ಪದೇ ಪದೇ ತಪ್ಪು ಮಾಡುತ್ತಿದ್ದಾರೆಯೇ ಪ್ರಭಾಸ್?? ಈ ಬಾರಿ ಅವರ ಅಭಿಮಾನಿಗಳೇ ಆ ಸಿನಿಮಾ ಒಪ್ಪಿಕೊಳ್ಳಬೇಡಿ ಎಂದದ್ದು ಯಾಕೆ ಗೊತ್ತೇ??
ನಟ ಡಾರ್ಲಿಂಗ್ ಪ್ರಭಾಸ್ ಅವರು ಮೋಸ್ಟ್ ಬ್ಯುಸಿಯೆಸ್ಟ್ ಹೀರೋ ಆಗಿದ್ದಾರೆ. ಬಿಗ್ ಪ್ರಾಜೆಕ್ಟ್ಸ್ ಗಳಲ್ಲಿಯೇ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಟೀಸರ್ ಬಿಡುಗಡೆಯಾಗಿ, ಸಿನಿಮಾ ಸಹ ಬಿಡುಗಡೆಗೆ ಸಿದ್ಧವಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ, ಪ್ರಶಾಂತ್ ನೀಲ್ ಅವರೊಡನೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೆ ಸಂದೀಪ್ ರೆಡ್ಡಿ ವಂಗ ಅವರೊಡನೆ ಸ್ಪಿರಿಟ್ ಸಿನಿಮಾ ಮಾಡುತ್ತಿದ್ದಾರೆ, ಇದರೊಂದಿಗೆ ಮಾರುತಿ ಅವರೊಡನೆ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಾಹುಬಲಿ ಸಿನಿಮಾ ಇಂದ ಪ್ಯಾನ್ ಇಂಡಿಯಾ ಹೀರೋ ಆಗಿ ಬದಲಾದ ಪ್ರಭಾಸ್ ಅವರಿಗೆ ನಂತರ ತೆರೆಕಂಡ ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾ ಯಶಸ್ಸು ನೀಡಲಿಲ್ಲ.
ಆದರೆ ಬಾಲಿವುಡ್ ಗೆ ಎಂಟ್ರಿ ಕೊಡುವಲ್ಲಿ ಪ್ರಭಾಸ್ ಯಶಸ್ವಿಯಾದರು. ಆದಿಪುರುಷ್ ಸಿನಿಮಾ ಬಿಡುಗಡೆ ಆಗಿದ್ದು, ಮುಂದಿನ ವರ್ಷ ತೆರೆಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಸಹ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಅದಾದ ಬಳಿಕ ಪ್ರಾಜೆಕ್ಟ್ ಕೆ ಮತ್ತು ಸ್ಪಿರಿಟ್ ಸಿನಿಮಾ ಸಾಲಿನಲ್ಲಿದೆ. ಹೀಗಿರುವಾಗ ಪ್ರಭಾಸ್ ಅವರು ಮಾರುತಿ ಅವರೊಡನೆ ಹಾರರ್ ಸಿನಿಮಾ ಒಂದರಲ್ಲಿ ನಟಿಸುತ್ತಾರೆ, ಮಾರುತಿ ಅವರ ಸಿನಿಮಾಗೆ ಓಕೆ ಹೇಳಿದ್ದಾರೆ ಎನ್ನುವ ಸುದ್ದಿ ತೆಲುಗು ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿದೆ.
ಈ ಸಿನಿಮಾದಲ್ಲಿ ನಾಯಕಿಯರಾಗಿ ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನ್ ನಟಿಸುತ್ತಾರೆ ಎನ್ನಲಾಗಿದೆ, ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಇದು ಪ್ರಭಾಸ್ ಅವರ ಕೆರಿಯರ್ ಗೆ ಅಪಾಯವಾಗುತ್ತದೆ ಎಂದು ಪ್ರಭಾಸ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮಾರುತಿ ಅವರೊಡನೆ ಪ್ರಭಾಸ್ ಯಾಕೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಈಗ ಎದುರಾಗಿದೆ..ಮಾರುತಿ ಅವರು ಪ್ರೇಮ್ ಕಥಾ ಸಿನಿಮಾ ನಿರ್ದೇಶನ ಮಾಡಿದ್ದರು, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು, ಇದರಲ್ಲಿದ್ದ ಕಲಾವಿದರೂ ಹೊಸಬರಾಗಿದ್ದ ಕಾರಣ ಹೆಫ್ಹು ನಷ್ಟ ಆಗಲಿಲ್ಲ.ಆದರೆ ಪ್ರಭಾಸ್ ಅವರು ಈಗ ಹಾಲಿವುಡ್ ರೇಂಜ್ ನಲ್ಲಿದ್ದಾರೆ, ಅವರು ಇಂತಹ ಸಿನಿಮಾ ಮಾಡಿದರೆ ನೇಮ್ ಫೇಮ್ ಕಡಿಮೆ ಆಗುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.