ಕಾರ್ ನಲ್ಲಿ ಅದೊಂದು ಕೆಟ್ಟ ಕೆಲಸ ಮಾಡುತ್ತಾ ಸಮಂತಾ ರವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಟನ ಮಗಳು. ಕೊನೆಗೆ…
ಇತ್ತೀಚಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಕೆಲವು ವಿಚಾರಗಳನ್ನು ಗಾಸಿಪ್ ಗಳನ್ನು ಕೇಳುತ್ತಲೇ ಬಂದಿದ್ದೇವೆ. ಈ ಸಿನಿಮಾ ನಟರ ಮಗ ಇಂಥಹ ಜಾಗದಲ್ಲಿ ಸಿಕ್ಕಿಬಿದ್ದ, ಆ ನಟನ ಮಗಳು ಅಲ್ಲಿ ಸಿಕ್ಕಿಹಾಕಿಕೊಂಡಳು, ಇಂತಹ ಅನೇಕ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಲೇ ಇರುತ್ತದೆ. ದೊಡ್ಡ ದೊಡ್ಡ ಕಲಾವಿದರು ಸೆಲೆಬ್ರಿಟಿಗಳು ಹಾಗೂ ದೊಡ್ಡ ವ್ಯಕ್ತಿಗಳ ಮಕ್ಕಳು ಅತಿಯಾದ ಕೆಲಸಗಳನ್ನು ಮಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಮನೆಯ ಮಕ್ಕಳುಗಳು ಧೂಮಪಾನ, ಮದ್ಯಪಾನ ಮತ್ತು ಇನ್ನಿತರ ಕೆಲಸಗಳನ್ನು ಮಾಡುತ್ತಾ ಸಿಕ್ಕಿಹಾಕಿಕೊಂಡಿರುವ ಉದಾಹರಣೆಗಳು ಸಹ ಸಾಕಷ್ಟಿವೆ.
ಅದೇ ರೀತಿ ಒಬ್ಬ ಸ್ಟಾರ್ ನಟನ ಮಗಳು ಕಾರ್ ನಲ್ಲಿ ಆ ಕೆಲಸ ಮಾಡುತ್ತಾ ಸಮಂತಾ ಅವರ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಆ ಸ್ಟಾರ್ ನಟನ ಮಗಳಿಗೆ ಚಿತ್ರರಂಗದಲ್ಲಿ ಪರಿಚಯದ ಅಗತ್ಯವಿಲ್ಲ, ಚಿತ್ರರಂಗದಲ್ಲಿ ಆಕೆ ಗುರುತಿಸಿಕೊಂಡಿದ್ದಾರೆ. ಸ್ಟಾರ್ ನಟನ ಮಗಳಾಗಿರುವ ಕಾರಣ ಆಕೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಇದೆ, ಹೀಗಿರುವ ಹುಡುಗಿ ವೀಕೆಂಡ್ ನಲ್ಲಿ ಶನಿವಾದ ಮತ್ತು ಭಾನುವಾರ ಒಂದು ಪಾರ್ಟಿಗೆ ಹೋಗಿದ್ದಾಳೆ. ಅಸಲಿ ವಿಚಾರ ಏನೆಂದರೆ.. ಆ ಸ್ಟಾರ್ ನಟನ ಮಗಳು ಹೋಗಿದ್ದು ಬರ್ತ್ ಡೇ ಪಾರ್ಟಿಗೆ, ಅಲ್ಲಿ ಕಾರ್ ನ ಒಳಗೆ ಕೂತು ಆ ಕೆಲಸ ಮಾಡುವಾಗ, ಅದೇ ಪಾರ್ಟಿಗೆ ಬಂದ ನಟಿ ಸಮಂತಾ ಅವರು ಇದನ್ನು ಕಣ್ಣಾರೆ ನೋಡಿ, ಆಕೆಯನ್ನು ಹೊರಗೆ ಕರೆದು ಚೆನ್ನಾಗಿ ಕ್ಲಾಸ್ ತೆಗೆದುಕೊಂಡರಂತೆ.
ಸ್ಮೋಕ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ನಿಮ್ಮ ತಂದೆಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರಿದೆ, ಅವರಿಗೆ ಇರುವ ಹೆಸರನ್ನು ಕೆಡಿಸಬೇಡ ಎಂದು ಸಮಂತಾ ಅವರು ಆ ಸ್ಟಾರ್ ನಟನ ಮಗಳಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟರಂತೆ. ಎಂಜಾಯ್ ಮಾಡು ಆದರೆ ಮಿತಿ ಮೀರಿ ಯಾವುದನ್ನು ಮಾಡಬೇಡ ಎಂದು ಹೇಳಿದರಂತೆ ಸಮಂತಾ. ಆಗ ಆ ಸ್ಟಾರ್ ನಟನ ಮಗಳು, ನನ್ನನ್ನು ಕ್ಷಮಿಸಿ, ಇನ್ನೊಂದು ಸಾರಿ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರಂತೆ. ನಂತರ ಸಮಂತಾ ಅವರು ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಆ ಸ್ಟಾರ್ ನಟನ ಮಗಳು ಸಮಂತಾ ಅವರ ಬಗ್ಗೆ ದೂಷಣೆಯ ಮಾತುಗಳನ್ನಾಡಿದ್ದರಂತೆ. ನೀತಿ ಪಾಠ ಹೇಳುವ ನೀನು ಮೊದಲು ನಿನ್ನ ಜೀವನವನ್ನು ಸರಿ ಮಾಡಿಕೊ ಎನ್ನುವ ಹಾಗೆ ಮಾತನಾಡಿದ್ದರಂತೆ ಆ ಸ್ಟಾರ್ ನಟನ ಮಗಳು.