ಅಪ್ಪು ರವರು ಅಶ್ವಿನಿ ರವರನ್ನು ಪ್ರೀತಿ ಮಾಡಿದ ವಿಷಯ ತಿಳಿದಾಗ ಮದುವೆಗೆ ಒಪ್ಪಿಕೊಳ್ಳದ ಅಶ್ವಿನಿ ಅವರ ಕುಟುಂಬ. ಕೊನೆಗೆ ಏನಾಗಿತ್ತು ಗೊತ್ತೇ??

91

Get real time updates directly on you device, subscribe now.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತು ಅವರ ಪತ್ನಿ ಅಶ್ವಿನಿ ಅವರು 21 ವರ್ಷಗಳ ಕಾಲ ಬಹಳ ಸಂತೋಷದ ದಾಂಪತ್ಯ ಜೀವನ ನಡೆಸಿದ್ದರು. ಇವರಿಬ್ಬರು ಆದರ್ಶ ದಂಪತಿಗಳಗಿದ್ದಾರು. ಬದುಕಿದರೆ ಈ ಜೋಡಿಯ ರೀತಿ ಬದುಕಬೇಕು ಎಂದು ಎಲ್ಲರಿಗು ಅನ್ನಿಸುತ್ತಿತ್ತು. ಈ ದಂಪತಿಗೆ ಧೃತಿ ಮತ್ತು ವಂದಿತ ಇಬ್ಬರು ಮಕ್ಕಳು. ಅಪ್ಪು ಮತ್ತು ಅಶ್ವಿನಿ ದಂಪತಿ ಎಲ್ಲೇ ಹೋದರು ಜೊತಯಾಗಿ ಹೋಗುತ್ತಿದ್ದರು, ಬಹಳ ಪ್ರೀತಿಯಿಂದ ಇರುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಅಪ್ಪು ಅವರ ಅಗಲಿಕೆ ಇವರ ಕುಟುಂಬಕ್ಕೆ, ಅಶ್ವಿನಿ ಅವರಿಗೆ ಮತ್ತು ಮಕ್ಕಳಿಗೆ ಮರೆಯಲಾಗದ ನೋವಾಗಿದೆ.

ಅಪ್ಪು ಅಶ್ವಿನಿ ದಂಪತಿ ಅವರದ್ದು ಪ್ರೇಮ ವಿವಾಹ ಎಂದು ನಮಗೆ ಗೊತ್ತಿದೆ. ಇವರಿಬ್ಬರ ಲವ್ ಸ್ಟೋರಿ ರೋಚಕವಾಗಿದೆ ಎಂದು ಹೇಳಬಹುದು. ಯಾಕೆಂದರೆ, ಅಪ್ಪು ಅವರು ಮತ್ತು ಅಶ್ವಿನಿ ಅವರು ಭೇಟಿಯಾಗಿದ್ದು ಕಾಮನ್ ಫ್ರೆಂಡ್ ಮೂಲಕ. ಮೊದಲಿಗೆ ಸ್ನೇಹಿತರಾದ ಈ ಜೋಡಿ, ದಿನಗಳು ಕಳೆಯುತ್ತಾ ಸ್ನೇಹ ಹೆಚ್ಚಾಯಿತು, ಬಳಿಕ ಅಪ್ಪು ಅವರಿಗೆ ಅಶ್ವಿನಿ ಅವರೊಡನೆ ಪ್ರೀತಿ ಆಗಿರುವ ವಿಚಾರ ಅರಿವಾಗಿ, ಅಶ್ವಿನಿ ಅವರಿಗೆ ಪ್ರೊಪೋಸ್ ಮಾಡಿದರು. ಅಶ್ವಿನಿ ಅವರು ಕೂಡ ತಕ್ಷಣವೇ ಒಪ್ಪಿಕೊಂಡರು. ಬಳಿಕ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ದೊಡ್ಮನೆಗೆ ವಿಷಯ ಗೊತ್ತಾಗಿ, ಅಶ್ವಿನಿ ಅವರನ್ನು ಸೊಸೆಯಾಗಿ ಸ್ವೀಕರಿಸಲು ಸಿದ್ಧವಾಗಿದ್ದರು.

ಆದರೆ ಅಶ್ವಿನಿ ಅವರ ಮನೆಯವರು ಮೊದಲಿಗೆ ಈ ಮದುವೆಗೆ ಒಪ್ಪಿರಲಿಲ್ಲ, ಅಷ್ಟು ದೊಡ್ಡ ಮನೆತನಕ್ಕೆ ಮಗಳನ್ನು ಕೊಟ್ಟರೆ ಹೇಗೆ ಎಂದು ಹಿಂದೇಟು ಹಾಕಿದ್ದರು. ಆದರೆ ಅಪ್ಪು ಅವರು ಮತ್ತು ಅಶ್ವಿನಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ, ಆರು ತಿಂಗಳ ಬಳಿಕ ಅಶ್ವಿನಿ ಅವರ ಕುಟುಂಬ ಪುನೀತ್ ಅವರೊಡನೆ ಮಗಳ ಮದುವೆ ಮಾಡಿಕೊಡಲು ಒಪ್ಪಿದರು. 1999ರ ಡಿಸೆಂಬರ್ 1 ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 21 ವರ್ಷಗಳ ಕಾಲ ಸುಂದರವಾದ ದಾಂಪತ್ಯ ಜೀವನ ನಡೆಸಿತು ಈ ಜೋಡಿ. ಇಂದಿಗೂ ಅಪ್ಪು ಮತ್ತು ಅಶ್ವಿನಿ ಜೋಡಿ ಎಲ್ಲರ ಮೆಚ್ಚಿನ ಎಂದರೆ ತಪ್ಪಾಗುವಿದಿಲ್ಲ.

Get real time updates directly on you device, subscribe now.