ಅಪ್ಪು ಹೆಸರಿನಲ್ಲಿ “ಅನುಶ್ರೀ ರವರು ಓವರ್ ಆಕ್ಟಿಂಗ್ ಮಾಡಿದ್ದಾರೆ” ಈ ಕುರಿತು ಶಿವಣ್ಣ ಹೇಳಿದ್ದೆ ಬೇರೆ. ಶಿವ ರಾಜ್ ಕುಮಾರ್ ಹೇಳಿದ್ದೇನು ಗೊತ್ತೇ??
ಪುನೀತ್ ರಾಜ್ ಕುಮಾರ್ ಅವರು ಸರಳತೆಗೆ ಹೆಚ್ಚು ಪ್ರಸಿದ್ಧಿ ಹೊಂದಿರುವವರು. ಅವರ ಬಗ್ಗೆ ಎಷ್ಟು ಹೇಳುತ್ತಾ ಹೋದರು ಕಡಿಮೆಯೇ. ಅಪ್ಪು ಅವರಲ್ಲಿ ಇರುವ ಒಳ್ಳೆಯತನ ಎಲ್ಲರಿಗೂ ಬರುವುದಿಲ್ಲ. ಅದನ್ನು ತಿಳಿಸುವ ಹಲವು ಘಟನೆಗಳ ಬಗ್ಗೆ ನಾವು ಹಲವರು ಹೇಳುವುದನ್ನು ಕೇಳಿದ್ದೇವೆ. ಖ್ಯಾತ ನಿರೂಪಕಿ ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ ಎಂದು ನಮಗೆಲ್ಲ ಗೊತ್ತಿದೆ, ಹಲವು ವೇದಿಕೆಗಳಲ್ಲಿ ಅನುಶ್ರೀ ಅವರು ಇದನ್ನು ಹೇಳಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಲೋಗೋದಲ್ಲಿ ಸಹ ಅಪ್ಪು ಅವರ ಫೋಟೋ ಹಾಕಿದ್ದಾರೆ. ಜೀಕನ್ನಡ ವಾಹಿನಿಯ ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಫೇವರೇಟ್ ಆಂಕರ್ ಅವಾರ್ಡ್ ಸಿಕ್ಕಿತು.
ಅದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅನುಶ್ರೀ ಅವರಿಗೆ ನೀಡಿದರು. ಅನುಶ್ರೀ ತಾವು ಪಕ್ಕಾ ಅಪ್ಪು ಅಭಿಮಾನಿ ಎಂದು ಹಲವು ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಾರೆ, ರಿಯಾಲಿಟಿ ಶೋಗಳಲ್ಲಿ ಹಲವು ಬಾರಿ ಅಪ್ಪು ಅವರ ಹೆಸರನ್ನು ಹೇಳಿ ಕಣ್ಣೀರು ಹಾಕುತ್ತಾರೆ. ಆದರೆ ಅಭಿಮಾನಿಗಳಿಗೆ ಇದು ಇಷ್ಟವಾಗುತ್ತಿಲ್ಲ, ಅನುಶ್ರೀ ಅವರು ಪದೇ ಪದೇ ಅಪ್ಪು ಅವರ ಹೆಸರನ್ನು ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಗಂಧದಗುಡಿ ಸಿನಿಮಾ ಬಿಡುಗಡೆ ಆದಾಗ ಕೂಡ ಅನುಶ್ರೀ ಅವರು ಮಾಧ್ಯಮದ ಎದುರು ಮಾತನಾಡಿದ್ದನ್ನು ಈ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನಿನ್ನ ಓವರ್ ಆಕ್ಟಿಂಗ್ ಸಾಕು ನಿಲ್ಲಿಸಮ್ಮ ಎನ್ನುತ್ತಿದ್ದಾರೆ ಅಭಿಮಾನಿಗಳು.ಇತ್ತ ಅನುಶ್ರೀ ಅವರು ಅಭಿಮಾನಿಗಳು ಹೇಳುತ್ತಿರುವ ಈ ಮಾತಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೈಲೆಂಟ್ ಆಗಿಯೇ ಇದ್ದಾರೆ. ಅತ್ತ ಶಿವಣ್ಣ ಅವರಿಗೆ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಲಾಯಿತು. ಅನುಶ್ರೀ ಅವರು ಓವರ್ ಆಕ್ಟಿಂಗ್ ಮಾಡ್ತಾರೆ ಎನ್ನುವ ರಿಯಾಕ್ಟ್ ಮಾಡಿದ ಶಿವಣ್ಣ, ಅನುಶ್ರೀ ಅವರನ್ನು ವಹಿಸಿಕೊಂಡು ಆ ಥರ ಏನು ಇಲ್ಲ ಎಂದಿದ್ದಾರೆ. ಅನುಶ್ರೀ ಅವರು ಈ ಮಾತಿಗೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.