ಜಗತ್ತಿನ ಮನೆಗೆದ್ದಿರುವ ಅಪ್ಸರೆ ರಶ್ಮಿಕಾ ಮಂದಣ್ಣ ರವರನ್ನು ಮನೆಯಲ್ಲಿ ಏನೆಂದು ಕರೆಯುತ್ತಾರೆ ಗೊತ್ತೇ?? ಅಡ್ಡ ಹೆಸರು ಹೇಗಿದೆ ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಇಂದು ಅವರು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆಯ ಲೋಕಕ್ಕೇ ಎಂಟ್ರಿ ಕೊಟ್ಟರು. ನಂತರ ಚಲೊ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ರಶ್ಮಿಕಾ. ಗೀತಾ ಗೋವಿಂದಂ ಸಿನಿಮಾ ಯಶಸ್ಸಿನಿಂದ ಸ್ಟಾರ್ ಪಟ್ಟಕ್ಕೆ ಏರಿದ ನಟಿ ರಶ್ಮಿಕಾ ಮಂದಣ್ಣ, ಸುಕುಮಾರ್ ಅವರು ನಿರ್ದೇಶನ ಮಾಡಿದ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಸ್ಟೇಟಸ್ ಪಡೆದುಕೊಂಡರು. ಕೊಡಗಿನ ಬೆಡಗಿ ರಶ್ಮಿಕಾ ದೀಪಾವಳಿ ಹಬ್ಬದ ಸಮಯದಲ್ಲಿ ಹೊಸ ಫೋಟೋಶೂಟ್ ಮಾಡಿಸಿದರು, ಜೊತೆಗೆ ತಮ್ಮ ಫ್ಯಾಮಿಲಿ ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತೆರೆಕಂಡ ಸೀತಾರಾಮಂ ಸಿನಿಮಾದಲ್ಲಿ ಪಾಕಿಸ್ತಾನಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಸೀತಾರಾಮಂ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ರಶ್ಮಿಕಾ ಅವರ ಮೊದಲ ಹಿಂದಿ ಗುಡ್ ಬೈ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್ ಎನ್ನಿಸಿಕೊಂಡಿತ್ತು. ಕೈತುಂಬಾ ಸಾಲು ಸಾಲು ಸಿನಿಮಾಗಳ ಜೊತೆಗೆ ಸಿನಿಮಾ ಚಿತ್ರೀಕರಣ ಎಂದು ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ ಅವರು, ದೀಪಾವಳಿ ಹಬ್ಬಕ್ಕೆ ತಮ್ಮ ಹುಟ್ಟೂರು ಕೊಡಗಿಗೆ ಹೋಗಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ರಶ್ಮಿಕಾ ಅವರು ತಮ್ಮ ಫ್ಯಾಮಿಲಿ ಬಗ್ಗೆ ಒಂದು ಹೊಸ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ. ಕೆರಿಯರ್ ನಲ್ಲಿ ಎಷ್ಟೇ ಬ್ಯುಸಿ ಇದ್ದರು ಕೂಡ ರಶ್ಮಿಕಾ ಅವರು ದೀಪಾವಳಿ ಹಬ್ಬದ ಆಚರಣೆ ಮಾಡಲು, ತಮ್ಮ ಹುಟ್ಟೂರಿಗೆ ಹೋಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ದೀಪಾವಳಿ ಹಬ್ಬಕ್ಕೆ ತಮ್ಮ ಮನೆಯಲ್ಲಿರುವ ಒಂದು ಸೆಂಟಿಮೆಂಟ್ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಅವರ ಕುಟುಂಬದಲ್ಲಿ ದೀಪಾವಳಿ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವ ಅಭ್ಯಾಸ ಇದೆಯಂತೆ. ರಶ್ಮಿಕಾ ಅವರು ಸಿನಿಮಾಗೆ ಬರುವ ಮೊದಲೇ ಈ ಪದ್ಧತಿ ಇದೆಯಂತೆ. ಇದರ ಜೊತೆಗೆ ರಶ್ಮಿಕಾ ಅವರು ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದು, ಈ ಮುದ್ದಾದ ನಟಿಯನ್ನು ಅವರ ಮನೆಯಲ್ಲಿ ಮಹಾಲಕ್ಷ್ಮಿ ಎಂದು ಕರೆಯುತ್ತಾರಂತೆ, ಕುಟುಂಬದಲ್ಲಿ ಹೀಗೆ ಮಹಾಲಕ್ಷ್ಮಿ ಎಂದು ಕರೆದರೆ, ನನಗೆ ಹೆಮ್ಮೆ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.