ತಮಿಳಿನಲ್ಲಿ ಮಿಂಚಬೇಕು ಎಂದು ಬಾರಿ ಆಸೆ ಇಟ್ಟಿದ್ದ ರಶ್ಮಿಕಾಗೆ ಬಿಗ್ ಶಾಕ್ ಕೊಟ್ಟ ತಮಿಳು ಚಿತ್ರರಂಗ. ಏನು ಮಾಡಿದ್ದಾರೆ ಗೊತ್ತೇ??

21

Get real time updates directly on you device, subscribe now.

ಕನ್ನಡದಲ್ಲಿ ಕೆಜಿಎಫ್ ಸಿನಿಮಾ ಎಂಥಾ ಹವಾ ಸೃಷ್ಟಿ ಮಾಡಿತು ಎಂದು ಎಲ್ಲರಿಗೂ ಗೊತ್ತಿದೆ. ವಿಶ್ವ ಸಿನಿಮಾ ಕನ್ನಡದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ಸಿನಿಮಾ ಕೆಜಿಎಫ್. ಈ ಸಿನಿಮಾ ಭಾರತ ಚಿತ್ರರಂಗದಲ್ಲಿ ಒಂದು ಬೆಂಚ್ ಮಾರ್ಕ್ ಸೃಷ್ಟಿ ಮಾಡಿದೆ. ಇದೀಗ ಕೆಜಿಎಫ್ ಸಿನಿಮಾ ಸ್ಪೂರ್ತಿಯಲ್ಲಿ ಕೆಜಿಎಫ್ ಬಗ್ಗೆ ತಮಿಳಿನಲ್ಲಿ ಒಂದು ಹೊಸ ಸಿನಿಮಾ ಬರಲಿದೆ, ಈ ಸಿನಿಮಾದ ನಾಯಕ್ ಚಿಯಾನ್ ವಿಕ್ರಂ ಅವರು, ಪಾ ರಂಜಿತ್ ಅವರು ಈ ಸಿನಿಮಾ ನಿರ್ದೇಶಮ ಮಾಡುತ್ತಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಗಣಿಗಾರಿಕೆ ಹೇಗಿತ್ತು, ಗಣಿಗಾರಿಕೆಗೆ ಮಾಡುವವರ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ಕಥೆಯನ್ನು ಹೆಣೆಯಲಾಗಿದೆಯಂತೆ. ವಿಕ್ರಂ ಅವರು ನಾಯಕನಾಗಿರುವ ಈ ಸಿನಿಮಾಗೆ, ನಟಿ ರಶ್ಮಿಕಾ ಮಂದಣ್ಣ ಅವರು ಆಯ್ಕೆಯಾಗುತ್ತಾರೆ ಎನ್ನಲಾಗಿತ್ತು, ಆದರೆ ಈಗ ಚಿತ್ರತಂಡ ರಶ್ಮಿಕಾ ಅವರನ್ನು ಕೈಬಿಟ್ಟಿದೆ ಎಂದು ಹೊಸ ಸುದ್ದಿ ಹರಿದಾಡುತ್ತಿದೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಅವರ ಅಭಿನಯ ನೋಡಿ, ಈ ಅವಕಾಶ ಕೊಡಲು ಪಾ ರಂಜಿತ್ ಅವರು ನಿರ್ಧರಿಸಿದ್ದರು, ಆದರೆ ಹಲವು ಕಾರಣಗಳಿಂದ ರಶ್ಮಿಕಾ ಅವರನ್ನು ಈ ಹೊಸ ಸಿನಿಮಾ ಇಂದ ತೆಗೆದುಹಾಕಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಇವರ ಬದಲಾಗಿ ಮಾಳವಿಕಾ ಮೋಹನನ್ ಅವರಿಗೆ ಅವಕಾಶ ನೀಡಲಾಗಿದೆಯಂತೆ. ಕನ್ನಡದ ನಾನು ಮತ್ತು ವರಲಕ್ಷ್ಮಿ ಸಿನಿಮಾ ಮೂಲಕ ನಟನೆ ಶುರು ಮಾಡಿದ ಇವರು, ತಮಿಳು ಮತ್ತು ತೆಲುಗಿನಲ್ಲಿ ಅವಕಾಶ ಪಡೆದು ಮಿಂಚುತ್ತಿದ್ದಾರೆ. ನಟ ವಿಜಯ್ ಅವರೊಡನೆ ಮಾಸ್ಟರ್, ಧನುಷ್ ಅವರೊಡನೆ ಮಾರನ್ ಹೀಗೆ ಒಳ್ಳೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ವಿಕ್ರಂ ಅವರ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ಹೊಸ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ಆಕ್ಟೊಬರ್ 17ರಿಂದ ಶುರುವಾಗಿದ್ದು, ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ, 3ಡಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಹೊಂದಿದೆ ಚಿತ್ರತಂಡ.

Get real time updates directly on you device, subscribe now.