ಅಪ್ಪು ಇಲ್ಲದ ದೀಪಾವಳಿಯನ್ನು ಅಶ್ವಿನಿ ಮೇಡಂ ಹೇಗೆ ಆಚರಿಸಿದ್ದಾರೆ ಗೊತ್ತೇ?? ದೀಪಾವಳಿ ಹಬ್ಬದ ಸಮಯ ಹೇಗಿತ್ತು ಗೊತ್ತೇ??
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರ ಪ್ರೀತಿಯ ಮನೆಮಗ ಅಪ್ಪು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಬಹಳ ಪ್ರೀತಿಸಿ ಮದುವೆಯಾದ ಅಶ್ವಿನಿ ಅವರನ್ನು ಅಪ್ಪು ಅವರು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಪ್ಪು ಅಶ್ವಿನಿ ಜೋಡಿಯನ್ನು ಒಟ್ಟಾಗಿ ನೋಡುವುದೇ ಒಂದು ರೀತಿ ಸಂತೋಷ ಆಗುತ್ತಿತ್ತು, ಅಪ್ಪು ಅವರು ಇದ್ದಾಗ ಹೆಂಡತಿ ಮತ್ತು ಮಕ್ಕಳ ಜೊತೆಗೆ ಬಹುತೇಕ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದರು.
ಆದರೆ ಈಗ ಅಪ್ಪು ಅವರು ಇಲ್ಲ, ಈಗಷ್ಟೇ ದೀಪಾವಳಿ ಹಬ್ಬ ನಡೆಯಿತು, ಅಪ್ಪು ಅವರು ಇದ್ದಾಗ, ಕುಟುಂಬದ ಎಲ್ಲರೂ ಜೊತೆಯಾಗಿ ಸೇರಿ, ಪಟಾಕಿ ಹಚ್ಚಿ, ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ ಈಗ ಅಪ್ಪು ಅವರು ಇಲ್ಲದ ಕಾರಣ, ದೀಪಾವಳಿ ಹಬ್ಬವನ್ನು ಈ ವರ್ಷ ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರು ಮಗಳ ಜೊತೆಗೆ ಮತ್ತು ಕುಟುಂಬದ ಜೊತೆಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದ್ದಾರೆ. ಅಶ್ವಿನಿ ಮೇಡಂ ಅವರು ದೊಡ್ಮನೆ ಕುಟುಂಬದ ಜೊತೆಗೆ ಸೇರಿ, ಪಟಾಕಿ ಹೊಡೆದು ಹಬ್ಬ ಆಚರಿಸಿದ್ದಾರೆ.
ಅಶ್ವಿನಿ ಮೇಡಂ ದೊಡ್ಡ ಪಟಾಕಿಗಳನ್ನು ಹೊಡೆದಿಲ್ಲ, ಬದಲಾಗಿ ಸಣ್ಣ ಪಟಾಕಿಗಳು, ಸುರ್ಸುರ್ ಬತ್ತಿ, ಭೂ ಚಕ್ರ, ಹೂಕುಂಡ ಇಂತಹ ಸಣ್ಣ ಪಟಾಕಿಗಳನ್ನು ಹೊಡೆದು ಹಬ್ಬದ ಆಚರಣೆ ಮಾಡಿದ್ದಾರೆ. ಹಬ್ಬ ಮುಗಿದು, ಗಂಧದಗುಡಿ ಬಿಡುಗಡೆಯಾದ ಬಳಿಕ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಇಟ್ಟುಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮತ್ತು ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಅಗಮಿಸಲಿದ್ದಾರೆ.