ಸಲ್ಮಾನ್ ಖಾನ್ ಗೆ ಡೈಲಾಗ್ ಹೇಳಿಕೊಟ್ಟ ನಟಿ ರಶ್ಮಿಕಾ: ಆದರೆ ಯಾವ ಭಾಷೆಯದ್ದು ಗೊತ್ತೇ?? ಕಣ್ಣೀರು ಇತ್ತ ಫ್ಯಾನ್ಸ್.
ನಟಿ ರಶ್ಮಿಕಾ ಇಷ್ಟು ದಿನಗಳ ಕಾಲ ಗುಡ್ ಬೈ ಸಿನಿಮಾ ಪ್ರೊಮೋಷನ್ ನಲ್ಲಿ ಭಾಗಿಯಾಗಿದ್ದರು. ಗುಡ್ ಬೈ ಸಿನಿಮಾದಲ್ಲಿ ಹಿರಿಯನಟ ಅಮಿತಾಭ್ ಬಚ್ಚನ್ ಅವರೊಡನೆ ತೆರೆ ಹಂಚಿಕೊಂಡಿದ್ದಾರೆ ರಶ್ಮಿಕಾ. ಇದು ಬಾಲಿವುಡ್ ನಲ್ಲಿ ತೆರೆಕಾಣುತ್ತಿರುವ ರಶ್ಮಿಕಾ ಅಭಿನಯದ ಮೊದಲ ಸಿನಿಮಾ, ಹಾಗಾಗಿ ನಾರ್ತ್ ಇಂಡಿಯಾದ ಹಲವು ಕಡೆ ರಶ್ಮಿಕಾ ಪ್ರಚಾರ ಕಾರ್ಯಗಳಲ್ಲಿ ಕಾಣಿಸಿಕೊಂಡು, ಮಿಂಚಿದ್ದರು. ಬಾಲಿವುಡ್ ಮೀಡಿಯಾ ರಶ್ಮಿಕಾ ಅವರಿಗೆ ಒಳ್ಳೆಯ ಹೈಪ್ ಕೊಟ್ಟಿತ್ತು..
ಗುಡ್ ಬೈ ಸಿನಿಮಾ ಪ್ರಚಾರಕ್ಕಾಗಿಯೇ ರಶ್ಮಿಕಾ ಅವರು ಹಿಂದಿ ಬಿಗ್ ಬಾಸ್ ಸೀಸನ್ 16ರ ಸೆಟ್ ಗೆ ಭೇಟಿ ನೀಡಿ, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಸಲ್ಮಾನ್ ಖಾನ್ ಅವರೊಡನೆ ವೇದಿಕೆ ಹಂಚಿಕೊಂಡ ರಶ್ಮಿಕಾ ಮಂದಣ್ಣ ಅವರು, ಸಲ್ಮಾನ್ ಖಾನ್ ಅವರಿಂದ ತೆಲುಗು ಡೈಲಾಗ್ ಹೇಳಿಸಿದ್ದಾರೆ, ಸಲ್ಮಾನ್ ಖಾನ್ ಅವರದ್ದು ಒಂದು ಫೇಮಸ್ ಡೈಲಾಗ್ ಇದೆ, “ಜಿಂದಗಿ ಮೇ ತೀನ್ ಚೀಜ್ ಕಾ ಅಂದರೆಸ್ಟಿಮೇಟ್ ನಹೀ ಕರ್ನಾ..ಮಿ, ಐ ಅಂಡ್ ಮೈಸೇಲ್ಫ್..”, ಈ ಡೈಲಾಗ್ ಅನ್ನು ರಶ್ಮಿಕಾ ತೆಲುಗಿನಲ್ಲಿ ಹೇಳಿದ ಹಾಗೆಯೇ ಹೇಳಿದ ಸಲ್ಮಾನ್ ಖಾನ್ ಎಲ್ಲರಿಂದ ಚಪ್ಪಾಳೆ ಪಡೆದುಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳು ರಶ್ಮಿಕಾ ಅವರ ಪುಷ್ಪ ಸಿನಿಮಾದ ಹಾಡನ್ನು ರೀಕ್ರಿಯೆಟ್ ಮಾಡಿದ್ದಾರೆ. ಇದರಿಂದ ಸಂತೋಷಪಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಹಾಗೆಯೇ ರಶ್ಮಿಕಾ ಅವರು ಹಿಂದಿ ಬಿಗ್ ಬಾಸ್ ವೇದಿಕೆ ಮೇಲೆ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿನ ಸ್ಟೆಪ್ಸ್ ಹಾಕಿದ್ದು, ಸಲ್ಮಾನ್ ಅವರು ಸಹ ಈ ಸ್ಟೆಪ್ಸ್ ರಿಪೀಟ್ ಮಾಡಿದ್ದಾರೆ. ಬಿಗ್ ಬಾಸ್ ಶೋನಲ್ಲಿ ರಶ್ಮಿಕಾ ಅವರು ಬಂದಿರುವ ಈ ಸಣ್ಣ ಪ್ರೋಮೋಗಳೆಲ್ಲವು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.