ಪತ್ನಿ ಅಶ್ವಿನಿ ರವರ ಜೊತೆ ಕೊನೆಯದಾಗಿ ಅಪ್ಪು ಭೇಟಿ ನೀಡಿದ್ದ ಮದುವೆಯ ವಿಡಿಯೋ ಆಯಿತು ವೈರಲ್. ಕ್ಯೂಟ್ ವಿಡಿಯೋ ಹೇಗಿದೆ ಗೊತ್ತೆ??

951

Get real time updates directly on you device, subscribe now.

ಡಾ.ರಾಜ್ ಅವರ ಕುಟುಂಬ ಸರಳತೆಗೆ ಇನ್ನೊಂದು ಹೆಸರು. ಅಣ್ಣಾವ್ರು ಇದ್ದ ಕಾಲದಿಂದಲೂ ತಮ್ಮ ಮನೆಯಲ್ಲಿ ಕೆಲಸ ಮಾಡುವವರನ್ನು, ಸಿನಿಮಾ ಸೆಟ್ ಗಳಲ್ಲಿ ಕೆಲಸ ಮಾಡುವವರು ಪ್ರತಿಯೊಬ್ಬರನ್ನೂ ಒಂದೇ ರೀತಿ ನೋಡುತ್ತಿದ್ದರು. ಎಲ್ಲರನ್ನು ಅಷ್ಟೇ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಈ ವಿಷಯ ನಮಗೆ ಹೊಸದಲ್ಲ. ಅಣ್ಣಾವ್ರ ಹಾಗೆಯೇ ಅವರ ಮಕ್ಕಳು ಕೂಡ. ತಂದೆ ತಾಯಿಯ ಸರಳತೆಯೇ ಅಣ್ಣಾವ್ರ ಮಕ್ಕಳಿಗೂ ಬಂದಿದೆ.

ಶಿವಣ್ಣ, ರಾಘಣ್ಣ, ಅಪ್ಪು ಮೂವರು ಸಹ ಸರಳತೆಗೆ ಹೆಸರುವಾಸಿ. ಪುನೀತ್ ಅವರ ಸರಳತೆಗೆ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಮಕ್ಕಳೊಡನೆ ಮಗುವಾಗಿರುತ್ತಿದ್ದವರು ಅಪ್ಪು, ಹಿರಿಯರಿಗೆ ಗೌರವ ನೀಡುತ್ತಿದ್ದರು. ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು, ಮನೆ ಬಾಗಿಲಿಗೆ ಬಂದವರಿಗೆ ಎಂದಿಗೂ ನಿರಾಸೆ ಮಾಡಿರಲಿಲ್ಲ ಅಪ್ಪು. ತಮ್ಮ ಮನೆಯಲ್ಲಿ ಹಾಗೂ ತಮ್ಮ ಜೊತೆಯಲ್ಲಿ ಕೆಲಸ ಮಾಡುವ ಎಲ್ಲರನ್ನು ಬಹಳ ಪ್ರೀತಿಯಿಂದ ಕಾಳಜಿ ಇಂದ ನೋಡಿಕೊಳ್ಳುತ್ತಿದ್ದರು. ಅಂತಹ ಅಪ್ಪು ಅವರು ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ. ಅಪ್ಪು ಅವರು ಇಲ್ಲದ ನೋವು ಇಂದಿಗೂ ಅವರ ಕುಟುಂಬವನ್ನು ಕಾಡುತ್ತಿದೆ. ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು.

ಈ ಜೋಡಿ 19 ವರ್ಷಗಳ ಕಾಲ ಸುಂದರವಾದ ದಾಂಪತ್ಯ ಜೀವನ ನಡೆಸಿದರು. ಅಪ್ಪು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್, ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ ಅಪ್ಪು ಅವರು, ಎಲ್ಲಿಗೆ ಹೋದರು ಅಶ್ವಿನಿ ಅವರೊಡನೆ ಹೋಗುತ್ತಿದ್ದರು. ತಮಗೆ ಸಿಗುತ್ತಿದ್ದ ಬಿಡುವಿನ ಸಮಯವನ್ನು ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದರು. ಮಕ್ಕಳನ್ನು ಪತ್ನಿಯನ್ನು ರೈಡ್ ಗೆ, ಟ್ರಿಪ್ ಗೆ ಕರೆದುಕೊಂಡು ಹೋಗುತ್ತಿದ್ದರು. ಮದುವೆ ಮತ್ತು ಇನ್ನಿತರ ಸಮಾರಂಭಗಳಿಗೆ ಅಶ್ವಿನಿ ಅವರ ಜೊತೆಗೆ ಹೋಗುತ್ತಿದ್ದರು ಅಪ್ಪು. ಅಪ್ಪು ಅವರು ಅಗಲುವ ಮೊದಲು, ಅಶ್ವಿನಿ ಅವರ ಜೊತೆಗೆ ಕೊನೆಯ ಬಾರಿ ಹೋಗಿದ್ದ ಮದುವೆಯ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಈ ಮುದ್ದಾದ ದಂಪತಿಯ ವಿಡಿಯೋ ಅನ್ನು ನೀವು ಕೂಡ ಮಿಸ್ ಮಾಡದೆ ನೋಡಿ..

Get real time updates directly on you device, subscribe now.