ಪೋಷಕರು ಅತಿಯಾದ ಪ್ರೀತಿ ತೋರಿಸಿ ಮಕ್ಕಳನ್ನು ಹಾಳು ಮಾಡುತ್ತಿರುವ ಕಾಲದಲ್ಲಿ, ಈ ಕೆಲಸ ಮಾಡುವ ರಾಶಿಗಳು ಯಾವ್ಯಾವು ಗೊತ್ತೇ??

16

Get real time updates directly on you device, subscribe now.

ಪ್ರತಿಯೊಂದು ಮಗುವಿನ ಜೀವನದಲ್ಲಿ ತಂದೆ ತಾಯಿಯರ ಪಾತ್ರ ಬಹಳ ಮುಖ್ಯವಾದದ್ದು. ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಸರಿಯಾಗಿ ಯೋಚನೆ ಮಾಡಿ, ಮಕ್ಕಳು ಕಷ್ಟಪಡಬೇಕು, ಜೀವನದಲ್ಲಿ ಕಷ್ಟ ಅನುಭವಿಸಬೇಕು ಆಗಲೇ ಪ್ರಪಂಚ ಹೇಗೆ ಜೀವಿಸುವುದು ಹೇಗೆ ಎಂದು ಅವರಿಗೆ ಅರ್ಥ ಆಗುತ್ತದೆ ಎಂದು ತಿಳಿದುಕೊಂಡು, ತಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಾರೆ. ಆದರೆ ಇನ್ನು ಕೆಲವು ಪೋಷಕರು ಮಕ್ಕಳು ಕೇಳುವ ಮೊದಲೇ, ಅಗತ್ಯಕ್ಕೆ ಮೀರಿದ ಸೌಕರ್ಯಗಳನ್ನು ಮಕ್ಕಳಿಗೆ ನೀಡುತ್ತಾರೆ. ಇದರಿಂದ ಮಕ್ಕಳು ಹಾಳಾಗುವ ಸಾಧ್ಯತೆಗಳು ಸಹ ಹೆಚ್ಚು. ಹಾಗಾಗಿ ಮಕ್ಕಳಿಗೆ ಅಗತ್ಯಕ್ಕೆ ಮೀರಿದ ಸೌಕರ್ಯಗಳನ್ನು ನೀಡಬಾರದು. ಹೀಗೆ ಮಕ್ಕಳಿಗೆ ಹೆಚ್ಚಿನ ಸೌಕರ್ಯ ನೀಡಿ ಹಾಳು ಮಾಡುವ ಪೋಷಕರು ಯಾವ ಯಾವ ರಾಶಿಗೆ ಸೇರುತ್ತಾರೆ ಎಂದು ತಿಳಿಸುತ್ತೇವೆ ನೋಡಿ.

ವೃಷಭ ರಾಶಿ :- ಈ ರಾಶಿಯವರು ಐಷಾರಾಮಿ ಜೀವನ ಇಷ್ಟಪಡುತ್ತಾರೆ ಹಾಗಾಗಿ ತಮ್ಮ ಮಕ್ಕಳ ಜೀವನ ಸಹ ಹಾಗೆ ಇರಬೇಕು, ಯಾವುದಕ್ಕೂ ಅವರು ಕಷ್ಟಪಡಬಾರದು ಎಂದು ವೃಷಭ ರಾಶಿಯವರು ತಮ್ಮ ಮಕ್ಕಳಿಗಾಗಿ ಶಕ್ತಿಮೀರಿ ಪ್ರಯತ್ನಪಡುತ್ತಾರೆ. ಮಕ್ಕಳಿಗೆ ಎಲ್ಲವೂ ಕೊಡಬೇಕು, ಅವರು ಇಷ್ಟಪಟ್ಟಿದ್ದೆಲ್ಲವನ್ನು ಕೊಡಿಸಬೇಕು ಎಂದು, ಅವರ ಜೀವನ ಚೆನ್ನಾಗಿರಬೇಕು ಎಂದು ತಮ್ಮ ಶ್ರಮಕ್ಕಿಂತ ಹೆಚ್ಚು ಪ್ರಯತ್ನ ಮಾಡಿ, ತಮ್ಮ ದುಡಿಮೆ ಮತ್ತು ಜೀವನವನ್ನು ಇದಕ್ಕಾಗಿಯೇ ಇಡುತ್ತಾರೆ. ಈ ರಾಶಿಯವರಿಗೆ ಐಷಾರಾಮಿ ವಸ್ತುಗಳು ಇಷ್ಟ, ಹಾಗಾಗಿ ತಮ್ಮ ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡಿಸಬೇಕು ಎಂದು ಬಯಸುತ್ತಾರೆ. ಇದರಿಂದ ಮಕ್ಕಳು ಸಹ ಹಾಳಾಗುತ್ತಾರೆ.

ಕರ್ಕಾಟಕ ರಾಶಿ :- ತಮ್ಮ ಮಕ್ಕಳಿಗೆ ಅಗತ್ಯ ಇಲ್ಲದಿದ್ದರೂ ಸಹ, ಕೆಲವು ವಸ್ತುಗಳನ್ನು ತಮ್ಮ ಮಕ್ಕಳಿಗೆ ನೀಡಲೇಬೇಕು ಎಂದು ಆಸೆ ಪಡುತ್ತಾರೆ. ಮಕ್ಕಳಿಗೆ ಹಾಕಬೇಕಾದ ಕೆಲವು ಲಿಮಿಟ್ಸ್ ಗಳನ್ನು ಸಹ ಬಿಟ್ಟು, ಮಕ್ಕಳಿಗೆ ಎಲ್ಲವನ್ನು ಕೊಡಿಸುತ್ತಾರೆ. ಈ ರಾಶಿಯವರು ಭಾವನಾತ್ಮಕ ಜೀವಿಗಳು, ಇವರಲ್ಲಿ ಪ್ರೀತಿ ಹೆಚ್ಚಾಗಿರುವುದರಿಂದ, ತಮ್ಮ ಮಕ್ಕಳಿಗೆ ಎಲ್ಲವನ್ನು ನೀಡಿ, ಅವರಿಗೆ ಕಷ್ಟ ಗೊತ್ತಾಗದೆ ಇರುವ ಹಾಗೆ ಬೆಳೆಸುತ್ತಾರೆ.

ಸಿಂಹ ರಾಶಿ :- ಈ ರಾಶಿಯವರು ತಮ್ಮ ಮಕ್ಕಳಿಗೆ ಜೀವನದಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ, ದುಬಾರಿ ಐಷಾರಾಮಿ ವಸ್ತುಗಳನ್ನು ಗಿಫ್ಟ್ ಆಗಿ ನೀಡುತ್ತಾ ಇರುತ್ತಾರೆ. ತಮ್ಮ ಮಕ್ಕಳು ಏನನ್ನೇ ಕೇಳಿದರು ಸಹ ಇವರು ನಿರಾಕರಣೆ ಮಾಡುವುದಿಲ್ಲ. ಮಕ್ಕಳಿಗೆ ಅದರ ಅವಶ್ಯಕತೆ ಇದ್ದರು ಇಲ್ಲದೆ ಇದ್ದರು, ಮಕ್ಕಳು ಕೇಳಿದ್ದನ್ನು ಕೊಡಲು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ.

ವೃಶ್ಚಿಕ ರಾಶಿ : – ಈ ರಾಶಿಯವರು ತಮ್ಮ ಮಕ್ಕಳು ಏನನ್ನೇ ಕೇಳಿದರು ಸಹ, ತಮ್ಮ ಮಕ್ಕಳ ಅವಶ್ಯಕತೆ, ಕನಸುಗಳು, ಏನೇ ಇದ್ದರೂ ಯಾವುದಕ್ಕೂ ಇಲ್ಲ ಎನ್ನದೆ ಕೊಡಿಸುತ್ತಾರೆ. ಈ ರೀತಿ ಇರುವುದು ಮಕ್ಕಳು ಹಾಳಾಗುವ ಹಾಗೆ ಮಾಡಬಹುದು. ಈ ರಾಶಿಯವರು ಐಷಾರಾಮಿ ಜೀವನ ನಡೆಸುತ್ತಾರೆ. ತಮ್ಮ ಮಕ್ಕಳು ಸಹ ಅದೇ ರೀತಿ ಬದುಕಬೇಕು ಎಂದು ಬಯಸುತ್ತಾರೆ.

Get real time updates directly on you device, subscribe now.