ವಾಪಸ್ಸು ಬಂದ ಕೂಡಲೇ ರೊಚ್ಚಿಗೆದ್ದ ಸಮಂತಾ: ನನ್ನ ಮಾಜಿ ಗಂಡ ನಾಗ ಚೈತನ್ಯ ಗಂಡಸರಂತೆ ಇರುತ್ತಿರಲಿಲ್ಲ ಎಂದದ್ದು ಯಾಕೆ ಗೊತ್ತೇ??

69

Get real time updates directly on you device, subscribe now.

ಪ್ರಸ್ತುತ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಅದೊಂದು ಕಾಮನ್ ಪದ ವಿಚ್ಛೇದನ. ಸಿನಿಮಾ ನಟ ನಟಿಯರು ವಿಚ್ಛೇದನ ವಿಚಾರ ತಿಳಿಸಿ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ. ಎಷ್ಟೋ ವರ್ಷಗಳ ಕಾಲ ಸಂತೋಷದ ಜೀವನ ನಡೆಸಿ ಇದ್ದಕ್ಕಿದ್ದ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ ಎಂದು ಸ್ಟಾರ್ ಗಳು ಹೇಳಿದಾಗ ಅಭಿಮಾನಿಗಳು ನಿಜಕ್ಕೂ ಶಾಕ್ ಗೆ ಒಳಗಾಗುತ್ತಿದ್ದಾರೆ. ಟಾಲಿವುಡ್ ನಲ್ಲಿ ಹೀಗೆ ವಿಚ್ಛೇದನ ಪ್ರಕಟಿಸಿ ಈಗಲೂ ಸುದ್ದಿಯಾಗುತ್ತಿರುವ ಜೋಡಿ ಒಂದಿದೆ. ಇವರಿಬ್ಬರು ಬೇರೆಯಾಗಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಸಮಂತಾ ಮತ್ತು ಚೈತನ್ಯ ಇಬ್ಬರು ಸಹ ಹಲವು ವರ್ಷಗಳ ಕಾಲ ಪ್ರೀತಿಸಿ, ದೊಡ್ಡವರನ್ನು ಒಪ್ಪಿಸಿ ಮದುವೆ ಮಾಡಿಕೊಂಡರು. ಇವರಿಬ್ಬರು 4 ವರ್ಷಗಳ ಕಾಲ ಬಹಳ ಸಂತೋಷದ ದಾಂಪತ್ಯ ಜೀವನ ನಡೆಸಿದರು. ಅಷ್ಟು ಚೆನ್ನಾಗಿದ್ದ ಈ ಜೋಡಿ ಇದ್ದಕ್ಕಿದ್ದ ಹಾಗೆ ಬೇರೆಯಾಗುತ್ತಾರೆ ಎಂದರೆ ಅದಕ್ಕೆ ಒಂದು ಬಲವಾದ ಕಾರಣ ಇದ್ದೆ ಇರುತ್ತದೆ, ಆದರೆ ಆ ಕಾರಣ ಏನು ಎಂದು ಅವರಿಬ್ಬರನ್ನು ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ. ಇದು ಅವರ ಪರ್ಸನಲ್ ಲೈಫ್, ನಡೆದಿರುವ ವಿಚಾರ ಅವರಿಗೆ ಮಾತ್ರ ಗೊತ್ತಿರುತ್ತದೆ. ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಅಕ್ಕಿನೇನಿ ಕುಟುಂಬ ಮತ್ತು ಚೈತನ್ಯ ಅವರನ್ನು ಒಂದಲ್ಲಾ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡುತ್ತಲೇ ಇದ್ದಾರೆ, ಇತ್ತೀಚೆಗೆ ಸಹ ಸಮಂತಾ, ಚೈತನ್ಯ ಅವರ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಇಂದ ದೂರವೇ ಉಳಿದಿದ್ದಾರೆ ಸಮಂತಾ ಅವರು, ಆದರೆ ಸಮಂತಾ ಅವರು ತಮ್ಮ ತಾಯಿಯ ಜೊತೆಗೆ ಹೇಳಿರುವ ಮಾತುಗಳು ಈಗ ವೈರಲ್ ಆಗುತ್ತದೆ. ಯಾವ ತಾಯಿಯೇ ಆದರೂ ಮಗಳು ಗಂಡನಿಂದ ದೂರವಾಗುತ್ತಾರೆ ಎಂದರೆ ನಾಲ್ಕು ಮಾತುಗಳನ್ನು ಹೇಳಿಯೇ ಹೇಳುತ್ತಾರೆ. ಹಾಗೆಯೇ ಸಮಂತಾ ಅವರ ತಾಯಿ ಕೂಡ ಚೈತನ್ಯ ಬಗ್ಗೆ ನೀನು ಅಪಾರ್ಥ ಮಾಡಿಕೊಂಡಿರಬಹುದು ಎಂದು ಹೇಳಿದರಂತೆ. ಆಗ ಸಮಂತಾ, ಒಬ್ಬ ಗಂಡಸು ಗಂಡನಾಗುತ್ತಾನೆ. ಆದರೆ ಅದೇ ಗಂಡ, ಬೆಡ್ ರೂಮ್ ನಲ್ಲಿ ಗಂಡಸಾಗಿ ವರ್ತನೆ ಮಾಡಬಾರದು ಎಂದು ಕಠಿಣವಾದ ಉತ್ತರ ಕೊಟ್ಟರಂತೆ ನಟಿ ಸಮಂತಾ. ಸಮಂತಾ ಅವರು ಈ ರೀತಿ ಹೇಳಿದ್ದಕ್ಕೆ ಕಾರಣ ಏನು ಎಂದು ಗೊತ್ತಿಲ್ಲ, ಆದರೆ ಈ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Get real time updates directly on you device, subscribe now.