೋಗೋದಲ್ಲಿ ಸಹ ಅಪ್ಪು ಅವರ ಫೋಟೋ ಹಾಕಿದ್ದಾರೆ. ಜೀಕನ್ನಡ ವಾಹಿನಿಯ ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಫೇವರೇಟ್ ಆಂಕರ್ ಅವಾರ್ಡ್ ಸಿಕ್ಕಿತು.

ಅದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಅನುಶ್ರೀ ಅವರಿಗೆ ನೀಡಿದರು. ಅನುಶ್ರೀ ತಾವು ಪಕ್ಕಾ ಅಪ್ಪು ಅಭಿಮಾನಿ ಎಂದು ಹಲವು ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಾರೆ, ರಿಯಾಲಿಟಿ ಶೋಗಳಲ್ಲಿ ಹಲವು ಬಾರಿ ಅಪ್ಪು ಅವರ ಹೆಸರನ್ನು ಹೇಳಿ ಕಣ್ಣೀರು ಹಾಕುತ್ತಾರೆ. ಅಪ್ಪು ಅವರ ಕುರಿತಾದ ಯಾವುದೇ ಕಾರ್ಯಕ್ರಮ ಇದ್ದರು ಕೂಡ ಅನುಶ್ರೀ ಅವರು ಅದನ್ನು ಮಿಸ್ ಮಾಡುವುದಿಲ್ಲ. ಗಂಧದಗುಡಿ (Gandhadagudi) ಪ್ರಮೋಷನ್ ಭಾಗವಾಗಿದ್ದ ಫ್ಲೇವರ್ಸ್ ಆಫ್ ಗಂಧದಗುಡಿಯಲ್ಲಿ ಅನುಶ್ರೀ ಅವರು ಭಾಗವಹಿಸಿದ್ದರು. ಪುನೀತ ಪರ್ವ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಇದನ್ನು ಓದಿ.. Kannada News: ಕಷ್ಟವಾದ್ರೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ವಂಶಿಕನ ಎತ್ತಿಕೊಂಡ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.

ಮೊನ್ನೆ ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಅನುಶ್ರೀ ಒಬ್ಬ ಅಭಿಮಾನಿಯಾಗಿ ಬಂದಿದ್ದರು. ಅಂದು ಕಾರ್ಯಕ್ರಮ ನಡೆಯುವಾಗ, ಮಳೆ ಬರಲು ಶುರುವಾಯಿತು, ಗಣ್ಯರು ಸಹ ಮಳೆಯಲ್ಲಿ ನೆನೆಯುವ ಹಾಗೆ ಆಯಿತು, ಹಾಗಾಗಿ ಕಾರ್ಯಕ್ರಮವನ್ನು ತರಾತುರಿಯಲ್ಲಿ ಬೇಗ ಮುಗಿಸಿದರು ಈ ಕಾರ್ಯಾಕ್ರಮದಲ್ಲಿ ಮಳೆ ಬರುತ್ತಿದ್ದರು ಸಹ, ಅನುಶ್ರೀ ಅವರು ಅಲ್ಲಿಯೇ ಇದ್ದರು. ಮಳೆ ಬರುತ್ತಿದೆ ಎಂದು ಅಲ್ಲಿಂದ ಹೊರಡದೆ, ಮಳೆಯಲ್ಲೂ ಅಲ್ಲೇ ಇದ್ದ ಅನುಶ್ರೀ ನಿಜಕ್ಕೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Puneeth: ತಂದೆಯ ಸಿನೆಮಾ ನೋಡುವ ವೇಳೆ ಅಪ್ಪು ಹಿರಿಯ ಮಗಳಿಗೆ ಆಗಿದ್ದೇನು ? ಕಣ್ಣೀರಿಟ್ಟ ಧೃತಿ ಅರ್ಧಕ್ಕೆ ಹೋಗಿದ್ದೇಕೆ ?

Get real time updates directly on you device, subscribe now.