ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹಬ್ಬುತ್ತಿರುವ ಸುದ್ದಿಯ ನಡುವೆ ನಿಜಕ್ಕೂ ಗಂಧದಗುಡಿ ಕಲೆಕ್ಷನ್ ಎಷ್ಟು ಗೊತ್ತೇ??

35

Get real time updates directly on you device, subscribe now.

ಅಪ್ಪು ಅವರ ಕೊನೆಯ ಕನಸು ಗಂಧದಗುಡಿ ತೆರೆಕಂಡಿದೆ. ಈ ಪ್ರಾಜೆಕ್ಟ್ ಮೇಲೆ ಅಪ್ಪು ಅವರು ಬಹಳ ಆಸೆ ಮತ್ತು ಕನಸು ಇಟ್ಟುಕೊಂಡಿದ್ದರು. ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ದಿನ ಗಂಧದಗುಡಿಯನ್ನು ಪರಿಚಯಿಸುವ ಪ್ಲಾನ್ ಮಾಡಿಕೊಂಡಿದ್ದ ಅಪ್ಪು, ಆ ದಿನ ಬರುವುದಕ್ಕಿಂತ ಮೊದಲೇ ಮೃತರಾದದ್ದು ದುರದೃಷ್ಟ ಸಂಗತಿ. ಅಪ್ಪು ಅವರು ಇಲ್ಲದೆ ಹೋದರು ಅವರ ಆ ಕನಸನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳ ಎದುರು ತಂದಿದ್ದಾರೆ. ಗಂಧದಗುಡಿ ನಮ್ಮ ಕರ್ನಾಟಕದ ಸೊಬಗನ್ನು ನಮಗೆ ಪರಿಚಯಿಸುವ ಸಿನಿಮಾ ಆಗಿದೆ. ಅಮೋಘವರ್ಷ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

ಗಂಧದಗುಡಿ ಸಿನಿಮಾ ನಿನ್ನೆ ತೆರೆಕಂಡಿದ್ದು, ಅಪ್ಪು ಅವರನ್ನು ನೋಡಲು ಅಭಿಮಾನಿಗಳು ಥಿಯೇಟರ್ ಗೆ ಧಾವಿಸಿ ಬರುತ್ತಿದ್ದಾರೆ. ಹಲವರು ಟಿಕೆಟ್ ಸಿಗದೆ ಪರದಾಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯ ಮತ್ತು ಹೊರದೇಶಗಳಲ್ಲಿ ಗಂಧದಗುಡಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಸಿನಿಮಾದಲ್ಲಿ ಅಪ್ಪು ಅವರು ನಟಿಸಿಲ್ಲ, ಅವರು ನಿಜ ಜೀವನದಲ್ಲಿ ಹೇಗಿದ್ದಾರೋ ಅದೇ ರೀತಿ ಜೀವಿಸಿದ್ದಾರೆ. ಅಮೋಘವರ್ಷ ಅವರ ಜೊತೆಗೆ ಅಪ್ಪು ಅವರ ಈ ಜರ್ನಿ, ನಿಮ್ಮನ್ನು ನಗಿಸುತ್ತದೆ, ಭಾವುಕರಾಗಿ ಮಾಡುತ್ತದೆ ಹಾಗೂ ಅಳು ತರಿಸುತ್ತದೆ. ಅಪ್ಪು ಅವರ ಸರಳತೆ ಇಂದಲೇ ಹಲವು ಪಾಠಗಳನ್ನು ಗಂಧದಗುಡಿ ಮೂಲಕ ಎಲ್ಲರಿಗೂ ಕಳಿಸಿದ್ದಾರೆ.

ಗಂಧದಗುಡಿ ಸಿನಿಮಾ ಶೋಗಳ ವಿಚಾರದಲ್ಲಿ ಮತ್ತು ಪೇಯ್ಡ್ ಪ್ರೀಮಿಯರ್ ಶೋ ವಿಚಾರದಲ್ಲಿ ದಾಖಲೆ ಬರೆದಿದೆ, ಎಲ್ಲಾ ಕಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಗಂಧದಗುಡಿ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ, ಕೆಲವರು ಮೊದಲ ದಿನವೇ 50 ಕೋಟಿ ಹಣಗಳಿಕೆ ಮಾಡಿದೆ ಎಂದೆಲ್ಲಾ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಅಸಲಿ ವಿಷಯ ಬೇರೆಯೇ ಇದ್ದು, ಮೊದಲ ದಿನ ಗಂಧದಗುಡಿ ಗಳಿಸಿರುವುದು 17 ಕೋಟಿ ರೂಪಾಯಿಗಳು ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವುದು ಖಂಡಿತ ಎನ್ನಲಾಗುತ್ತಿದೆ. ಇನ್ನು ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದರೆ, ಸಿನಿಮಾ ಒಳ್ಳೆಯ ರೀಚ್ ಪಡೆದುಕೊಳ್ಳುತ್ತದೆ.

Get real time updates directly on you device, subscribe now.