ಟಾಪ್ ನಟರು ಸಿನಿಮಾದಲ್ಲಿ ದುಡಿಯದ ದುಡಿದದ್ದು ಬಿಗ್ ಬಾಸ್ ನಿಂದ ಪಡೆಯುತ್ತಿದ್ದಾರೆ ಸುದೀಪ್. ಸಂಭಾವನೆ ಎಷ್ಟು ಗೊತ್ತೇ?
ಬಿಗ್ ಬಾಸ್ ಈ ಶೋ ಎಂದರೆ ಜನರಿಗೆ ವಿಶೇಷ ಆಕರ್ಷಣೆ, ಹಲವರು ಕಾರ್ಯಕ್ರಮವನ್ನು ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳಿಗಾಗಿ ನೋಡಿದರೆ ಇನ್ನು ಹಲವರು ಕಿಚ್ಚ ಸುದೀಪ್ ಅವರಿಗೋಸ್ಕರ ನೋಡುತ್ತಾರೆ. ಕಿಚ್ಚ ಸುದೀಪ್ ಅವರು ಅಷ್ಟು ಅಚ್ಚುಕಟ್ಟಾಗಿ ಶೋ ನಿರೂಪಣೆ ಮಾಡುತ್ತಾರೆ. ಕನ್ನಡದಲ್ಲಿ ಈಗ 9ನೇ ಸೀಸನ್ ನಡೆಯುತ್ತಿದೆ, ಮೊದಲ ಸೀಸನ್ ಇಂದಲೂ ಸುದೀಪ್ ಅವರೇ ಬಿಗ್ ಬಾಸ್ ಕನ್ನಡ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಸುದೀಪ್ ಅವರ ರೇಂಜ್ ನಲ್ಲಿ ಕನ್ನಡದ ಮತ್ಯಾವ ನಟ ಕೂಡ ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂದು ಸುದೀಪ್ ಅವರು ಸಾಬೀತು ಮಾಡಿದ್ದಾರೆ.
ಇದುವರೆಗೂ ಸುದೀಪ್ ಅವರು ಈ ಶೋ ಗೆ ಒಂದು ದಿನವೂ ಕೂಡ ತಪ್ಪಿಸದೆ ಬರುತ್ತಿದ್ದಾರೆ. ಅವರ ವೈಯಕ್ತಿಕ ಜೀವನದ ಕೆಲಸಗಳು ಏನೇ ಇದ್ದರು, ಸಿನಿಮಾ ಕೆಲಸಗಳು, ಚಿತ್ರೀಕರಣ ಏನೇ ಇದ್ದರು ಸಹ ಪ್ರತಿ ವೀಕೆಂಡ್ ನಲ್ಲಿ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ತಪ್ಪಿಸದೆ ಬರುತ್ತಾರೆ, ಮತ್ತು ಬಿಗ್ ಬಾಸ್ ಮನೆಯೊಳಗೆ ಇರುವ ಸದಸ್ಯರು ಮತ್ತು ಹೊರಗಿನ ಪ್ರಪಂಚಕ್ಕೆ ಸೇತುವೆಯಾಗಿ ನಿಲ್ಲುತ್ತಾರೆ. ಕಿಚ್ಚನ ನಿರೂಪಣೆ, ಅವರ ಗತ್ತು, ಗಾಂಭೀರ್ಯ, ಸದಸ್ಯರಿಗೆ ಅವರು ಮಾಡಿದ ತಪ್ಪುಗಳನ್ನು ತಿಳಿಸಿ ಬುದ್ಧಿ ಹೇಳುವ ರೀತಿ, ಅದೇ ರೀತಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ, ಸಂತೋಷದಿಂದ ಪ್ರೋತ್ಸಾಹಿಸಿ ಬೆನ್ನು ತಟ್ಟುವ ರೀತಿಯನ್ನು ಇಷ್ಟ ಪಡದೆ ಇರಲು ಸಾಧ್ಯವಿಲ್ಲ.
ಬೇರೆ ಭಾಷೆಯ ಬಿಗ್ ಬಾಸ್ ಶೋಗಳಲ್ಲಿ ನಿರೂಪಕರು ಬದಲಾಗಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಶುರುವಿನಿಂದಲೂ ಸುದೀಪ್ ಅವರೇ ಇದ್ದಾರೆ. ಇನ್ನು ಅತಿದೊಡ್ಡ ರಿಯಾಲಿಟಿ ಶೋ ಎನ್ನಿಸಿಕೊಂಡಿರುವ ಈ ಶೋಗೆ ಸುದೀಪ್ ಅವರು ಪಡೆಯುವ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದು, ಅದಕ್ಕೆ ಇಂದು ಉತ್ತರ ಕೊಡುತ್ತೇವೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಸಿನಿಮಾಗಳಿಗಿಂತ ಸುದೀಪ್ ಅವರು ಬಿಗ್ ಬಾಸ್ ಶೋಗೆ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಈ ಬಾರಿ ಬಿಬಿಕೆ9 ಇಡೀ ಸೀಸನ್ ಗೆ ಸುದೀಪ್ ಅವರು ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.