ಬೌಲರ್ ಗಳ ಮೇಲೆ ನಂಬಿಕೆ ಇಲ್ಲದಿದ್ದರೂ ಭಾರತ ತಂಡ ವಿಶ್ವಕಪ್ ಗೆಲ್ಲಬಹುದು ಎಂದ ರವಿಶಾಸ್ತ್ರಿ. ಅದೇಗೆ ಅಂತೇ ಗೊತ್ತೇ??
ಭಾರತ ತಂಡದಲ್ಲಿ ಈಗ ಅತ್ಯುತ್ತಮ ಬ್ಯಾಟಿಂಗ್ ಲೈನಪ್ ಇದೆ. ಆದರೆ ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಪರಿಣಾಮಕಾರಿಯಾಗಿಲ್ಲ. ಕಳಪೆ ಫೀಲ್ಡಿಂಗ್ ಕಾರಣದಿಂದಲೇ ಇತ್ತೀಚೆಗೆ ನಡೆದ ಏಷ್ಯಾಕಪ್ ನಲ್ಲಿ ಭಾರತ ತಂಡ ಸೋಲು ಅನುಭವಿಸಿ, ಲೀಗ್ ಹಂತದಿಂದ ಹೊರಬಂದಿತ್ತು. ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಇರುವ ಸಮಸ್ಯೆಗಳು ಇನ್ನು ಬಗೆಹರಿದಿರುವ ಹಾಗೆ ತೋರುತ್ತಿಲ್ಲ. ವಿಶ್ವಕಪ್ ಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಸಹ ಭಾರತ ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ ಪರಿಣಾಮಕಾರಿಯಾಗಿ ಇರಲಿಲ್ಲ. ಇದೀಗ ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಬಗ್ಗೆ ಮಾಜಿ ಆಟಗಾರ ರವಿಶಾಸ್ತ್ರಿ ಅವರು ಮಾತನಾಡಿದ್ದಾರೆ.
“ಹಿಂದಿನ 7 ವರ್ಷಗಳಿಂದ ನಾನು ಭಾರತ ಕ್ರಿಕೆಟ್ ತಂಡದಲ್ಲಿ ಒಂದು ಭಾಗದಂತಿದ್ದೇ ಆದರೆ ಈಗ ಹೊರಗಿನಿಂದ ನೋಡಿದರೆ ತಂಡವು ಹಿಂದೆಂದಿಗಿಂತಲೂ ಬಲಿಷ್ಠವಾದ ಲೈನಪ್ ಹೊಂದಿದೆ, ಯುವ ಆಟಗಾರರು ಮತ್ತು ಅನುಭವಿ ಆಟಗಾರರ ಸಂಯೋಜನೆ. ಈಗಿರುವ ಭಾರತ ತಂಡ ಬಹಳ ಬಲಿಷ್ಠವಾಗಿದೆ, ಅದರಲ್ಲು 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಹೀಗೆ ತಂಡ ಚೆನ್ನಾಗಿ ಸಂಯೋಜನೆಯಾಗಿದೆ. ಆದರೆ ಭಾರತ ತಂಡ ಫೀಲ್ಡಿಂಗ್ ನಲ್ಲಿ ಮಾತ್ರ ಸುಧಾರಣೆ ಮಾಡಿಕೊಳ್ಳಬೇಕು.. ” ಎಂದು ರವಿಶಾಸ್ತ್ರೀ ಅವರು ಹೇಳಿದ್ದಾರೆ.
“ಫೀಲ್ಡಿಂಗ್ ನಲ್ಲಿ 15 ರಿಂದ 20 ರನ್ ಗಳನ್ನು ತಡೆದಿದ್ದೆ ಆದರೆ, ಬ್ಯಾಟಿಂಗ್ ವೇಳೆ ಬಹಳ ವ್ಯತ್ಯಾಸ ತರುತ್ತದೆ. ಪ್ರತಿ ಸಾರಿಯು ಬ್ಯಾಟಿಂಗ್ ನಲ್ಲಿಯೇ ಹೆಚ್ಚು ರನ್ ಗಳನ್ನು ಗಳಿಸಲು ಸಾಧ್ಯ ಆಗುವುದಿಲ್ಲ. ಇದೆ ಕಾರಣದಿಂದಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಭಾರತ ತಂಡಗಳು ಬಹಳ ಚೆನ್ನಾಗಿ ಫೀಲ್ಡಿಂಗ್ ಮಾಡುತ್ತಿವೆ. ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡುವ ಮೂಲಕವೇ ಶ್ರೀಲಂಕಾ ತಂಡ ಏಷ್ಯಾಕಪ್ ಗೆದ್ದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಿದೆ..” ಎಂದು ಹೇಳಿದ್ದಾರೆ ರವಿಶಾಸ್ತ್ರಿ ಅವರು. ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗು ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಭಾರತ ತಂಡ ಹೇಗೆ ಅಡುತ್ತದೆ ಎಂದು ಕಾದು ನೋಡಬೇಕಿದೆ.