ಸಮಂತಾ ರವರನ್ನು ಸಂತೋಷವಾಗಿಡಲು, ಗಟ್ಟಿ ನಿರ್ಧಾರ ತೆಗೆದುಕೊಂಡ ವಿಜಯ್ ದೇವರಕೊಂಡ. ಏನು ಗೊತ್ತೇ??

34

Get real time updates directly on you device, subscribe now.

ವಿಜಯ್ ದೇವರಕೊಂಡ ಅವರನ್ನು ಎಲ್ಲರೂ ಕೂಡ ರೌಡಿ ಹೀರೋ ಎಂದು ಕರೆಯುತ್ತಾರೆ. ಅವರು ಮಾತನಾಡುವ ಶೈಲಿ, ಅವರ ಆಟಿಟ್ಯೂಡ್ ಇದೆಲ್ಲವನ್ನು ನೋಡಿ ವಿಜಯ್ ಅವರನ್ನು ರೌಡಿ ಹೀರೋ ಎಂದು ಕರೆಯುತ್ತಾರೆ. ಆದರೆ, ವಿಜಯ್ ದೇವರಕೊಂಡ ಅವರ ಮನಸ್ಸು ಎಷ್ಟು ಒಳ್ಳೆಯದು ಎಂದು ಹಲವು ಘಟನೆಗಳ ಮೂಲಕ ತಿಳಿದುಬಂದಿದೆ. ವಿಜಯ್ ದೇವರಕೊಂಡ ಅವರದ್ದು ನೇರನುಡಿ ಸ್ವಭಾವ, ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಾರೆ, ಆ ರೀತಿಯ ಸ್ವಭಾವ ಕೆಲವರಿಗೆ ಇಷ್ಟ ಆಗದೆ ಇರಬಹುದು, ಹಾಗಾಗಿ ಆ ರೀತಿ ಕರೆಯಬಹುದು. ವಿಜಯ್ ಅವರನ್ನು ಚಿತ್ರರಂಗದಲ್ಲಿ ಕೆಲವರು ಬೇಕೆಂದೇ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದು ಕೂಡ ಸತ್ಯ ಆಗಿದೆ. ಆದರೆ ವಿಜಯ್ ಅವರು ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಾರೆ, ಯಾರ ವಿಷಯಕ್ಕೂ ಹೋಗುವುದಿಲ್ಲ.

ಪ್ರಸ್ತುತ ವಿಜಯ್ ದೇವರಕೊಂಡ ಅವರ ಕೆರಿಯರ್ ಗ್ರಾಫ್ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ, ಲೈಗರ್ ಸಿನಿಮಾ ಅಟ್ಟರ್ ಫ್ಲಾಪ್ ಆದ ಕಾರಣ ವಿಜಯ್ ಅವರ ಕೆರಿಯರ್ ಕಷ್ಟದಲ್ಲಿದೆ, ಆದರೆ ಅವರಿವೆ ಅವಕಾಶಗಳು ಬರುವುದೇನು ಕಡಿಮೆ ಆಗುತ್ತಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಾಗುತ್ತಿದ್ದಾರೆ ವಿಜಯ್. ಟಾಲಿವುಡ್ ನಲ್ಲಿ ತಮ್ಮದೇ ಸ್ಥಾನ ರೂಪಿಸಿಕೊಂಡಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅವರ ದೀಪಾವಳಿ ಹಬ್ಬದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ನಟಿ ಸಮಂತಾ ಮತ್ತು ವಿಜಯ್ ದೇವರಕೊಂಡ ಬೆಸ್ಟ್ ಫ್ರೆಂಡ್ಸ್ ಎನ್ನುವ ವಿಷಯ ಎಲ್ಲರಿಗು ಗೊತ್ತಿದೆ, ಸಮಂತಾ ಅವರಿಗೂ ವಿಜಯ್ ಅಂದ್ರೆ ತುಂಬಾ ಇಷ್ಟ. ವಿಜಯ್ ಅಂತಹ ಹೀರೋಗಳು ಚಿತ್ರರಂಗಕ್ಕೆ ಬೇಕು ಎಂದು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು ಸಮಂತಾ. ಈ ವರ್ಷ ದೀಪಾವಳಿ ಹಬ್ಬವನ್ನು ಸಮಂತಾ ಅವರ ಮನೆಯಲ್ಲಿ ಆಚರಿಸಲಿದ್ದಾರಂತೆ ವಿಜಯ್, ಪ್ರಸ್ತುತ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ.

ಏಕೆಂದರೆ ಸಮಂತಾ ಅವರು ಈಗ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ವಿಚ್ಛೇದನ ಪಡೆದ ನಂತರ ಒಂಟಿಯಾಗಿರುವ ಸಮಂತಾ ಅವರು, ವಿಚ್ಛೇದನ ಪಡೆದು 1 ವರ್ಷ ಕಳೆದಿದೆ. ಹಾಗಿದ್ದರೂ ಕೂಡ ಸಮಂತಾ ಅವರ ಕೆರಿಯರ್ ಮಾತ್ರ ಭರ್ಜರಿಯಾಗಿ ಸಾಗುತ್ತಿದೆ. ಹಾಗಾಗಿ ವಿಜಯ್ ಅವರು ಸಮಂತ ಅವರೊಡನೆ ದೀಪಾವಳಿ ಹಬ್ಬ ಆಚರಿಸಲಿದ್ದಾರಂತೆ. ಸಮಂತಾ ಅವರು ಒಂಟಿಯಾಗಿ ಇರುವುದು ಇಷ್ಟವಾಗದೆ ಫಾರಿನ್ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದರಂತೆ. ಆದರೆ ವಿಜಯ್ ದೇವರಕೊಂಡ ಸಮಂತಾ ಅವರಿಗೆ ಸರ್ಪ್ರೈಸ್ ನೀಡಿದ್ದರಂತೆ. ಸಮಂತಾ ಅವರ ಅಮ್ಮನ ಜೊತೆ ಮಾತನಾಡಿ ಪಾರ್ಟಿ ಅರೇಂಜ್ ಮಾಡಿದರಂತೆ ವಿಜಯ್, ತಮಗೋಸ್ಕರ ಸ್ಪೆಶಲ್ ಆಗಿ ದೀಪಾವಳಿ ಹಬ್ಬದ ಆಚರಣೆ ಮಾಡುತ್ತಿರುವುದರಿಂದ ಸಮಂತಾ ಅವರಿಗೂ ಬಹಳ ಸಂತೋಷ ಆಗಿದೆಯಂತೆ. ಒಟ್ಟಿನಲ್ಲಿ ಸಮಂತಾ ಅವರಿಗೆ ತೆಲುಗು ಚಿತ್ರರಂಗದಲ್ಲಿ ಒಬ್ಬ ಬೆಸ್ಟ್ ಫ್ರೆಂಡ್ ಸಿಕ್ಕಿದ್ದಾರೆ.

Get real time updates directly on you device, subscribe now.