ಕಾಂತಾರ ಬಗ್ಗೆ ನಾಲಿಗೆ ಹರಿ ಬಿಟ್ಟರೆ ತೆಲುಗಿನ ಯುವ ನಟ ಕಿರಣ್?? ನಿಜವಾಗಲೂ ಅವರು ಹೇಳಿದ್ದೇನು ಗೊತ್ತೇ??
ತೆಲುಗು ಚಿತ್ರರಂಗದಲ್ಲಿ ಹೊಸ ನಟ ಕಿರಣ್ ಅಬ್ಬವರಂ ಒಳ್ಳೆಯ ಹೆಸರು ಮತ್ತು ಈಗಿನ ದಿನಗಳಲ್ಲಿ ಒಳ್ಳೆಯ ಪಾಪ್ಯುಲಾರಿಟಿ ಪಡೆದುಕೊಳ್ಳುತ್ತಿದ್ದಾರೆ. ಇವರು ನಟಿಸಿದ ಎಸ್.ಆರ್.ಕಲ್ಯಾಣ ಮಂಡಪಂ ಸಿನಿಮಾ ಒಳ್ಳೆಯ ಹೆಸರು ಪಡೆಯಿತು, ಬಳಿಕ ಚಾಂದಿನಿ ಚೌಧರಿ ಅವರು ನಾಯಕಿಯಾಗಿ ನಟಿಸಿದ ಸಿನಿಮಾ ಸಹ ಕಿರಣ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಭವಿಷ್ಯದಲ್ಲಿ ಉತ್ತಮ ನಟರಾಗುತ್ತಾರೆ ಎಂದು ಭರವಸೆ ಮೂಡಿಸಿತು. ಇತ್ತೀಚೆಗೆ ಹೆಸರು ಮಾಡುತ್ತಿರುವ ಕಿರಣ್ ಅವರ ಆ ಒಂದು ಟ್ವೀಟ್, ಕಿರಣ್ ಅವರಿಗೆ ನೆಗಟಿವ್ ಆಗಿ ಪ್ರಚಾರ ಆಗುತ್ತಿದೆ.
ಬಾಯ್ಕಾಟ್ ಕಿರಣ್ ಅಬ್ಬವರಂ ಎನ್ನುವ ಹ್ಯಾಶ್ ಟ್ಯಾಗ್ ವೈರಲ್ ಆಗುವ ಹಾಗೆ ಮಾಡಿದೆ ಅದೊಂದು ಟ್ವೀಟ್. ಕಿರಣ್ ಬಳಸಿದ ಅದೊಂದು ವಾಕ್ಯ ಜನರಿಗೆ ನೆಗಟಿವ್ ಎನ್ನಿಸಿದೆ. ಕಿರಣ್ ಅಬ್ಬವರಂ ಅವರು ಕನ್ನಡದಲ್ಲಿ ತೆರೆಕಂಡು ಸೂಪರ್ ಹಿಟ್ ಆಗುತ್ತಿರುವ ಕಾಂತಾರ ಸಿನಿಮಾ ನೋಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಕನ್ನಡ ಸಿನಿಮಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕಾಂತಾರ ಸಿನಿಮಾ ಬಗ್ಗೆ ಟ್ವೀಟ್ ಮಾಡಿ, “ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದ ಸಂಪ್ರದಾಯವನ್ನು ಮೊದಲ ಸಾರಿ ತೆರೆಮೇಲೆ ನೋಡಲು ಬಹಳ ಸಂತೋಷ ಆಗಿದೆ..” ಎಂದು ಬರೆದಿದ್ದಾರೆ ಕಿರಣ್.
ಕಿರಣ್ ಅವರು ಹೇಳಿದ್ದರಲ್ಲಿ ತಪ್ಪು ಎನ್ನುವುದು ಹೇಗೆ ಕಾಣಿಸಿಕೊಂಡಿದೆ ಎಂದರೆ, ಈ ಸಿನಿಮಾದಲ್ಲಿ ಹೊಸದೇನೂ ಇಲ್ಲ, ಇರುವ ವಿಚಾರವನ್ನೇ ತೋರಿಸಲಾಗಿದೆ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಲಾಗಿದೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಕಿರಣ್ ಅವರು ಈ ರೀತಿ ಟ್ವೀಟ್ ಮಾಡಿರುವುದಕ್ಕೆ ಕೋಪಗೊಂಡ ಅಭಿಮಾನಿಗಳು ಕಮೆಂಟ್ಸ್ ಗಳ ಮೂಲಕ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿನಿಮಾವನ್ನು ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿ ಎಂದು ಕೆಲವರು ಕಮೆಂಟ್ಸ್ ಮೂಲಕ ಕಿರಣ್ ಅಬ್ಬವರಂ ಅವರನ್ನು ಟೀಕೆ ಮಾಡುತ್ತಿದ್ದಾರೆ.