ಈಕೆಯ ಅಂದವೇ ಇವಳಿಗೆ ಮುಳುವಾಯ್ತು: ಸೌಂದರ್ಯ ನೋಡಿ, ಮೈಂಡ್ ಬ್ಲಾಕ್ ಆಗಿ ಮದುವೆಯಾದ. ಆದರೆ ಕೊನೆಗೆ ಏನಾಯಿತು ಗೊತ್ತೇ??
ಅನುಮಾನ ಅಥವಾ ಸಂದೇಹ ಎನ್ನುವುದು ಒಬ್ಬ ಮನುಷ್ಯನಲ್ಲಿ ಬರುವ ವಾಸಿಯಾಗದ ಖಾಯಿಲೆ ಆಗಿರುತ್ತದೆ. ಏನೇ ಔಷಧಿಗಳನ್ನು ಕೊಟ್ಟರು ಸಹ ಈ ಖಾಯಿಲೆ ಗುಣ ಆಗುವುದಿಲ್ಲ. ಅನುಮಾನದ ಖಾಯಿಲೆ ಇರುವ ವ್ಯಕ್ತಿಯ ಮಾತ್ರವಲ್ಲದೆ ಅವರ ಜೊತೆಯಲ್ಲಿರುವವರ ಜೀವನ ಸಹ ಹಾಳಾಗುತ್ತದೆ. ಅನುಮಾನ ತುಂಬಾ ಅಪಾಯಕಾರಿ, ಇದು ತಿನ್ನಲು ಬಿಡುವುದಿಲ್ಲ, ಮಲಗಲು ಬಿಡುವುದಿಲ್ಲ. ಅದರಲ್ಲೂ ವೈವಾಹಿಕ ಜೀವನದಲ್ಲಿ ಅನುಮಾನ ಎನ್ನುವ ಖಾಯಿಲೆ ಬಂದರೆ, ಅದರಿಂದ ಪ್ರಾಣ ಹೋಗುವ ಹಂತವನ್ನು ಸಹ ತಲುಪಬಹುದು. ಇಂಥದ್ದೇ ಒಂದು ಘಟನೆ ನಿಜಮಾಬಾದ್ ನಲ್ಲಿ ನಡೆದಿದೆ.
ಸೈಯದ್ ಸುಲ್ತಾನ್ ಎನ್ನುವ ವ್ಯಕ್ತಿ ಅನೀಸ್ ಫಾತಿಮಾ ಎನ್ನುವ ಹುಡುಗಿಯ ಜೊತೆಗೆ 2013ರಲ್ಲಿ ಮದುವೆಯಾದರು. ಈ ಹುಡುಗಿಯ ತಂದೆಯ ಹೆಸರು ಸೈಯದ್ ಖಲೀಮ್. ಸುಲ್ತಾನ್ ಮತ್ತು ಫಾತಿಮಾ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಫಾತಿಮಾ ಅವರ ಮೇಲೆ ಗಂಡನಿಗೆ ಅನುಮಾನ ಬಂದಿತ್ತು, ಇದರಿಂದಾಗಿ ಆತ ಫಾತಿಮಾ ಗೆ ಕಿರುಕುಳ ಕೊಡುತ್ತಿದ್ದನು. ಗಂಡನಿಂದ ಕಿರುಕುಳ ಹೆಚ್ಚಾದ ಫಾತಿಮಾ ತಮ್ಮ ಮಕ್ಕಳ ಜೊತೆಗೆ ಬೇರೆಯಾಗಿ ವಾಸ ಮಾಡುತ್ತಿದ್ದರು.
ಇದರಿಂದ ಕೋಪಗೊಂಡ ಆಕೆಯ ಗಂಡ ಸೈಯದ್, ಫಾತಿಮಾ ಮಲಗಿದ್ದ ಕೋಣೆಗೆ ಹೋಗಿ ಪತ್ನಿಯ ಕೊಲೆಯನ್ನೇ ಮಾಡಿದ್ದಾನೆ. ನಂತರ ತನ್ನ ಚಿಕ್ಕಪ್ಪನಿಗೆ ಕರೆಮಾಡಿ, ಮಕ್ಳಳು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಫಾತಿಮಾ ಮನೆಗೆ ಆಕೆಯ ತಂದೆ ಹೋದಾಗ ತಮ್ಮ ಮಗಳು ಚೋಕರ್ ಹಾಕಿಕೊಂಡು ಮಲಗಿರುವುದು ನೋಡಿದ್ದು, ಅದನ್ನು ನೋಡಿದ ತಕ್ಷಣವೇ ಆತನಿಗೆ ಅಳಿಯನೇ ಕೊಲೆ ಮಾಡಿರುವುದು ಎಂದು ಅನ್ನಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.