ಧ್ರುವ ಸರ್ಜಾ ಮಗಳಿಗೆ ಏನೆಂದು ಹೆಸರು ಇಡುತ್ತೀರಿ ಎಂದಿದ್ದಕ್ಕೆ ಉತ್ತರ ಕೊಟ್ಟ ಧ್ರುವ: ಉತ್ತರ ಕಂಡು ಶಾಕ್ ಆದ ಮೇಘನಾ ರಾಜ್. ಯಾಕೆ ಗೊತ್ತೇ??
ನಟ ಧ್ರುವ ಸರ್ಜಾ ಅವರು ಈಗ ಹೆಣ್ಣುಮಗುವಿನ ತಂದೆಯಾದ ಸಂತೋಷದಲ್ಲಿದ್ದಾರೆ. ಆಕ್ಟೊಬರ್ 2ರಂದು ಗಾಂಧಿ ಜಯಂತಿ ದಿನ, ನವರಾತ್ರಿ ಸಂಭ್ರಮದ ನವ ದುರ್ಗೆಯರ ದಿನದಂದು ಧ್ರುವ ಸರ್ಜಾ ಅವರ ಸರ್ಜಾ ಕುಟುಂಬಕ್ಕೆ ಮುದ್ದಾದ ಹೆಣ್ಣುಮಗುವಿನ ಆಗಮನವಾಯಿತು. ಅಣ್ಣನ ಮಗನನ್ನೇ ತಮ್ಮ ಮಗ ಎಂದುಕೊಂಡಿರುವ ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗು ಬೇಕು ಎಂದು ಬಹಳ ಆಸೆ ಇತ್ತು, ಅವರ ಆಸೆಯಂತೆಯೇ ಹೆಣ್ಣು ಮಗು ಜನಿಸಿರುವುದು ಕುಟುಂಬದಲ್ಲಿ ಅಪಾರವಾದ ಸಂತೋಷ ತಂದಿದೆ. ಮಗಳು ಹುಟ್ಟಿದ್ದಾಗ, ಬಹಳ ಸಂತೋಷದಿಂದ ಆಸ್ಪತ್ರೆಯಲ್ಲಿ ಮಾತನಾಡಿದ್ದರು ಧ್ರುವ..
ಮಗಳು ಹುಟ್ಟಿದ್ದಾಳೆ, ತುಂಬಾ ಸಂತೋಷ ಆಗಿದೆ, ನಾರ್ಮಲ್ ಡೆಲಿವರಿ ಅಮ್ಮ ಮಗು ಇಬ್ಬರು ಚೆನ್ನಾಗಿದ್ದಾರೆ ಎಂದು ಧ್ರುವ ಸರ್ಜಾ ಹೇಳಿದ್ದರು. ಮಗುವನ್ನು ನೋಡಲು ಮೇಘನಾ ರಾಜ್ ಅವರು ಸಹ ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಬಂದಿದ್ದರು, ರಾಯನ್ ಪುಟ್ಟ ತಂಗಿಯನ್ನು ನೋಡಿ ಸಂತೋಷ ಪಟ್ಟಿತ್ತು, ಮೇಘನಾ ರಾಜ್ ಅವರು ಮಗುವನ್ನು ನೋಡಿ, ಮಗಳು ಹುಟ್ಟಿರೋದು ತುಂಬಾ ಸಂತೋಷ ಆಗಿದೆ, ತಾಯಿ ಮಗು ಇಬ್ಬರೂ ಕ್ಷೇಮವಾಗಿದ್ದಾರೆ, ಫ್ಯಾಮಿಲಿ ಪೂರ್ತಿ ಆಸ್ಪತ್ರೆ ಒಳಗಿದೆ, ಬ್ಯೂಟಿಫುಲ್ ಡೆಲಿವರಿ ಆಗಿದೆ ಎಂದು ಹೇಳಿದ್ದರು. ಆಕ್ಟೊಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಇತ್ತು.
ಅವರ ಹುಟ್ಟುಹಬ್ಬಕ್ಕೆ ಮಗಳೇ ದೊಡ್ಡ ಉಡುಗೊರೆ ಆಗಿದ್ದಾಳೆ, ಹುಟ್ಟುಹಬ್ಬದ ದಿನ ಮಗಳ ಬಗ್ಗೆ ಮಾತನಾಡಿದ ಧ್ರುವ, ಇಂದು ಅಣ್ಣ ಇರಬೇಕಿತ್ತು ಅನ್ನಿಸ್ತಿದೆ ಅಣ್ಣನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ..ಇನ್ನುಮುಂದೆ ಜೀವನದಲ್ಲಿ ಏನೇ ಕಷ್ಟ ಬಂದರೂ ಅದಕ್ಕೆ ಪರಿಹಾರ ನನ್ನ ಮಗಳೇ.. ಎಂದಿದ್ದರು ಧ್ರುವ. ಇನ್ನು ಮಾಧ್ಯಮದವರು ಮಗಳಿಗೆ ಏನು ಹೆಸರು ಇಡಬೇಕು ಎಂದು ಪ್ಲಾನ್ ಮಾಡಿದ್ದೀರಾ ಎಂದು ಕೇಳಿದರು, ಆಗ ಧ್ರುವ ಅವರು ಮೇಘನಾ ಅವರ ಕಡೆ ನೋಡಿ, ಇನ್ನುಮುಂದೆ ಡಿಸೈಡ್ ಮಾಡಬೇಕು ಎಂದು ಹೇಳಿದರು. ಧ್ರುವ ಅವರು ಹೇಳಿದ ಈ ಉತ್ತರ ಕೇಳಿ ಮೇಘನಾ ರಾಜ್ ಅವರು ಶಾಕ್ ಆಗಿದ್ದಾರೆ.