Kannada News: ಕಷ್ಟವಾದ್ರೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ವಂಶಿಕನ ಎತ್ತಿಕೊಂಡ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.

38

Get real time updates directly on you device, subscribe now.

Kannada News: ದೊಡ್ಮನೆ ಕುಟುಂಬ ಅಂದ್ರೆ ಸರಳತೆಗೆ ಇನ್ನೊಂದು ಹೆಸರು. ಅಣ್ಣಾವ್ರು (Dr Rajkumar), ಪಾರ್ವತಮ್ಮನವರು, ಶಿವಣ್ಣ (Shivarajkumar) ಅವರು, ರಾಘಣ್ಣ ಅವರು (Raghavendra Rajkhmar), ಅಪ್ಪು (Appu) ಅವರು, ಎಲ್ಲರೂ ದೊಡ್ಡ ಮನೆತನದವರಾಗಿದ್ದರು ಸಹ, ಸದಾ ಸರಳವಾಗಿ, ಸಾಮಾನ್ಯರ ಹಾಗೆ, ಜನರ ಜೊತೆಗೆ ಬೆರೆಯುತ್ತಿದ್ದರು. ದೊಡ್ಮನೆಯ ಸೊಸೆಯರು ಕೂಡ ಅದೇ ರೀತಿ, ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಇದಕ್ಕೆ ಒಂದು ಉದಾಹರಣೆ. ಅಪ್ಪು ಅವರು ಇದ್ದಾಗ ಎಷ್ಟು ಸರಳವಾಗಿ ಇರುತ್ತಿದ್ದರು, ಮಕ್ಕಳ ಜೊತೆಗೆ ತಾವು ಮಗುವಾಗುತ್ತಿದ್ದರು ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಅಪ್ಪು ಅವರಿಗೆ ಮಕ್ಕಳು ಅಂದ್ರೆ ವಿಶೇಷ ಪ್ರೀತಿ..

ಅಶ್ವಿನಿ ಅವರು ಕೂಡ ಅದೇ ರೀತಿ, ಗಂಡನಿಗೆ ತಕ್ಕ ಹೆಂಡತಿ ಆಗಿದ್ದರು. ಇತ್ತೀಚಿಗೆ ಅಪ್ಪು ಅವರ ಅಭಿಮಾನಿ ಒಬ್ಬರು ತಮ್ಮ ಮುದ್ದು ಮಗಳನ್ನು ಕರೆದುಕೊಂಡು ಅಶ್ವಿನಿ ಅವರನ್ನು ಭೇಟಿ ಮಾಡಲು ಹೋಗಿದ್ದಾಗ, ಎಷ್ಟು ಪ್ರೀತಿಯಿಂದ ಮಾತನಾಡಿಸಿದ್ದರು ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿತ್ತು. ಅಶ್ವಿನಿ ಅವರು ಸಹ ಪುನೀತ್ ಅವರ ಹಾಗೆಯೇ ಜನರ ಜೊತೆಗೆ ಬಹಳ ಆತ್ಮೀಯವಾಗಿ ಸಾಮಾನ್ಯರಂತೆ ಇರುತ್ತಾರೆ. ಅದರಲ್ಲೂ ಮಕ್ಕಳು ಎಂದರೆ ವಿಶೇಷ ಪ್ರೀತಿ ತೋರಿಸುತ್ತಾರೆ. ಇದೀಗ ಅಶ್ವಿನಿ ಅವರು ಕಿರುತೆರೆ ಸ್ಟಾರ್ ಆಗಿರುವ ಮುದ್ದು ಮಗು ವಂಶಿಕಾಳನ್ನು ಎತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಓದಿ.. India vs Bangladesh: ಅರ್ಧಶತಕ, ರನ್ ಔಟ್ ಮಾಡಿದ್ದು ರಾಹುಲ್, ಕೊಹ್ಲಿ ಖಡಕ್ ಆಟ, ಅರ್ಶದೀಪ್ ಭರ್ಜರಿ ಬೌಲಿಂಗ್, ಆದರೆ ಪಂದ್ಯ ಶ್ರೇಷ್ಠ ಪಡೆದಿದ್ದು ಯಾರು ಗೊತ್ತೇ??

ವಂಶಿಕಾ (Vanshika) ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ, ಕರ್ನಾಟಕದ ಜನತೆ ಇಂದ ಹಿಡಿದು ಎಲ್ಲಾ ಸೆಲೆಬ್ರಿಟಿಗಳವರೆಗು ಎಲ್ಲರ ಫೇವರೆಟ್ ವಂಶಿಕಾ, ಈ ಮುದ್ದು ಮಗುವಿನ ಮಾತಿಗೆ ಮನಸೋಲದವರಿಲ್ಲ. ಚಿಕ್ಕ ವಯಸ್ಸಿನಲ್ಲಿ ಆಂಕರ್ ಸಹ ಆಗಿ ಹೆಸರು ಮಾಡಿರುವ, ಪಟಾಕಿ ವಂಶಿಕಾಗೆ ಅಪ್ಪು ಅವರನ್ನು ಮೀಟ್ ಮಾಡಬೇಕೆಂದು ಆಸೆ ಇತ್ತು, ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಅಪ್ಪು ಅವರ ಪತ್ನಿ ಅಶ್ವಿನಿ ಮೇಡಂ ಅವರನ್ನು ವಂಶಿಕಾ ಭೇಟಿಯಾಗಿದ್ದು, ಅಶ್ವಿನಿ ಅವರು ಸ್ವಲ್ಪ ಕಷ್ಟವಾದರು, ವಂಶಿಕಾಳನ್ನು ಎತ್ತಿಕೊಂಡಿರುವ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಈ ಕ್ಯೂಟ್ ವಿಡಿಯೋ ಅನ್ನು ನೀವು ಕೂಡ ಒಮ್ಮೆ ನೋಡಿ.. ಇದನ್ನು ಓದಿ..

Get real time updates directly on you device, subscribe now.