ಅವಳಿ ಮಕ್ಕಳಿಗೆ ತಾಯಿಯಾದ ಎರಡೇ ದಿನಕ್ಕೆ ನಯನತಾರ ದಂಪತಿಗೆ ಬಿಗ್ ಶಾಕ್ ಕೊಟ್ಟ ತಮಿಳುನಾಡು ಮಿನಿಸ್ಟರ್. ಏನು ಮಾಡಿದ್ದಾರೆ ಗೊತ್ತೇ?
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ನಯನತಾರ ಅವರು ನಮ್ಮೆಲ್ಲರಿಗೂ ಗೊತ್ತಿದೆ. ಈ ವರ್ಷ ಜೂನ್ ತಿಂಗಳಿನಲ್ಲಿ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆಗೆ ಮದುವೆಯಾದರು. ಈ ಜೋಡಿ ಇತ್ತೀಚೆಗೆ ಅವಳಿ ಮಕ್ಕಳ ತಂದೆ ತಾಯಿಯಾದರು. ಮದುವೆಯಾದ ನಾಲ್ಕು ತಿಂಗಳಲ್ಲೇ ಈ ಜೋಡಿ ಅವಳಿ ಮಕ್ಕಳ ತಂದೆ ತಾಯಿ ಆಗಿದ್ದಾರೆ ಎಂದು ತಿಳಿಸಿದರು, ಈ ಸುದ್ದಿ ಅವರ ಅಭಿಮಾನಿಗಳಿಗೂ ಶಾಕ್ ಆಗಿತ್ತು. ಈ ಜೋಡಿ surrogacy ಮೂಲಕ ಮಕ್ಕಳನ್ನು ಪಡೆದಿದ್ದಾರೆ, ಅಂದರೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಕೆಲವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದನ್ನು ಟೀಕೆ ಮಾಡುತ್ತಿದ್ದರೆ, ನಯನತಾರ ಅವರಿಗೆ ಕೆಲವು ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದು ತಂದೆ ತಾಯಿ ಆಗಿರುವ ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿಗೆ ತಮಿಳುನಾಡು ಸರ್ಕಾರ ಶಾಕ್ ನೀಡಿದೆ. ಮದುವೆ ಆಗಿ ನಾಲ್ಕು ತಿಂಗಳಲ್ಲೇ ಮಗು ಹೇಗೆ ಜನಿಸಿತು ಎಂದು ತನಿಖೆ ಮಾಡಲು ತಮಿಳುನಾಡು ಸರ್ಕಾರ ತಿಳಿಸಿದೆ ಎಂದು ಮಾಹಿತಿ ಸಿಕ್ಕಿದೆ. ಭಾರತದಲ್ಲಿ ಬಾಡಿಗೆ ತಾಯ್ತನವನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಹೆಣ್ಣಿಗೆ ಗರ್ಭ ಧರಿಸಲು ಅಸಮರ್ಥತೆ ಇದ್ದಾಗ ಮಾತ್ರ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ವಿಧಾನವನ್ನು ಅನುಸರಿಸಬಹುದು. 2022ರ ಜನವರಿ ತಿಂಗಳಿನಲ್ಲಿ ತಂದಿರುವ ರೂಲ್ಸ್ ಗಳ ಪ್ರಕಾರ ಚೆನ್ನಾಗಿರುವ ಮಹಿಳೆಯರು ಈ ರೀತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಜೋಡಿಯ ಮಕ್ಕಳು ಹೇಗೆ ಜನಿಸಿದರು ಎಂದು ವರದಿ ನೀಡಬೇಕು ಎಂದು ತಮಿಳುನಾಡು ಸರ್ಕಾರ ನೋಟೀಸ್ ನೀಡಿದೆ ಎನ್ನಲಾಗಿದ್ದು, ಈ ಜೋಡಿ ಈ ತನಿಖೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಮಹಿಳೆಯರು ತಮ್ಮ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳಬಹುದು, ಇದರಿಂದ ತಮಗೆ ಬೇಕು ಎನ್ನಿಸಿದಾಗ ತಾಯಿ ಆಗಬಹುದು. ತಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕು, ಕೆರಿಯರ್ ಬಗ್ಗೆ ಗಮನ ಹರಿಸುವವರು, ಗರ್ಭ ಧರಿಸಲು ತೊಂದರೆ ಆಗಬಹುದು ಎನ್ನಿಸುವ ಹಾಗೆ ಇರುವವರು, ಆರೋಗ್ಯ ಸಮಸ್ಯೆ ಇಂದ ಬಳಲುತ್ತಿರುವವರು, ಹೆಣ್ಣುಮಕ್ಕಳ ಸಮಸ್ಯೆಯಿಂದ ಬಳಲುತ್ತಿರುವವರು, ಕೌಟುಂಬಿಕ ಕಾರಣಗಳಿಂದ ತಡವಾಗಿ ಮಗುವಾಗಬೇಕು ಎಂದು ಬಯಸುವವರು, ಬೇರೆ ವೈಯಕ್ತಿಕ ಕಾರಣಗಳು ಇರುವವರು ಬಾಡಿಗೆ ತಾಯ್ತನವನ್ನು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಹುದು. ಒಂಟಿಯಾಗಿರುವ ಪುರುಷರು ಸಹ ಐವಿಎಫ್ ಟೆಕ್ನಿಕ್ ಮೂಲಕ ಮಗುವನ್ನು ಪಡೆಯಬಹುದು. ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಸಹ ಇದೇ ರೀತಿಯಲ್ಲಿ ಮಗುವನ್ನು ಪಡೆದಿದ್ದಾರೆ .