ನಾಗಾರ್ಜುನ ರವರ ಮೊದಲ ಹೆಂಡತಿಯ ಮಗ ಟಾಪ್ ಹೀರೋ ಆಗಲು ಅಡ್ಡಗಾಲು ಹಾಕುತ್ತಿದ್ದಾರೆಯೇ ಎರಡನೇ ಹೆಂಡತಿ: ತೆಲುಗಿನಲ್ಲಿ ತಲ್ಲಣ ಸೃಷ್ಟಿಸಿದ ಸುದ್ದಿ. ಏನು ಗೊತ್ತೇ??
ಟಾಲಿವುಡ್ ನಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಎ. ಎನ್.ಆರ್ ಅವರ ನಂತರ ನಾಗಾರ್ಜುನ ಅವರು ಸ್ಟಾರ್ ಹೀರೋ ಆಗಿ ಒಳ್ಳೆಯ ಹೆಸರು ಸಂಪಾದಿಸಿಕೊಂಡರು. ಈಗಲೂ ಅವರಿಗೆ ಅಷ್ಟೇ ಮಹತ್ವ ಇದೆ. ಆದರೆ ನಾಗಾರ್ಜುನ ಅವರ ಮುಂದಿನ ತಲೆಮಾರು ಅವರ ರೇಂಜ್ ಗೆ ತಲುಪಿಲ್ಲ ಎನ್ನಬಹುದು. ಇಗಿರುವವರಲ್ಲಿ ನಾಗಚೈತನ್ಯ ಅವರಿಗೆ ಸ್ಟಾರ್ ಹೀರೋ ಆಗುವ ಅವಕಾಶ ಹೆಚ್ಚಾಗಿದೆ. ಏಕೆಂದರೆ ಬೇರೆಯವರಿಗೆ ಹೋಲಿಕೆ ಮಾಡಿದರೆ ಚೈತನ್ಯ ಅವರು ತಮ್ಮ ಉತ್ತಮ ನಟನೆಯಿಂದ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ಇದರಿಂದಾಗಿ ಅಕ್ಕಿನೇನಿ ಕುಟುಂಬದ ಬೇರೆ ಹೀರೋಗಳಿಗಿಂತ ಚೈತನ್ಯ ಉನ್ನತ ಸ್ತಾನದಲ್ಲಿದ್ದಾರೆ.
ನಾಗಚೈತನ್ಯ ಅವರು ಮುಂದೆ ಬಂದರೆ ಚೈತನ್ಯ ಅವರಿಗಾಗಿ ದೊಡ್ಡ ಡೈರೆಕ್ಟರ್ ಗಳು ಬಂದು ಸಿನಿಮಾ ಮಾಡುತ್ತಾರೆ, ಆದರೆ ನಾಗಾರ್ಜುನ ಅವರು ಆ ರೀತಿ ಮಾಡುತ್ತಿಲ್ಲ. ಆದರೆ ಅಖಿಲ್ ಅವರ ವಿಚಾರದಲ್ಲಿ ದೊಡ್ಡ ಡೈರೆಕ್ಟರ್ ಗಳು ಅಖಿಲ್ ಜೊತೆ ಸಿನಿಮಾ ಮಾಡುವ ಹಾಗೆ ಮಾಡುತ್ತಿದ್ದಾರೆ. ಈವರೆಗೂ ವಿವಿ ವಿನಾಯಕ್, ಸುರೇಂದರ್ ರೆಡ್ಡಿ ಅವರಂತಹ ದೊಡ್ಡ ನಿರ್ದೇಶಕರಿಂದ ಅಖಿಲ್ ಗಾಗಿ ಸಿನಿಮಾ ಮಾಡಿಸಿದ್ದಾರೆ ನಾಗಾರ್ಜುನ ಅವರು. ಆದರೆ ಈವರೆಗೂ ಅಖಿಲ್ ಅಭಿನಯಿಸಿರುವ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ. ಆದರೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಾಗಚೈತನ್ಯ ಅವರಿಗಾಗಿ ದೊಡ್ಡ ಡೈರೆಕ್ಟರ್ ಗಳನ್ನು ಯಾಕೆ ಕರೆತರುತ್ತಿಲ್ಲ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.
ನೆಟ್ಟಿಗರಲ್ಲಿ ಮೂಡುತ್ತಿರುವ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಅಮಲಾ ಅವಗಾಗಿ ನಾಗಾರ್ಜುನ ಅವರು ದೊಡ್ಡ ಡೈರೆಕ್ಟರ್ ಗಳನ್ನು ನಾಗಚೈತನ್ಯ ಅವರಿಗಾಗಿ ಕರೆತರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಮಲಾ ಅವರು ತಮ್ಮ ಮಗ ಅಖಿಲ್ ಸ್ಟಾರ್ ಹೀರೋ ಆಗಬೇಕು ಎಂದು ನಾಗಾರ್ಜುನ ಅವರ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲದೆ, ನಾಗಾರ್ಜುನ ಅವರು ನಾಗಚೈತನ್ಯ ಗಾಗಿ ಏನೇ ಪ್ರಯತ್ನ ಮಾಡಿದರು ಅಮಲಾ ಅವರು ಅದಕ್ಕೆ ತಡೆ ಹಾಕುತ್ತಿದ್ದಾರಂತೆ. ಇದರಿಂದಲೇ ನಾಗಾರ್ಜುನ ಅವರು ಅಖಿಲ್ ಕಡೆಗೆ ಮಾತ್ರ ಗಮನ ಹರಿಸುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.