ಬಾರಿ ಅಬ್ಬರ ಪ್ರಶಂಸೆಗಳು, ವಿವಾದಗಳ ನಡುವೆ ಇಡೀ ದೇಶದಲ್ಲಿ ಕಾಂತಾರ ನಿಜವಾಗಿಯೂ ಗಳಿಸಿದ ಚಿಲ್ಲರೆ ಹಣ ಎಷ್ಟು ಗೊತ್ತೇ?? ಇಷ್ಟೇನಾ ??
ಕಾಂತಾರ ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ರಿಷಬ್ ಶೆಟ್ಟಿ ಅವರ ಈ ಮ್ಯಾಜಿಕಲ್ ಸಿನಿಮಾ ಜನರನ್ನು ಥಿಯೇಟರ್ ಗೆ ಕರೆತರುವಲ್ಲಿ ಯಶಸ್ವಿಯಾಗುತ್ತಿದೆ. ಪದೇ ಪದೇ ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಂತಾರ ಸಿನಿಮಾ ಈಗ ಪ್ಯಾನ್ ಇಂಡಿಯ ಭಾಷೆಗಳಲ್ಲಿ ತೆರೆಕಂಡು ಯಶಸ್ಸು ಕಾಣುತ್ತಿದೆ. ಸೆಪ್ಟೆಂಬರ್ 30 ರಂದು ಕನ್ನಡ ವರ್ಷನ್ ತೆರೆಕಂಡಿತ್ತು, ಸಿನಿಮಾದ ಡಿಮ್ಯಾಂಡ್ ಹೆಚ್ಚಾಗಿ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಿದೆ.
ಆಕ್ಟೊಬರ್ 14ರಂದು ತೆಲುಗು, ಆಕ್ಟೊಬರ್ 15ರಂದು ಹಿಂದಿ ಮತ್ತು ಆಕ್ಟೊಬರ್ 16ರಂದು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲಾ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ 16ನೇ ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದೆ. 16ನೇ ದಿನ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಸೇರಿಸಿ ಒಂದೇ ದಿನ 15 ಕೋಟಿ ಗಳಿಕೆ ಮಾಡಿದೆ. ಹಿಂದಿಯಲ್ಲಿ ಎರಡನೇ ದಿನ 2.75ಕೋಟಿ ಗಳಿಕೆ ಮಾಡಿದ್ದು, ಮೊದಲ ದಿನಕ್ಕಿಂತ ಎರಡನೇ ದಿನಕ್ಕೆ ದುಪ್ಪಟ್ಟಾಗಿದೆ. ಇನ್ನು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಹ ಉತ್ತಮವಾದ ಕಲೆಕ್ಷನ್ ಇದೆ. ಕನ್ನಡದಲ್ಲಿ ವಿಶ್ವಾದ್ಯಂತ 60 ರಿಂದ 70 ಕೋಟಿ ಕಲೆಕ್ಷನ್ ಮಾಡಿದೆ ಕಾಂತಾರ.
ಒಟ್ಟಾರೆಯಾಗಿ ಈಗ ಎಲ್ಲಾ ಭಾಷೆಗಳಲ್ಲು ಕಾಂತಾರ ಸಿನಿಮಾ 100 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಆದರೆ ಸಿನಿಮಾಗೆ ಇರುವ ಬೇಡಿಕೆ ನೋಡಿದರೆ, ಈ ಕಲೆಕ್ಷನ್ ಕಡಿಮೆಯೇ ಆಗಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರು ಸಹ, ಬಿಡುಗಡೆ ಆಗಿರುವ ಸ್ಕ್ರೀನ್ ಗಳ ಸಂಖ್ಯೆ ಕಡಿಮೆ ಆಗಿಲ್ಲ. ಸ್ಕ್ರೀನ್ ಗಳ ಸಂಖ್ಯೆಯನ್ನು ಇನ್ನು ಹೆಚ್ಚಿಸಿದರು, ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದು ಪಕ್ಕಾ, ಈಗಿರುವುದಕ್ಕಿಂತ ಥಿಯೇಟರ್ ಸಂಖ್ಯೆಯನ್ನು ಎರಡರಷ್ಟು ಜಾಸ್ತಿ ಮಾಡಿದರು ಜನರು ಬಂದು ಸಿನಿಮಾ ನೋಡುತ್ತಾರೆ. ಕಾಂತಾರ ಸಿನಿಮಾ ಇರುವ ರೇಂಜ್ ಗೆ ಈ ಕಲೆಕ್ಷನ್ ಮತ್ತು ಥಿಯೇಟರ್ ಗಳ ಸಂಖ್ಯೆ ಕಡಿಮೆಯೇ ಆಗಿದೆ.