KGF VS ಗಂಧದ ಗುಡಿ: ಬಿಡುಗಡೆಯಾದ 24 ಗಂಟೆಯಲ್ಲಿ ಎರಡು ಟ್ರೈಲರ್ ಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದದ್ದು ಯಾವ ಸಿನೆಮಾದ್ದು ಗೊತ್ತೇ??

19

Get real time updates directly on you device, subscribe now.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಎಲ್ಲರ ಪ್ರೀತಿಯ ಮನೆಮಗ ಅಪ್ಪು ಅವರ ಅತಿದೊಡ್ಡ ಕನಸುಗಳಲ್ಲಿ ಒಂದು ಗಂಧದಗುಡಿ ಸಾಕ್ಷ್ಯಚಿತ್ರ. ನಮ್ಮ ಕರ್ನಾಟಕದ ವನ್ಯ ಪ್ರದೇಶದ, ನಮ್ಮ ಕಾಡುಗಳು, ನಮ್ಮ ರಾಜ್ಯದ ಸೌಂದರ್ಯವನ್ನು ತೋರಿಸುವ ಅಪ್ಪು ಅವರ ಪ್ರಯತ್ನ ಆಗಿದೆ ಗಂಧದಗುಡಿ. ಅಪ್ಪು ಅವರು ಈ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು. ಅಪ್ಪು ಅವರಿದ್ದಾಗ ಚಂದನವನದ ಕಲಾವಿದರ ಜೊತೆಗೆ ಗಂಧದಗುಡಿ ಬಗ್ಗೆ ಚರ್ಚೆ ಮಾಡಿದ್ದರು.

ಅಪ್ಪು ಅವರ ಬಹುಸಮಯದ ಕನಸು ಗಂಧದಗುಡಿ ಸಿನಿಮಾ ಈಗ ತೆರೆಕಾಣಲು ಸಿದ್ಧವಾಗಿದೆ. ಅಕ್ಟೋಬರ್ 28ರಂದು ಗಂಧದಗುಡಿ ಬಿಡುಗಡೆ ಆಗುತ್ತಿದ್ದು, ಅಕ್ಟೋಬರ್ 9ರ ಭಾನುವಾರ ಸಿನಿಮಾದ ಟ್ರೈಲರ್ ಅನ್ನು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮತ್ತು ದೊಡ್ಮನೆ ಕುಟುಂಬ ಬಿಡುಗಡೆ ಮಾಡಿತು. ಟ್ರೈಲರ್ ನೋಡಿದ ಬಳಿಕ ಎಲ್ಲರೂ ಭಾವುಕರಾಗಿದ್ದರು. ಅಪ್ಪು ಅವರನ್ನು ಕೊನೆಯ ಬಾರಿ ಬೆಳ್ಳಿತೆರೆಯಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಇದಾಗಿದೆ. ಗಂಧದಗುಡಿ ಟ್ರೈಲರ್ ಬಿಡುಗಡೆಯಾಗಿ ಒಂದೇ ದಿನದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದೆ. ಅದೇನೆಂದರೆ, ಗಂಧದಗುಡಿ ಟ್ರೈಲರ್ ಬಿಡುಗಡೆಯಾದ ದಿನದಲ್ಲಿ 1 ಕೋಟಿ ವೀಕ್ಷಣೆ ಪಡೆದಿದೆ.

10ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ ಗಂಧದಗುಡಿ ಟ್ರೈಲರ್. ಇದಕ್ಕಿಂತ. ಬಹುನಿರೀಕ್ಷಿತ ಕೆಜಿಎಫ್2 ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ದಾಖಲೆ ಬರೆದಿತ್ತು, ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಆಗಿದ್ದ ಕೆಜಿಎಫ್2 ಟ್ರೈಲರ್, 24 ಗಂಟೆಗಳಲ್ಲಿ 107 ಮಿಲಿಯನ್ ವೀಕ್ಷಣೆ ಪಡೆದಿತ್ತು. ಇದೀಗ ಗಂಧದಗುಡಿ ಟ್ರೈಲರ್ ಸಹ ಒಂದೇ ದಿನದಲ್ಲಿ ಕೋಟಿ ವೀಕ್ಷಣೆ ಗಳಿಸಿ ಮುನ್ನುಗ್ಗುತ್ತಿದೆ. ಗಂಧದಗುಡಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮುಂದಿನ ಲೆವೆಲ್ ಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಅಪ್ಪು ಅವರ ಈ ದೊಡ್ಡ ಕನಸನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ.

Get real time updates directly on you device, subscribe now.