ಬಾಲಿವುಡ್ ಆನ್ ಶೇಕ್ ಮಾಡಿದ್ದ ಐಶ್ವರ್ಯ ರೈ ರವರ ಜೀವನದಲ್ಲಿ ಎಷ್ಟೆಲ್ಲ ವಿವಾದಗಳು ಇದ್ದಾವೆ ಗೊತ್ತೇ?? ಇಷ್ಟೊಂದು ವಿವಾದಿತ ನಟಿನಾ??

124

Get real time updates directly on you device, subscribe now.

ತಮ್ಮ ಸೌಂದರ್ಯದಿಂದ ಕೋಟ್ಯಾಂತರ ಹುಡುಗರ ಮನಸ್ಸನ್ನು ಗೆದ್ದ ನಟಿ ಐಶ್ವರ್ಯ ರೈ, ವಿಶ್ವಸುಂದರಿ ಪಟ್ಟ ಗಳಿಸಿದವರು. ಮೊದಲಿಗೆ ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ಐಶ್ವರ್ಯ ರೈ ಅವರು, ನಂತರ ಆರ್ಕಿಟೆಕ್ಟ್ ಆಗಬೇಕು ಎಂದುಕೊಂಡರು. ಕೊನೆಗೆ ಅವರು ಮಾಡೆಲ್ ಆದರು. ತಮ್ಮ ಫೋಟೋಗಳಲ್ಲಿ ಸೌಂದರ್ಯವನ್ನು ವ್ಯಕ್ತಪಡಿಸುವ ಮೂಲಕ ಸುಂದರಿ ಎಂದು ಹೆಸರು ಮಾಡಿದ ಐಶ್ವರ್ಯ ಅವರು, ನಂತರ ಬೆಳ್ಳಿತೆರೆಯಲ್ಲಿ ತಮ್ಮ ನಟನೆಯಿಂದ ಇನ್ನು ದೊಡ್ಡ ಮಟ್ಟದಲ್ಲಿ ಹೆಸರು ಪಡೆದರು, ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದರು. ಕಣ್ಣಲ್ಲಿ ಪ್ರೀತಿ ಹೇಳಬಲ್ಲ ಹೀರೋಯಿನ್ ಐಶ್ವರ್ಯ ರವಿ. ದೇವದಾಸ್, ಧೂಮ್2, ಜೋಧಾ ಅಕ್ಬರ್, ಮೋಹಬ್ಬತೆ, ಗುರು, ಗುಜಾರಿಶ್, ತಾಲ್, ಜೀನ್ಸ್, ರೋಬೋ, ರಾವಣ್, ಕಂಡುಕೊಂಡೆನ್, ಕಂಡುಕೊಂಡೆನ್, ಹೀಗೆ ಬಹಳಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಐಶ್ವರ್ಯ ರೈ. ಅಭಿಷೇಕ್ ಬಚ್ಚನ್ ಅವರೊಡನೆ ಧೂಮ್2 ಸಿನಿಮಾದಲ್ಲಿ ನಟಿಸುವಾಗ, ಅವರೊಡನೇ ಪ್ರೀತಿಯಲ್ಲಿ ಬಿದ್ದರು ಐಶ್ವರ್ಯ.

2007ರ ಜನವರಿ 14ರಂದು ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರೊಡನೆ ವಿವಾಹವಾಗುತ್ತಾರೆ ಎನ್ನುವ ವಿಷಯವನ್ನು ಅಮಿತಾಭ್ ಬಚ್ಚನ್ ಅವರು ಬಹಿರಂಗಪಡಿಸಿದರು. ಅದೇ ವರ್ಷ ಏಪ್ರಿಲ್ 16ರಂದು, ಅಮಿತಾಭ್ ಬಚ್ಚನ್ ಅವರ ಸ್ವಂತ ಮನೆ, ಪ್ರತೀಕ್ಷದಲ್ಲಿ, ಆಪ್ತರ ಸಮ್ಮುಖದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆ ನಡೆಯಿತು. 2011ರ ನವೆಂಬರ್ 16ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು ಐಶ್ವರ್ಯ, ಇಬರ ಮಗಳ ಹೆಸರು ಆರಾಧ್ಯ. ಮದುವೆ ಮತ್ತು ಮಗುವಾದ ಬಳಿಕ ಐಶ್ವರ್ಯ ರೈ ಅವರು ನಟನೆ ಮಾಡುವುದನ್ನು ಕಡಿಮೆ ಮಾಡಿದರು. ಫ್ಯಾಮಿಲಿ, ಮಗು, ಗಂಡ ಎಂದು ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಶುರು ಮಾಡಿದರು ಐಶ್. ಇವರು ಅನೇಕ ಸಿನಿಮಾಗಳು, ಜಾಹೀರಾತುಗಳು, ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳು ಇವುಗಳಲ್ಲಿ ಕಾಣಿಸಿಕೊಳ್ಳುವುದನ್ನು ಹಲವು ಬಾರಿ ನೋಡಿದ್ದೇವೆ, ಇದೆಲ್ಲಾ ಐಶ್ವರ್ಯ ಅವರ ಬಗ್ಗೆ ಒಂದು ಭಾಗವಾದರೆ, ಮತ್ತೊಂದು ಭಾಗದಲ್ಲಿ ಅವರ ಬಗ್ಗೆ ಅತಿಹೆಚ್ಚು ವಿವಾದಗಳು ಕೇಳುಬಂದಿವೆ..

ವಿಶ್ವಸುಂದರಿ ಪಟ್ಟ ಗೆದ್ದ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಯದಿಂದ ಈಗಿನವರೆಗೂ ಐಶ್ವರ್ಯ ರೈ ಅವರ ಜರ್ನಿ ಸುಲಭವಾಗಿ ಸಾಗಲಿಲ್ಲ. ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡಬಂದಿವೆ. ಇವರು ಹೆಚ್ಚು ಜನಪ್ರಿಯತೆ ಗಳಿಸಲು, ವಿವಾದಗಳು ಕೂಡ ಒಂದು ಕಾರಣ ಎಂದು ಹೇಳಬಹುದು. ಮೊದಲಿಗೆ ಅತ್ತೆ ಜಯಾ ಬಚ್ಚನ್ ಅವರೊಡನೆ ಐಶ್ವರ್ಯ ರೈ ಅವರ ಹೊಂದಾಣಿಕೆ ಅಷ್ಟಕ್ಕಷ್ಟೇ ಎನ್ನುವ ಮಾತು ಕೇಳಿಬಂದಿತ್ತು, ಅಷ್ಟೇ ಅಲ್ಲದೆ, ಅಭಿಷೇಕ್ ಬಚ್ಚನ್ ಅವರಿಗೆ ವಿಚ್ಛೇದನ ಕೊಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಕೆರಿಯರ್ ಆರಂಭದಲ್ಲಿ ನಟ ಸಲ್ಮಾನ್ ಅವರ ಜೊತೆಗಿನ ರಿಲೇಶನ್ಷಿಪ್ ಬಗ್ಗೆ ಭಾರಿ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೆ, ನಟ ವಿವೇಕ್ ಒಬೆರಾಯ್ ಜೊತೆಗಿನ ಪ್ರೇಮಪುರಾಣ, ಪನಾಮ ಕೇಸ್, ಸೋನಂ ಕಪೂರ್ ಅವರೊಡನೇ ಜಗಳ, ಮನಿಷ ಕೊಯಿರಾಲ ಅವರೊಡನೆ ಜಗಳ, ನಟ ಶಾರುಖ್ ಖಾನ್ ಅವರೊಡನೆ ಜಗಳ.. ಒಂದು ಕಾಲದಲ್ಲಿ ಹೀಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು ಐಶ್ವರ್ಯ ರೈ.

Get real time updates directly on you device, subscribe now.