ಪುನೀತ್ ಪರ್ವದ ಸಮಯದಲ್ಲಿ ಸಾಕ್ಷಾತ್ ಆಶೀರ್ವಾದ ಮಾಡಿದ ಗಣೇಶ: ಬಲಗಡೆ ಹೂ ಕೊಟ್ಟ ಗಣೇಶ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಸಾಕ್ಷ್ಯ ಚಿತ್ರ ಆಕ್ಟೊಬರ್ 28ರಂದು ತೆರೆಕಾಣಲಿದೆ. ಅಪ್ಪು ಅವರನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದಾರೆ. ಗಂಧದಗುಡಿ ಸಿನಿಮಾ ಪ್ರೊಮೋಶನ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅಪ್ಪು ಅವರ ಅಭಿಮಾನಿಗಳು ಭಾರತದ ಎಲ್ಲೆಡೆ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗಿಂತ ಮೊದಲು ಪ್ರೀರಿಲಿಸ್ ಇವೆಂಟ್ ಆಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಅಪ್ಪು ಅವರೊಡನೆ ಆತ್ಮೀಯವಾಗಿದ್ದ, ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಬರಲಿದ್ದಾರೆ.
ಇಡೀ ದೊಡ್ಮನೆ ಕುಟುಂಬ, ಅನೇಕ ಸೆಲೆಬ್ರಿಟಿಗಳು ಮತ್ತು ಮುಖ್ಯ ಅತಿಥಿಗಳು, ಅಭಿಮಾನಿಗಳು ಬರಲಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಯಾವುದೇ ತೊಂದರೆ ಆಗದ ಹಾಗೆ ಕಾರ್ಯಕ್ರಮ ನಡೆಯಲಿ ಎಂದು ವಿಘ್ನ ವಿನಾಯಕ ಕೂಡ ವರ ಕೊಟ್ಟಿರುವ ಘಟನೆ ಅಪ್ಪು ಅವರ ಮನೆಯ ಬಳಿ ನಡೆದಿದೆ. ಪುನೀತ ಪರ್ವ ಕಾರ್ಯಕ್ರಮ ಇರುವ ಕಾರಣ, ಬೇರೆ ಊರುಗಳಿಂದ ಆಗಮಿಸಿರುವ ಅಭಿಮಾನಿಗಳು ಸದಾಶಿವನಗರದ ಮನೆಯ ಬಳಿ ಬಂದು ಮನೆಗೆ ನಮಸ್ಕಾರ ಮಾಡಿ ಹೋಗುತ್ತಿದ್ದಾರೆ, ಅಪ್ಪು ಅವರ ಮನೆಯ ಗೇಟ್ ಬಳಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ, ಅಣ್ಣಾವ್ರು ಇದ್ದಾಗ ಈ ಗಣೇಶನಿಗೆ ಕೈಮುಗಿದು ತಮ್ಮ ದಿನವನ್ನು ಶುರು ಮಾಡುತ್ತಿದ್ದರು.
ಅಪ್ಪು ಅವರು ಕೂಡ ಅದೇ ಸಂಸ್ಕೃತಿ ಮುಂದುವರೆಸಿಕೊಂಡು ಹೋಗುತ್ತಿದ್ದರು, ಇಂದು ಪುನೀತ ಪರ್ವ ಕಾರ್ಯಕ್ರಮ ಇರುವುದರಿಂದ ಅರ್ಚಕರು ಬಂದು ಗಣೇಶನಿಗೆ ಪೂಜೆ ಮಾಡಿದ್ದು, ಗಣೇಶನ ಬಲಗಡೆಯಿಂದ ಹೂವು ಬಿದ್ದಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಅಡಚಣೆ ಆಗುವುದಿಲ್ಲ ಎಂದು ಗಣೇಶನ ಆಶೀರ್ವಾದ ಸಿಕ್ಕಿದೆ ಎಂದು ಅಪ್ಪು ಅವರ ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದಾರೆ. ಬಲಗಡೆ ಹೂ ಕೊಟ್ಟ ಗಣೇಶನ ಫೋಟೋಗಳು ಸಹ ಭಾರಿ ವೈರಲ್ ಆಗುತ್ತಿವೆ. ಇನ್ನು ಅಪ್ಪು ಅವರ ಮನೆಮುಂದೆ ಮಾತನಾಡಿರುವ ಅಭಿಮಾನಿಗಳು, ಇಷ್ಟು ದಿನ ಅಪ್ಪುವನ್ನು ನೋಡಲು ಬರುತ್ತಿದ್ವಿ, ಈಗ ಅವರ ಮನೆಯನ್ನಾದರು ನೋಡೋಣ ಅಂತ ಬರ್ತಾ ಇದ್ದೀವಿ..ಎಂದು ಹೇಳಿ ಬೇಸರ ಮಾಡಿಕೊಳ್ಳುತ್ತಿದ್ದಾರೆ.