Kannada Bigg boss: ಅದೊಂದು ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಭಯ ಪಡ್ತಿದ್ರು ನೇಹಾ ಗೌಡ. ಯಾಕೆ ಅಂತೇ ಗೊತ್ತೇ??
Kannada Bigg boss: ಬಿಗ್ ಬಾಸ್ ಮನೆಯಿಂದ ಐದನೇ ವಾರ ಎಲಿಮಿನೇಟ್ ಆಗಿರುವ ಸ್ಪರ್ಧಿ ನೇಹಾ ಗೌಡ (Neha Gowda). ಇವರು ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿಯಿಂದ ಮತ್ತು ರಾಜ ರಾಣಿ ಶೋ ಇಂದ ಗುರುತಿಸಿಕೊಂಡಿದ್ದರು. ಬಿಬಿಕೆ9 (BBK9)ಗೆ ಸ್ಪರ್ಧಿಯಾಗಿ ಬಂದ ನೇಹಾ ಅವರು, ಹೆಚ್ಚಾಗಿ ಜಗಳಗಳನ್ನು ಮಾಡಿಕೊಳ್ಳದೆ, ಎಲ್ಲರ ಜೊತೆಗು ಬೆರೆಯದೇ, ತಮ್ಮ ಪಾಡಿಗೆ ತಾವು, ಕೆಲವು ಜನರ ಜೊತೆಗೆ ಮಾತ್ರ ಬೆರೆತು ತಮಾಷೆ ಮಾಡುತ್ತಾ, ಎಂಜಾಯ್ ಮಾಡುತ್ತಾ ಇದ್ದರು. ಟಾಸ್ಕ್ ಗಳಲ್ಲಿ ನೇಹಾ ಅವರಿಗೆ ಪ್ರೂವ್ ಮಾಡಿಕೊಳ್ಳಲು ಆಗಲಿಲ್ಲ, ಈ ಎಲ್ಲಾ ಕಾರಣಗಳಿಂದ ನೇಹಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ಕೆಲವು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಪರ್ಧಿಗಳ ಬಗ್ಗೆ ಮತ್ತು ಮನೆಯಲ್ಲಿದ್ದ ಅನುಭವದ ಬಗ್ಗೆ ನೇಹಾ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ., ಹೀಗೆ ಒಂದು ಸಂದರ್ಶನದಲ್ಲಿ ತಮಗೆ ಯಾವ ವಿಷಯಕ್ಕೆ ಬಿಗ್ ಬಾಸ್ (Bigg Boss) ಮನೆಯಲ್ಲಿ ಭಯ ಆಗುತ್ತಿತ್ತು ಎಂದು ನೇಹಾ ಅವರಿಗೆ ಕೇಳಿದ್ದು, ಅದಕ್ಕೆ ನೇಹಾ ಅವರು ಕೊಟ್ಟ ಉತ್ತರ ಹೀಗಿತ್ತು, “ನಾನು ಓಪನ್ ನಾಮಿನೇಷನ್ ಅಂದಾಗ, ಇಷ್ಟು ಬೇಗ ಯಾಕೆ ಕೊಟ್ಟಪ್ಪ ಅಂದುಕೊಳ್ತಾ ಇದ್ದೆ. ಅಷ್ಟರಲ್ಲಿ ನೇಹಾ ನಾಮಿನೇಟ್ ಮಾಡುವ ಎರಡು ಹೆಸರುಗಳನ್ನ ಹೇಳಿ ಅಂತ ಹೇಳಿದ್ರು. ಆಗ ಸ್ವಲ್ಪ ನನಗೆ ಭಯ ಆಗಿತ್ತು. ಅದು ಬಿಟ್ಟರೆ ಕಳಪೆ ಉತ್ತಮ ಕೊಡುವಾಗ ಭಯ ಆಗ್ತಿತ್ತು.. ಇದನ್ನು ಓದಿ.. ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಸಮಂತಾ ರವರಿಗೆ ಅದರಿಂದ ಎಷ್ಟು ಕೋಟಿ ನಷ್ಟವಾಗುತ್ತಿದೆ ಎಂದು ತಿಳಿದರೆ ಬೆಚ್ಚಿ ಬೀಳ್ತಿರಾ.

ಹೊರಗಡೆ ನಾವು ತಪ್ಪು ಮಾಡಿದ್ರೆ ಶಿಕ್ಷೆ ಸಿಗೋದು ತಡ ಆಗಬಹುದು. ಒಳ್ಳೆಯ ಕೆಲಸ ಮಾಡಿದರೆ ಪ್ರಶಂಸೆ ಸಿಗೋದು ತಡ ಆಗಬಹುದು. ಆದರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಇನ್ಸ್ಟಂಟ್ ಆಗಿ ಸಿಗುತ್ತೆ, ತಪ್ಪು ಮಾಡಿದ್ರೆ ಅದೇ ವಾರ ಶಿಕ್ಷೆ, ಚೆನ್ನಾಗಿ ಪರ್ಫಾರ್ಮ್ ಮಾಡಿದ್ರೆ ಅಲ್ಲೇ ಪ್ರತಿಫಲ ಕೂಡ ಸಿಗ್ತಾ ಇತ್ತು. ಅದು ಒಳ್ಳೆಯದು..” ಎಂದು ಹೇಳಿದ್ದಾರೆ ನೇಹಾ. ಈ ರೀತಿ ತಮ್ಮ ಭಯ ಮತ್ತು ಇಷ್ಟ ಎರಡರ ಬಗ್ಗೆ ಕೂಡ ನೇಹಾ (Neha Ramakrishna) ಅವರು ತಿಳಿಸಿದ್ದಾರೆ. ಬಹುಶಃ ನೇಹಾ ಅವರು ಸ್ಪರ್ಧೆಯನ್ನು ಸ್ಪರ್ಧೆಯ ಹಾಗೆ ಆಡಿ, ಹೆಚ್ಚು ಸೈಲೆಂಟ್ ಆಗಿರದೆ ಇದ್ದಿದ್ದರೆ, ಇನ್ನಷ್ಟು ದಿನಗಳು ಬಿಗ್ ಬಾಸ್ ಮನೆಯಲ್ಲಿ ಇರುತ್ತಿದ್ದರು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. ಅಪ್ಪು ಇಲ್ಲದ ದೀಪಾವಳಿಯನ್ನು ಅಶ್ವಿನಿ ಮೇಡಂ ಹೇಗೆ ಆಚರಿಸಿದ್ದಾರೆ ಗೊತ್ತೇ?? ದೀಪಾವಳಿ ಹಬ್ಬದ ಸಮಯ ಹೇಗಿತ್ತು ಗೊತ್ತೇ??