Bigg Boss Kannada: ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ವಿರುದ್ಧ ಮೇಲೆ ಬಹಿರಂಗ ಹೊರಹಾಕಿದ ನೇಹಾ ಗೌಡ. ಹೇಳಿದ್ದೇನು ಗೊತ್ತೇ??

139

Get real time updates directly on you device, subscribe now.

Bigg Boss Kannada: ಬಿಗ್ ಬಾಸ್ ಮನೆಯಿಂದ 6ನೇ ಎಲಿಮಿನೇಟ್ ಆಗಿರುವವರು ನೆ ನೇಹಾ ಗೌಡ (Neha Gowda). ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿ ಪಡೆದಿದ್ದ ನೇಹಾ ಅವರು, ನಂತರ ತಮಿಳು ಸೀರಿಯಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮತ್ಯಾವುದೆ ಕನ್ನಡ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ನಂತರ ಅವರು ರಾಜ ರಾಣಿ ಶೋ ಮೂಲಕ ರಿಯಾಲಿಟಿ ಶೋಗೆ ಬಂದರು, ಶೋನಲ್ಲಿ ತಮ್ಮ ಪತಿ ಚಂದನ್ ಅವರೊಡನೆ ಭಾಗವಹಿಸಿ ರಾಜ ರಾಣಿ ಶೋ ಮೊದಲ ಸೀಸನ್ ವಿನ್ನರ್ ಆದರು ನೇಹಾ ಗೌಡ. ತಮಿಳು ಧಾರವಾಹಿಗಳಲ್ಲಿ ಸಹ ನಟಿಸುತ್ತಿದ್ದ ನೇಹಾ, ಕನ್ನಡದಲ್ಲಿ ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟರು.

ನೇಹಾ ಅವರು ಬಿಗ್ ಬಾಸ್ (Bigg Boss) ಗೆ ಬರುತ್ತಾರೆ ಎಂದು ಕೆಲವು ವರ್ಷಗಳಿಂದ ಹೇಳಲಾಗುತ್ತಿತ್ತು, ಫೈನಲಿ ಈ ವರ್ಷ ಬಿಗ್ ಮನೆಗೆ ಹೋದರು ನೇಹಾ, ಇವರು ತುಂಬಾ ಸ್ಟ್ರಾಂಗ್ ಸ್ಪರ್ಧಿ, ಬಹಳ ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ 6ನೇ ವಾರ ಎಲಿಮಿನೇಟ್ ಆಗಿ ಬಂದಿದ್ದಾರೆ ನೇಹಾ ಗೌಡ. ಬಿಗ್ ಬಾಸ್ ಮನೆಯಿಯಿಂದ ಹೊರಬಂದ ಬಳಿಕ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ನೇಹಾ ಅವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಸಾನ್ಯಾ ಅಯ್ಯರ್ (Sanya Iyer) ಮತ್ತು ರೂಪೇಶ್ ಶೆಟ್ಟಿ (Roopesh Shetty) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನೇಹಾ ಗೌಡ. ನೇಹಾ ಅವರು ಬೇಸರ ಮಾಡಿಕೊಂಡಿರುವುದು ನಾಮಿನೇಷನ್ ವಿಚಾರಕ್ಕೆ. ಸಾನ್ಯಾ ಅವರು ಓಪನ್ ನಾಮಿನೇಷನ್ ನಡೆಯುವಾಗ, ತಮ್ಮನ್ನು ನಾಮಿನೇಟ್ ಮಾಡಿ ಕೊಟ್ಟ ಕಾರಣದ ಬಗ್ಗೆ ನೇಹಾ ಮಾತನಾಡಿದ್ದಾರೆ. ಇದನ್ನು ಓದಿ.. Puneeth: ಸಮಾರಂಭ ನಡೆಯುತ್ತಿರುವಾಗ ಅಪ್ಪು ಮೇಲಿನ ಅಭಿಮಾನಕ್ಕೆ ಅನುಶ್ರೀ ಮಾಡಿದ್ದೇನು ಗೊತ್ತೇ?? ಇದು ನಿಜವಾದ ಅಭಿಮಾನ ಅಂದ್ರೆ, ಇವರೇ ಟಾಪ್ ಅಪ್ಪು ಫ್ಯಾನ್ ಬಿಡಿ.

“ಓಪನ್ ನಾಮಿನೇಷನ್ ನಡೆಯುವಾಗ, ಸಾನ್ಯಾ ನನ್ನ ಹೆಸರು ಹೇಳಿ, ನೇಹಾ ಅವರು ಇನ್ನು ಕಂಫರ್ಟ್ ಜೋನ್ ಇಂದ ಆಚೆ ಬಂದಿಲ್ಲ, individuality ಆಚೆ ಬಂದಿಲ್ಲ ಅಂತ ಹೇಳ್ತಾರೆ, ಅವರು ಏನ್ ಎಕ್ಸ್ಪೆಕ್ಟ್ ಮಾಡ್ತಿದ್ದಾರೆ ಅಂತ ಡೈರೆಕ್ಟ್ ಆಗಿ ನನ್ ಹತ್ರ ಬಂದು ಮಾತನಾಡಬಹುದಿತ್ತು, ಆದರೆ ಅದನ್ನ ಅವರು ಮಾಡಲಿಲ್ಲ. ಪರವಾಗಿಲ್ಲ. ಅಲ್ಲಿ ಅರುಣ್ ಸಾಗರ್ (Arun Sagar) ಅವರು ತುಂಬಾ ಮನರಂಜನೆ ಕೊಡ್ತಾ ಇದ್ದಾರೆ. ಅವರನ್ನ ನೋಡಿ ಬೇರೆಯವರು ಕೂಡ ಸಣ್ಣದಾಗಿ ಮನರಂಜನೇ ಕೊಡೋದಕ್ಕೆ ಶುರು ಮಾಡಿದ್ದಕ್ಕೆ, ಅರುಣ್ ಸಾಗರ್ ಅವರು ಇಲ್ಲದೆ ಊಹೆ ಮಾಡ್ಕೊಳ್ಳಿ, ಒಂದು ವೇಳೆ ಪ್ರಶಾಂತ್ ಸಂಬರ್ಗಿ (Prashanth Sambargi) ಅವರನ್ನ ನೋಡಿ, ಅವರ ಥರ ಜಗಳ ಮಾಡಬೇಕು ಅಂದುಕೊಂಡರೆ, ಆ ಸೆಟ್ ಆಫ್ ಜನರ ಮೇಲೆ ಡಿಪೆಂಡ್ ಆಗುತ್ತೆ. ರೂಪೇಶ್ ಶೆಟ್ಟಿ ಅವರು ಹೇಳಿದ್ದಾರೆ, ಅವರದ್ದೊಂದು ಫೇಮ್ ಇದೆ, ಆದರೆ ಅದು ಇಲ್ಲಿ ಕಾಣಿಸ್ತಾ ಇಲ್ಲ ಅಂತ, ಏನ್ ಕಾಣಿಸಬೇಕಿತ್ತು ಅಂತ ನನಗೆ ಅರ್ಥ ಆಗಲ್ಲ..” ಎಂದು ಹೇಳಿ ರೂಪೇಶ್ ಸಾನ್ಯಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನೇಹಾ. ಇದನ್ನು ಓದಿ.. Kannada News: ಕಷ್ಟವಾದ್ರೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ವಂಶಿಕನ ಎತ್ತಿಕೊಂಡ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.

Get real time updates directly on you device, subscribe now.