India vs Bangladesh: ಅರ್ಧಶತಕ, ರನ್ ಔಟ್ ಮಾಡಿದ್ದು ರಾಹುಲ್, ಕೊಹ್ಲಿ ಖಡಕ್ ಆಟ, ಅರ್ಶದೀಪ್ ಭರ್ಜರಿ ಬೌಲಿಂಗ್, ಆದರೆ ಪಂದ್ಯ ಶ್ರೇಷ್ಠ ಪಡೆದಿದ್ದು ಯಾರು ಗೊತ್ತೇ??

28

Get real time updates directly on you device, subscribe now.

India vs Bangladesh: ನಿನ್ನೆ ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ ಪಂದ್ಯ ರೋಚಕವಾಗಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ಪಡೆ ಶಕೀಬ್ ಅಲ್ ಹಸನ್ ನಾಯಕನಾಗಿರುವ ಬಾಂಗ್ಲಾದೇಶ್ ತಂಡವನ್ನು ಸೋಲಿಸಿತು. ಇದರಿಂದ ಅಂಕಪಟ್ಟಿಯಲ್ಲಿ ಎರಡು ಅಂಕ ಪಡೆದು, ಅಗ್ರಸ್ಥಾನಕ್ಕೆ ಏರಿದೆ ಭಾರತ (Team India). ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿತು. ವೈಫಲ್ಯದಿಂದ ಬಳಲುತ್ತಿದ್ದ ಕೆ.ಎಲ್.ರಾಹುಲ್ (K L Rahul) ಅವರು ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಮರಳಿ ಬಂದುರುವುದು ಭಾರತ ತಂಡಕ್ಕೆ ಒಳ್ಳೆಯ ವಿಚಾರ ಆಗಿದೆ.

ಇನ್ನು ವಿರಾಟ್ ಕೋಹ್ಲಿ (Virat Kohli) ಅವರು ನಿಧಾನನಾಗಿ ಆರಂಭ ಮಾಡಿದರು ಸಹ, 44 ಎಸೆತಗಳಲ್ಲಿ 62 ರನ್ ಗಳಿಸಿ, ಪಂದ್ಯ ಮುಗಿಯುವವರೆಗೂ ಅಜೇಯರಾಗಿ ಉಳಿದರು. ವಿರಾಟ್ ಕೋಹ್ಲಿ ಅವರ ಮತ್ತೊಂದು ಭರ್ಜರಿ ಇನ್ನಿಂಗ್ಸ್ ಇದಾಗಿತ್ತು. ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಸಹ ನಿನ್ನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್ ವಿಭಾಗಕ್ಕೆ ಬಂದರೆ, ಆರ್ಷದೀಪ್ ಸಿಂಗ್ (Arshdeep Singh), ಮೊಹಮ್ಮದ್ ಶಮಿ (Mohammad Shami) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಮೂವರು ಉತ್ತಮ ಬೌಲಿಂಗ್ ಮಾಡಿ ವಿಕೆಟ್ಸ್ ಪಡೆದರು. ಕೊನೆಯ ಓವರ್ ನಲ್ಲಿ ಅರ್ಷದೀಪ್ ಸಿಂಗ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು ಎಂದು ಹೇಳಬಹುದು. ಒಟ್ಟಿನಲ್ಲಿ ಭಾರತ ತಂಡ ನೀಡಿದ 184 ರನ್ ಗಳ ಗುರಿಯನ್ನು ಬೆನ್ನಟ್ಟಿ ಗೆಲ್ಲುವು ಸಾಧಿಸಲು ಬಾಂಗ್ಲಾದೇಶ್ ತಂಡಕ್ಕೆ ಸಾಧ್ಯವಾಗಲಿಲ್ಲ.

ಕೊನೆಯ ಓವರ್ ನ ಕೊನೆಯ ಬಾಲ್ ನಲ್ಲಿ ಭಾರತ ತಂಡಕ್ಕೆ 5 ರನ್ ಗಳ ಜಯ ಸಿಕ್ಕಿತು. ನಿನ್ನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದವರು ವಿರಾಟ್ ಕೋಹ್ಲಿ, ಒಳ್ಳೆಯ ಪಂದ್ಯ ಆಗಿತ್ತು, ನಾವೆಂದುಕೊಂಡ ಹಾಗೆ ಇರಲಿಲ್ಲ. ಪಂದ್ಯ ಬಹಳ ಕ್ಲೋಸ್ ಆಗಿತ್ತು. ನಾನು ಕ್ರೀಸ್ ಗೆ ಹೋದಾಗ ಪ್ರೆಶರ್ ಇತ್ತು, ಆದರೆ ಅದು ನನ್ನನ್ನು ತಪ್ಪು ಮಾಡುವ ಹಾಗೆ ಮಾಡಬಾರದು ಎಂದು ನಿರ್ಧಾರ ಮಾಡಿಕೊಂಡಿದ್ದೆ. ಆಸ್ಟ್ರೇಲಿಯಾದಲ್ಲಿ ವರ್ಲ್ಡ್ ಕಪ್ ನಡೆಯುತ್ತದೆ ಎಂದು ತಿಳಿದಾಗ ನನಗೆ ಬಹಳ ಸಂತೋಷ ಆಗಿತ್ತು. ನನಗೆ ಗೊತ್ತಿರುವ ಒಳ್ಳೆಯ ಶಾಟ್ಸ್ ಹೊಡೆಯುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಈ ಗ್ರೌಂಡ್ ನಲ್ಲಿ ಆಡುವುದು ನನಗೆ ತುಂಬಾ ಇಷ್ಟ, ನಮ್ಮ ಮನೆಯ ಹಾಗೆ ಅನ್ನಿಸುತ್ತದೆ..ಎಂದಿದ್ದಾರೆ ಕಿಂಗ್ ಕೋಹ್ಲಿ.

Get real time updates directly on you device, subscribe now.