ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡ ಸಮಂತಾ ಹೇಗೆ ಕಾಣುತ್ತಿದ್ದಾರೆ ಗೊತ್ತೇ? ಮತ್ತೆ ವಾಪಸ್ಸು ಬಂದು ಮಾಡಿಸಿದ ಫೋಟೋಶೂಟ್ ಹೇಗಿದೆ ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ ಸಮಂತಾ ಅವರು ಕೆಲವು ಸಮಯದಿಂದ ಅಮೆರಿಕಾಗೆ ಹೋಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಅದೇ ರೀತಿ ಸಮಂತಾ ಅವರು ಕೋಈ ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಇದೀಗ ಸಮಂತಾ ಅವರು ಅಮೆರಿಕಾ ಇಂದ ವಾಪಸ್ ಭಾರತಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಅಭಿಮಾನಿಗಳಿಗೆ ಈ ವಿಷಯ ಗೊತ್ತಾಗಿ, ಸಮಂತಾ ಅವರು ಅಮೆರಿಕಾ ಇಂದ ಬಂದಮೇಲೆ ಅವರನ್ನು ನೋಡಿ ಶಾಕ್ ಆಗಿದ್ದಾರೆ. ಸಮಂತಾ ಅವರ ಮುಖದಲ್ಲಿ ಬಹಳಷ್ಟು ಬದಲಾವಣೆಗಳು ಕಾಣಿಸುತ್ತಿದ್ದು, ಸರ್ಜರಿ ಮಾಡಿಸಿಕೊಳ್ಳುವ ಸಲುವಾಗಿ ಸಮಂತಾ ಅಮೆರಿಕಾಗೆ ಹೋಗಿದ್ರಾ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಅವರು ಅಮೆರಿಕಾಗೆ ಹೋಗಿ ಎರಡು ವಾರಕ್ಕಿಂತ ಹೆಚ್ಚಿನ ಸಮಯ ಕಳೆದಿತ್ತು.
ಇದೀಗ ಸ್ಯಾಮ್ ಅವರು ಅಮೆರಿಕಾ ಇಂದ ಹೈದರಾಬಾದ್ ಗೆ ಬಂದಿದ್ದು, ಸೀಕ್ರೆಟ್ ಆಗಿ ಹೈದರಾಬಾದ್ ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಅವರು ಈಗ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಿಡುಗಡೆಗೆ ಸಿದ್ಧವಿದೆ, ಯಶೋಧ ಸಿನಿಮಾದ ನವೆಂಬರ್ 11 ರಂದು ಬಿಡುಗಡೆ ಆಗಲಿದೆ. ಇನ್ನು ವಿಜಯ್ ದೇವರಕೊಂಡ ಅವರೊಡನೆ ನಟಿಸುತ್ತಿರುವ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಅಷ್ಟೇ ಅಲ್ಲದೆ, ಬಾಲಿವುಡ್ ನಲ್ಲಿ ಸಹ ಕೆಲವು ಸಿನಿಮಾಗಳನ್ನು ದೈನ್ ಮಾಡಿದ್ದಾರೆ ಸಮಂತಾ. ಅವುಗಳಲ್ಲಿ ಒಂದು ವೆಬ್ ಸೀರೀಸ್ ಸಹ ಇದೆ. ಈಗಾಗಲೇ ಸಮಂತಾ ಅವರು, ದಿ ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ನ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು.
ಆ ಪಾತ್ರದ ಮೂಲಕ ಇಡೀ ಬಾಲಿವುಡ್ ತಮ್ಮ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದರು. ನಟ ವರುಣ್ ಧವನ್ ಅಭಿನಯಿಸುತ್ತಿರುವ ಸಿಟಾಡೆಲ್ ಎನ್ನುವ ವೆಬ್ ಸೀರೀಸ್ ನಲ್ಲಿ ಸಮಂತಾ ಅವರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದು ಆಕ್ಷನ್ ಸೀಕ್ವೆನ್ಸ್ ಜಾಸ್ತಿ ಇರುವ ವೆಬ್ ಸೀರೀಸ್ ಆಗಿದ್ದು, ಅದಕ್ಕಾಗಿ ಟ್ರೇನಿಂಗ್ ಪಡೆಯಲು ಅಮೆರಿಕಾಗೆ ಹೋಗಿದ್ದರಂತೆ ಸ್ಯಾಮ್. ಚಿತ್ರತಂಡ ಸಮಂತಾ ಅವರಿಗಾಗಿ ವಿಶೇಷವಾಗಿ ಕೆಲವು ದೃಶ್ಯಗಳಿಗೋಸ್ಕರ, ಟ್ರೇನಿಂಗ್ ನೀಡಿದೆಯಂತೆ. ಸಮಂತಾ ಅವರು ಆರೋಗ್ಯ ಸಮಸ್ಯೆಯಿಂದ ಅಮೆರಿಕಾಗೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಟ್ರೇನಿಂಗ್ ಗಾಗಿ ಹೋಗಿದ್ದರು ಎನ್ನಲಾಗುತ್ತಿದೆ. ಆದರೆ ಸಮಂತಾ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹಬ್ಬಿಸುತ್ತಿದ್ದಾರೆ. ಇದು ನಿಜವೋ ಸುಳ್ಳೋ ಎಂದು ಸ್ಯಾಮ್ ಅವರೇ ಉತ್ತರ ನೀಡಬೇಕಿದೆ.