ಪುನೀತ್ ರವರ ತಾವು ಊಟ ಮಾಡಿದ ತಟ್ಟೆಯನ್ನು ಏನು ಮಾಡುತ್ತಿದ್ದರು ಎಂದು ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡುತ್ತೀರಾ.

79

Get real time updates directly on you device, subscribe now.

ಡಾ.ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಕನಸು, ಎರಡು ವರ್ಷಗಳ ಹಿಂದೆ ಶುರುವಾದ ಈ ಪಯಣವನ್ನು ಕರ್ನಾಟಕದ ಜನತೆ ನೋಡಬೇಕು ಎಂದು ಅಪ್ಪು ಅವರು ಆಸೆ ಪಟ್ಟಿದ್ದರು. ಕಳೆದ ವರ್ಷ ಆಕ್ಟೊಬರ್ 27ರಂದು ಗಂಧದಗುಡಿ ಬಗ್ಗೆ ಟ್ವೀಟ್ ಸಹ ಮಾಡಿದ್ದರು. ಆದರೆ ಈ ಕನಸನ್ನು ಸಿನಿಪ್ರಿಯರಿಗೆ ತೋರಿಸುವ ಮೊದಲೇ ಅಪ್ಪು ಅವರು ಇಹಲೋಕ ತ್ಯಜಿಸಿದ್ದು ಬಹಳ ನೋವಿನ ವಿಚಾರ. ಪುನೀತ್ ಅವರು ಇಲ್ಲವಾಗಿ ಒಂದು ವರ್ಷ ಕಳೆಯುವ ಸಮಯಕ್ಕೆ ಗಂಧದಗುಡಿ ತೆರೆಕಂಡಿದೆ. ಎಲ್ಲ ಅಭಿಮಾನಿಗಳು ಅಪ್ಪು ಅವರನ್ನು ಕೊನೆಯ ಸಾರಿ ಬೆಳ್ಳಿಪರದೆ ನೋಡಲು ಕಾತುರರಾಗಿ ಥಿಯೇಟರ್ ಗೆ ನುಗ್ಗಿ ಬರುತ್ತಿದ್ದಾರೆ.

ಗಂಧದಗುಡಿಯಲ್ಲಿ ಅಪ್ಪು ಅವರು ಒಂದು ಪಾತ್ರವಾಗಿ ನಟನೆ ಮಾಡಿಲ್ಲ, ಪುನೀತ್ ಆಗಿ ಜೀವಿಸಿದ್ದಾರೆ. ನಿಜ ಜೀವನದಲ್ಲಿ ಪುನೀತ್ ಹೇಗಿರುತ್ತಾರೋ, ಅಮೋಘವರ್ಷ ಅವರೊಡನೆ ಹಾಗೆ ಇದ್ದಾರೆ. ಗಂಧದಗುಡಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದ ಜರ್ನಿ, ನಮ್ಮ ಕರ್ನಾಟಕದ ವನ್ಯ ಸಂಪತ್ತನ್ನು ಅದ್ಭುತವಾಗಿ ತೋರಿಸಲಾಗಿದೆ. ಪುನೀತ್ ಅವರು ಗಂಧದಗುಡಿ ಮೂಲಕ ಸರಳ ರೀತಿಯಲ್ಲಿ ಮನುಷ್ಯರು ಹೇಗೆ ಬದುಕಬೇಕು ಎನ್ನುವ ಸಂದೇಶ ನೀಡಿದ್ದಾರೆ. ಅಪ್ಪು ಅವರು ಎಂಥಹ ಸರಳ ವ್ಯಕ್ತಿತ್ವ ಹೊಂದಿರುವವರು ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಗಂಧದಗುಡಿ ಚಿತ್ರೀಕರಣ ನಡೆಯುವಾಗ ನಡೆದ ಘಟನೆಗಳು ಸಹ ಇದಕ್ಕೆ ಸಾಕ್ಷಿ.

ಗಂಧದಗುಡಿ ಚಿತ್ರೀಕರಣ ಆಗುಂಬೆ, ಮಲೆನಾಡು, ಚಾಮರಾಜನಗರ, ಕಾಳಿ ನದಿ, ಕರಾವಳಿ ಪ್ರದೇಶ, ಹಂಪಿ ಮುಂತಾದ ಕಡೆಗಳಲ್ಲಿ ನಡೆದಿದೆ. ಗಂಧದಗುಡಿ ಚಿತ್ರೀಕರಣ ನಡೆಯುವಾಗ, ಪುನೀತ್ ಅವರು, ಅಮೋಘವರ್ಷ ಅವರು ಮತ್ತು ಪುನೀತ್ ಅವರ ಜೊತೆಗೆ ಸಹಾಯಕರಾಗಿ ಕೆಲವರು ಇದ್ದರು ಎಂದು ತಿಳಿದುಬಂದಿದ್ದು, ಅವರೆಲ್ಲರ ಜೊತೆಗೆ ಮತ್ತು ಹಳ್ಳಿಯ ಜನರ ಜೊತೆಗೆ ಬಹಳ ಸರಳವಾಗಿದ್ದರು. ಅಷ್ಟು ದೊಡ್ಡ ಸ್ಟಾರ್ ಆಗಿದ್ದರು ಸಹ, ಗಂಧದಗುಡಿ ಚಿತ್ರೀಕರಣದ ನಡುವೆ ತಾವು ಊಟ ಮಾಡಿದ ತಟ್ಟೆಯನ್ನು ತಾವೇ ತೊಳೆಯುತ್ತಿದ್ದರಂತೆ ಅಪ್ಪು. ಮೇರುನಟನ ಮಗನಾಗಿ, ಸ್ವತಃ ಅಪ್ಪು ಅವರೇ ಸೂಪರ್ ಸ್ಟಾರ್ ಆಗಿ, ಇಂತಹ ವ್ಯಕ್ತಿತ್ವ ಹೊಂದಿರುವುರು ಆಶ್ಚರ್ಯಕರ ವಿಷಯವೇ ಸರಿ.

Get real time updates directly on you device, subscribe now.