ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಸಮಂತಾ ರವರಿಗೆ ಅದರಿಂದ ಎಷ್ಟು ಕೋಟಿ ನಷ್ಟವಾಗುತ್ತಿದೆ ಎಂದು ತಿಳಿದರೆ ಬೆಚ್ಚಿ ಬೀಳ್ತಿರಾ.
ನಟಿ ಸಮಂತಾ ಅವರು ಈಗ ಮಯೋಸೈಟಿಸ್ ಎನ್ನುವ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಂತಾ ಅವರ ಆರೋಗ್ಯದ ಬಗ್ಗೆ ತಿಳಿದು ಅವರ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದಾರೆ. ಇತ್ತ ವೈದ್ಯರು ತಿಳಿಸಿರುವ ಪ್ರಕಾರ, ಇದೊಂದು ಮಾರಣಾಂತಿಕ ಕಾಯಿಲೆ ಆಗಿದ್ದು, ಸರಿಯಾದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ, ಹೆಚ್ಚಿನ ಅಪಾಯ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ, ಇದನ್ನು ಕೇಳಿ ಸಮಂತಾ ಅವರ ಅಭಿಮಾನಿಗಳು ಇನ್ನಷ್ಟು ಕಂಗಾಲಾಗಿದ್ದಾರೆ. ಇನ್ನು ಸಮಂತಾ ಅವರ ಸಿನಿಮಾಗಳು ಏನಾಗುತ್ತದೆ ಎನ್ನುವ ಚಿಂತೆ ಸಹ ಶುರುವಾಗಿದೆ. ಲೇಡಿ ಓರಿಯಂಟಡ್ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗುತ್ತಿರುವ ಯಶೋಧ, ನವೆಂಬರ್ 11ರಂದು ಅದ್ಧೂರಿಯಾಗಿ ದೇಶಾದ್ಯಂತ ತೆರೆಕಾಣುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಯಶೋಧ ಸಿನಿಮಾದ ಸಬ್ಜೆಕ್ಟ್ ಯೂನಿವರ್ಸಲ್ ಆಗಿರುವುದರಿಂದ ಎಲ್ಲರನ್ನು ಈ ಸಿನಿಮಾ ತಲುಪುತ್ತದೆ, ಹಿಟ್ ಆಗುತ್ತದೆ ಎನ್ನುವ ನಂಬಿಕೆ ಚಿತ್ರತಂಡಕ್ಕೆ ಇದೆ. ಯಶೋದ ಸಿನಿಮಾ ಮಾತ್ರವಲ್ಲ, ಗುಣಶೇಕರ್ ಅವರು ನಿರ್ದೇಶನ ಮಾಡಿರುವ ಶಾಕುಂತಲಂ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಯಾವುದೇ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಪ್ರೊಮೋಷನ್ ಚೆನ್ನಾಗಿ ನಡೆಯದೆ ಹೋದರೆ, ಫ್ಲಾಪ್ ಆಗುತ್ತದೆ, ಈಗ ಸಮಂತಾ ಅವರ ಸಿನಿಮಾಗಳಿಗೂ ಅದೇ ಭಯ ಇದೆ. ನವೆಂಬರ್ 11 ರಂದು ಯಶೋದ ಸಿನಿಮಾ ತೆರೆಕಾಣುತ್ತಿದೆ, ಆದರೆ ಸಮಂತಾ ಅವರು ಪ್ರಮೋಷನ್ ಗಳಿಗೆ ಬರುವ ಸ್ಥಿತಿಯಲ್ಲಿಲ್ಲ. ಇದರಿಂದ ಸಿನಿಮಾಗೆ ತೊಂದರೆ ಆಗಬಹುದು ಎಂದು ಹೇಳಲಾಗುತ್ತಿದೆ. ಸೌತ್ ಇಂಡಿಯಾದಲ್ಲಿ ಮಾತ್ರವಲ್ಲದೆ, ಬಾಲಿವುಡ್ ನಲ್ಲೂ ಎರಡು ಪ್ರಾಜೆಕ್ಟ್ ಒಪ್ಪಿಕೊಂದಿದ್ದಾರೆ ಸಮಂತಾ, ಅದರಲ್ಲಿ ಒಂದನ್ನು ನಟಿ ತಾಪ್ಸಿ ಪನ್ನು ನಿರ್ಮಾಣ ಮಾಡುತ್ತಿದ್ದಾರೆ, ಮತ್ತೊಂದು ವೆಬ್ ಸೀರಿಸ್ ಆಗಿದೆ.
ಹೀಗೆ ಸಿನಿಮಾಗಳು ಮತ್ತು ವೆಬ್ ಸೀರೀಸ್ ಗಳನ್ನು ಒಪ್ಪಿಕೊಂಡಿರುವ ನಟಿ ಸಮಂತಾ ಅವರು ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಶಾಕ್ ನೀಡಿದೆ. ಸಮಂತಾ ಅವರು ಮತ್ತೆ ಯಾವಾಗ ಚಿತ್ರೀಕರಣಕ್ಕೆ ಬರುತ್ತಾರೆ ಎನ್ನುವ ಅನುಮಾನ ಸಹ ಶುರುವಾಗಿದೆ. ಕಲಾವಿದರು ಸಿನಿಮಾದಲ್ಲಿ ನಟಿಸಿ ಪ್ರೊಮೋಷನ್ ಗೆ ಬರದೆ ಹೋದರೆ, ನಿರ್ಮಾಪಕರಿಗೆ ಹಣ ನಷ್ಟವಾಗುತ್ತದೆ, ಅದೇ ರೀತಿ ಸಿನಿಮಾ ಒಪ್ಪಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಹೋದರೆ ಕೂಡ ಸಮಸ್ಯೆ ಆಗುತ್ತದೆ. ನಿರ್ಮಾಪಕನಿಗೆ ಕೋಟಿಗಟ್ಟಲೆ ಹಣ ನಷ್ಟವಾಗುತ್ತದೆ. ಇದೀಗ ಸಮಂತಾ ಅವರನ್ನು ನಂಬಿ ಹಣ ಹಾಕಿರುವ ನಿರ್ಮಾಪಕರಿಗು ಕೂಡ ಅವರಿಲ್ಲದೆ ಕೋಟಿ ಕೋಟಿ ಹಣ ನಷ್ಟವಾಗುತ್ತಿದ್ದು, ಸಮಂತಾ ಅವರು ಯಾವಾಗ ಚೇತರಿಸಿಕೊಂಡು ಬರುತ್ತಾರೆ ಎಂದು ಕಾಯುತ್ತಿದ್ದಾರೆ ನಿರ್ಮಾಪಕರು.