ಸೀರೆಯಲ್ಲಿಯೇ ಎಲ್ಲರ ತಲೆ ಧೀಮ್ ಅನ್ನುವಂತೆ ಫೋಟೋ ಗಳನ್ನೂ ಬಿಡುಗಡೆ ಮಾಡಿದ ರಶ್ಮಿಕಾ. ನೋಡಿದರೆ ನಿಜಕ್ಕೂ ಮನ ಸೋತು ಬಿಡ್ತೀರಾ.

21

Get real time updates directly on you device, subscribe now.

ನಟಿ ರಶ್ಮಿಕಾ ಮಂದಣ್ಣ ಇಂದು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರುವ ನಟಿಯಲ್ಲ, ನ್ಯಾಷನಲ್ ಕ್ರಶ್ ಎಂದು ಹೆಸರು ಪಡೆದಿರುವ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ. ಬಾಲಿವುಡ್ ನಲ್ಲಿ ಇವರು ನಟಿಸಿರುವ ಒಂದು ಸಿನಿಮಾ ಬಿಡುಗಡೆ ಆಗಿದೆ, ಆದರೆ ರಶ್ಮಿಕಾ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಲಿವೆ. ಒಂದರ ನಂತರ ಒಂದು ಹಿಂದಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕನ್ನಡದ ಹುಡುಗಿ ಬಾಲಿವುಡ್ ನಲ್ಲಿ ಹೋಗುತ್ತಿರುವ ಸ್ಪೀಡ್ ನೋಡಿದರೆ, ಅಲ್ಲಿ ಕೂಡ ಸ್ಟಾರ್ ಆಗಿ ಮೆರೆಯುವ ದಿನಗಳು ದೂರವಿಲ್ಲ ಎನ್ನುವ ಅಭಿಪ್ರಾಯ ಸಿನಿಪಂಡಿತರದ್ದು.

ರಶ್ಮಿಕಾ ಅವರಿಗೆ ಯಶಸ್ಸು ಮತ್ತು ಕೀರ್ತಿ ಹೆಚ್ಚಾಗಿದ್ದು, ತೆಲುಗು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ ನಂತರ, ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಂತರ ಆಕೆಯ ಸ್ಟಾರ್ಡಮ್ ಹೆಚ್ಚಾಯಿತು. ಅದರಲ್ಲು ಗೀತಾ ಗೋವಿಂದಮ್ ಸಿನಿಮಾದ ಯಶಸ್ಸು ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಡುವುದರ ಜೊತೆಗೆ, ತಮಿಳಿನಲ್ಲಿ ಅವಕಾಶಗಳು ಬರುವ ಹಾಗೆ ಮಾಡಿತು. ಕಡಿಮೆ ಸಮಯದಲ್ಲಿ ಈ ಮಟ್ಟದ ಯಶಸ್ಸು ಪಡೆದು, ರಶ್ಮಿಕಾ ಅವರ ಪರಿಶ್ರಮ ಮತ್ತು ಅದೃಷ್ಟ ಎರಡು ಕೂಡ ಅವರ ಕೈಹಿಡಿಯುತ್ತಿದೆ. ಈಗ ರಶ್ಮಿಕಾ ಅವರು ಎಷ್ಟು ಬ್ಯುಸಿ ಇದ್ದಾರೆ ಎಂದರೆ, ದೊಡ್ಡ ದೊಡ್ಡ ಡೈರೆಕ್ಟರ್ ಗಳ ಸಿನಿಮಾಗು ಡೇಟ್ಸ್ ಹೊಂದಿಸಲು ಸಾಧ್ಯ ಆಗದಷ್ಟು ಬ್ಯುಸಿ ಆಗಿದ್ದಾರೆ ರಶ್ಮಿಕಾ.

ಆದರೆ ರಶ್ಮಿಕಾ ಅವರು ಎಷ್ಟೇ ಬ್ಯುಸಿ ಇದ್ದರು, ತಮ್ಮ ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಾರೆ. ಇತ್ತೀಚೆಗೆ ರಶ್ಮಿಕಾ ಅವರು ಮತ್ತೊಮ್ಮೆ ತಮ್ಮ ಸೌಂದರ್ಯದ ಮೂಲಕ ನೆಟ್ಟಿಗರು ಮತ್ತು ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡಿದ್ದಾರೆ. ಹೊಸದಾಗಿ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿರುವ ರಶ್ಮಿಕಾ ಅವರ ಸೊಂಟದ ವೈಯಾರ ನೋಡಿ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. ರಶ್ಮಿಕಾ ಅವರ ಈ ಹೊಸ ಫೋಟೋಶೂಟ್ ವೈರಲ್ ಆಗುತ್ತಿದೆ.

Get real time updates directly on you device, subscribe now.