Kannada News: ಕೀರ್ತಿ ಸುರೇಶ್ ರವರ ಮದುವೆಯಂತೆ, ಹುಡುಗ ಯಾರು ಅಂತೇ ಗೊತ್ತೇ??

24

Get real time updates directly on you device, subscribe now.

ಹಿಂದಿನ ಕಾಲದಲ್ಲಿ ಸಿನಿಮಾ ನಟಿಯರು ಮದುವೆಯಾದರೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತವೆ, ಮದುವೆಯಾದ ಬಳಿಕ ನಾಯಕಿಯಾಗಿ ನಟಿಸುವ ಅವಕಾಶ ಸಿಗುವುದು ಅಸಾಧ್ಯ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ. ಹಾಗಾಗಿ ಕೆರಿಯರ್ ನ ಪೀಕ್ ನಲ್ಲಿರುವಾಗಲೇ ಮದುವೆ ಮಾಡಿಕೊಂಡು, ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ನಟಿಯರು. ಇದೇ ಸಾಲಿಗೆ ನಟಿ ಕೀರ್ತಿ ಸುರೇಶ್ ಅವರು ಕೂಡ ಸೇರಿಕೊಂಡಿದ್ದಾರಾ? ಸಧ್ಯಕ್ಕೆ ಕೀರ್ತಿ ಸುರೇಶ್ ಅವರ ಮದುವೆ ಬಗ್ಗೆ ಬಹಳಷ್ಟು ಗಾಸಿಪ್ ಗಳು ಕೇಳಿಬರುತ್ತಿವೆ.

ಸಧ್ಯಕ್ಕೆ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಗಾಸಿಪ್ ಗಳ ಪ್ರಕಾರ ಮುಂದಿನ ವರ್ಷದ ಆರಂಭಿಕ ತಿಂಗಳುಗಳಲ್ಲಿ ಕೀರ್ತಿ ಸುರೇಶ್ ಅವರು ಮದುವೆ ಆಗಲಿದ್ದಾರಂತೆ. ಅಷ್ಟಕ್ಕೂ ಈ ಸುಂದರವಾದ ನಟಿ ಮದುವೆ ಆಗುವ ಹುಡುಗ ಯಾರು ? ಕೀರ್ತಿ ಸುರೇಶ್ ಅವರ ಕುಟುಂಬಕ್ಕೆ ಹತ್ತಿರವಾಗಿರುವ, ವಾಣಿಜ್ಯ ರಂಗದಲ್ಲಿ ಉದ್ಯಮಿಯಾಗಿ ಹೆಸರು ಮಾಡಿರುವ ಹುಡುಗನ ಜೊತೆಗೆ ಕೀರ್ತಿ ಸುರೇಶ್ ಅವರ ಮದುವೆ ನಡೆಯಲಿದೆಯಂತೆ, ಹುಡುಗ ಗಲ್ಫ್ ಕಂಟ್ರಿಯಲ್ಲಿದ್ದಾರೆ ಎನ್ನುವ ಈ ಗಾಸಿಪ್ ಒಂದು ಮಟ್ಟಕ್ಕೆ ಸದ್ದು ಮಾಡುತ್ತಿದೆ. ಆದರೆ ಕೀರ್ತಿ ಸುರೇಶ್ ಅವರ ಆಪ್ತವಲಯ ಈ ಗಾಸಿಪ್ ಗಳನ್ನು ತಳ್ಳಿಹಾಕುತ್ತಿದ್ದು, ಈಗಲೇ ಕೀರ್ತಿ ಸೂರ್ಸ್ಸ್ ಅವರ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ, ಪ್ರಸ್ತುತ ಕೀರ್ತಿ ಸುರೇಶ್ ಅವರ ಗಮನ ಸಂಪೂರ್ಣವಾಗಿ ಸಿನಿಮಾ ಮೇಲಿದೆ ಎಂದು ಸಹ ಅವರ ಆಪ್ತವಲಯದ ಮೂಲಕ ತಿಳಿದುಬಂದಿದೆ. ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರ ವಿಚಾರದಲ್ಲಿ ಸಹ ಹೀಗೆ ಆಗಿತ್ತು, ದಿಢೀರ್ ಎಂದು ಮೊದಲ ಲಾಕ್ ಡೌನ್ ಸಮಯದಲ್ಲಿ ಮದುವೆಯಾಡ್ಸ್ ಕಾಜಲ್ ಅಗರ್ವಾಲ್ ಇಂದು ಒಂದು ಮಗುವಿನ ತಾಯಿ. ನಯನತಾರ ಅವರ ವಿಚಾರದಲ್ಲಿ ಸಹ ಇದೇ ರೀತಿ, ನಯನ್ ಇನ್ನು ಮದುವೆಯಾಗಿಲ್ಲ ಎಂದುಕೊಳ್ಳುತ್ತಿದ್ದ ಕೆಲವೇ ತಿಂಗಳಲ್ಲಿ ಮದುವೆಯಾದರು. ಕೀರ್ತಿ ಸುರೇಶ್ ಅವರ ವಿಚಾರದಲ್ಲಿ ಕೂಡ ಹೀಗೆ ಆಗುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ ಆಕೆಯ ಅಭಿಮಾನಿಗಳು..ಪ್ರಸ್ತುತ ಕೀರ್ತಿ ಸುರೇಶ್ ಅವರು ನಾನಿ ಅವರ ದಸರಾ ಸಿನಿಮಾದಲ್ಲಿ ಬ್ಯುಸಿ ಆಗಿದ್ದು, ಮದುವೆ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Get real time updates directly on you device, subscribe now.