ಫುಲ್ ಮಸ್ತ್ ಫೋಟೋಶೂಟ್ ಬಿಡುಗಡೆ ಮಾಡಿದ ರಶ್ಮಿಕಾ: ನೋಡಿದ ಎಲ್ಲರ ಮೈಂಡ್ ಬ್ಲಾಕ್. ಹೇಗಿವೆ ಗೊತ್ತೇ ಫೋಟೋಗಳು.

58

Get real time updates directly on you device, subscribe now.

ನ್ಯಾಷನಲ್ ಕ್ರಶ್ ಎನ್ನುವ ಪದ ಕೇಳಿದರೆ ಮೊದಲಿಗೆ ನೆನಪಿಗೆ ಬರುವುದು ರಶ್ಮಿಕಾ ಮಂದಣ್ಣ ಅವರು, ಅವರಿಗೆ ಇರುವ ಫ್ಯಾನ್ ಬೇಸ್ ಅಷ್ಟರ ಮಟ್ಟಿಗೆ ಇದೆ. ವಿಶೇಷವಾಗಿ ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುವ ಟ್ಯಾಗ್ ಸಹ ಆಕೆಯ ಹೆಸರಿನಲ್ಲಿ ಇದೆ. ರಶ್ಮಿಕಾ ಅವರು ಎಲ್ಲಿಗೆ ಹೋದರು ಅಭಿಮಾನಿಗಳು ಅವರ ಸುತ್ತುವರೆಯುತ್ತಾರೆ. ಇವರಿಗೆ ಇರುವ ಫ್ಯಾನ್ ಬೇಸ್ ಮತ್ತು ಬೇಡಿಕೆಯಿಂದ ಸಾಲು ಸಾಲು ಸಿನಿಮಾ ಆಫರ್ ಗಳು ಸಹ ಬರುತ್ತಿದೆ. ಎಲ್ಲಾ ಟಾಪ್ ಹೀರೋಗಳ ಸಿನಿಮಾ ಅವಕಾಶಗಳು ರಶ್ಮಿಕಾ ಅವರನ್ನೇ ಹುಡುಕಿಕೊಂಡು ಹೋಗುತ್ತಿದೆ.

ರಶ್ಮಿಕಾ ಸಿನಿಮಾ ಪ್ರೊಮೋಷನ್ ಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಮೊದಲಿಗೆ ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ರಶ್ಮಿಕಾ ಅವರು ನಂತರ ತೆಲುಗಿಗೆ ಚಲೊ ಎನ್ನುವ ಕಡಿಮೆ ಬಜೆಟ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಈ ಸಿನಿಮಾ ಹಾಗೂ ಇದಾದ ನಂತರ ರಶ್ಮಿಕಾ ನಟಿಸಿದ ಗೀತಾ ಗೋವಿಂದಮ್ ಸಿನಿಮಾ ಯಶಸ್ಸಿನಿಂದ ರಶ್ಮಿಕಾ ಅವರಿಗೆ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬರುತ್ತಾ ಹೋದವು. ಚಿತ್ರರಂಗದಲ್ಲಿ ಹಲವು ನಟಿಯರಿಗೆ ಅವಕಾಶದ ಕೊರತೆ ಇದ್ದರೆ, ರಶ್ಮಿಕಾ ಅವರಿಗೆ ಇದು ಉಲ್ಟಾ ಆಗಿದೆ.

ರಶ್ಮಿಕಾ ಅವರು ಬೇಡ ಎಂದರು ಸಹ ಒಳ್ಳೆಯ ಆಫರ್ ಗಳು ಅವರನ್ನೇ ಹುಡುಕಿಕೊಂಡು ಬರುತ್ತಲಿದೆ, ಕನ್ನಡ, ತೆಲುಗು ಮಾತ್ರವಲ್ಲ ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಕೂಡ ಒಂದಾದ ಮೇಲೊಂದು ಸಿನಿಮಾ ಆಫರ್ ಗಳನ್ನು ಪಡೆದು, ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಹೀಗಿರುವಾಗ ರಶ್ಮಿಕಾ ಅವರು ತಮ್ಮ ಅಭಿಮಾನಿಗಳಿಗಾಗಿ ಆಗಾಗ ಫೋಟೋಶೂಟ್ ಗಳ ಟ್ರೀಟ್ ನೀಡುತ್ತಾರೆ. ರಶ್ಮಿಕಾ ಅವರ ಗ್ಲಾಮರ್ ನೋಡಿದರೆ ಮಾರುಹೋಗದವರು ಇರುವುದಿಲ್ಲ. ಈ ಬಾರಿ ರಶ್ಮಿಕಾ ಅವರು ಶರ್ಟ್ ಓಪನ್ ಆಗಿ ಬಿಟ್ಟು, ಟೈಟ್ ಟೀಶರ್ಟ್ ಧರಿಸಿ ಹೊಸದಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ರಶ್ಮಿಕಾ ಅವರ ಸೌಂದರ್ಯ ನೋಡಿ ಫಿದಾ ಆಗಿದ್ದಾರೆ.

Get real time updates directly on you device, subscribe now.