ಡಿ ಬಾಸ್ ದರ್ಶನ್ ರವರು ಒಂದು ದಿನಕ್ಕೆ ಅದೆಷ್ಟು ಖರ್ಚು ಮಾಡುತ್ತಾರೆ ಗೊತ್ತೇ?? ಅದೆಷ್ಟು ಲಕ್ಷ ಗೊತ್ತೇ??

35

Get real time updates directly on you device, subscribe now.

ನಟ ದರ್ಶನ್ ಅವರು ಅಭಿಮಾನಿಗಳ ಪಾಲಿನ ಡಿಬಾಸ್ ಎಂದೇ ಖ್ಯಾತಿ ಹೊಂದಿದ್ದಾರೆ. ದರ್ಶನ್ ಅವರಿಗೆ ಇರುವಂತಹ ಮಾಸ್ ಫ್ಯಾನ್ ಬೇಸ್ ಬಹುಶಃ ಬೇರೆ ನಟರಿಗೆ ಇರುವುದಿಲ್ಲ. ದರ್ಶನ್ ಅವರು ಸಾರ್ವಜನಿಕವಾಗಿ ಹೊರಗಡೆ ಕಾಣಿಸಿಕೊಂಡರೆ, ಎಷ್ಟು ಜನರು ಅವರ ಸುತ್ತ ತುಂಬಿಕೊಳ್ಳುತ್ತಾರೆ, ಸೆಲ್ಫಿ ಗಾಗಿ ಮುಗಿಬೀಳುತ್ತಾರೆ ಎನ್ನುವುದು ನಮಗೆಲ್ಲ ಗೊತ್ತಿದೆ. ದರ್ಶನ್ ಅವರು ಬಹಳ ಬ್ಯುಸಿ ಇರುವ ನಟರಲ್ಲಿ ಒಬ್ಬರು. ಇವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚೆಗಷ್ಟೇ ಕ್ರಾಂತಿ ಸಿನಿಮಾ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ.

ಇದರ ಜೊತೆಗೆ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿರುವ ಡಿ56 ಸಿನಿಮಾದಲ್ಲಿ ಸಹ ದರ್ಶನ್ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಹ ಶುರುವಾಗಿದೆ. ದರ್ಶನ್ ಅವರು ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎಂದು ನಮಗೆಲ್ಲ ಗೊತ್ತಿದೆ. ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ ದರ್ಶನ್ ಅವರು ಒಂದು ದಿನಕ್ಕೆ ಖರ್ಚು ಮಾಡುವ ಹಣ ಎಷ್ಟು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ..

ಸಧ್ಯಕ್ಕೆ ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ದರ್ಶನ್ ಅವರು ಒಂದು ದಿನಕ್ಕೆ ಸುಮಾರು 1.5 ಲಕ್ಷ ರೂಪಾಯಿ ಹಣ ಖರ್ಚು ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಒಂದು ತಿಂಗಳಿಗೆ ಸುಮಾರು 45 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ವ್ಯರ್ಥವಾಗಿ ಇಷ್ಟು ಹಣ ಖರ್ಚು ಮಾಡುವುದಿಲ್ಲ ಡಿಬಾಸ್, ಅವರ ಬಳಿ ಹಲವು ಸಾಕು ಪ್ರಾಣಿಗಳಿವೆ. ಅವುಗಳ ಆಹಾರ ಮತ್ತು ಅವುಗಳಿಗೆ ಸಂಬಂಧಿಸಿದ ಬೇರೆ ಕೆಲಸಗಳು ಇಷ್ಟು ಹಣ ಖರ್ಚಾಗುತ್ತದೆ. ಜೊತೆಗೆ ಅನಾಥಾಶ್ರಮದ ಮಕ್ಕಳಿಗೂ ದರ್ಶನ್ ಅವರು ಸಹಾಯ ಮಾಡುತ್ತಾರೆ. ಹಾಗಾಗಿ ದರ್ಶನ್ ಅವರಿಗೆ ದಿನಕ್ಕೆ ಇಷ್ಟು ಹಣ ಖರ್ಚಾಗುತ್ತದೆ.

Get real time updates directly on you device, subscribe now.