ಬಾಲಿವುಡ್ ನ ಮತ್ತೊಂದು ತೆರೆ ಹಿಂದೆ ನಡೆದ ವಿಷಯ ಬಯಲು: ನಟ ರಣಬೀರ್ ಮಾಡಿದ ಕೆಲಸಕ್ಕೆ ಬಿಕ್ಕಿ ಬಿಕ್ಕಿ ಅತ್ತ ರಶ್ಮಿಕಾ. ಏನು ಮಾಡಿದ್ದಾನೆ ಗೊತ್ತೇ??

32

Get real time updates directly on you device, subscribe now.

ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಲಿವುಡ್ ನಲ್ಲಿ ಇವರು ಅಮಿತಾಭ್ ಬಚ್ಚನ್ ಅವರ ಜೊತೆಗೆ ನಟಿಸಿದ ಗುಡ್ ಬೈ ಸಿನಿಮಾ ಬಿಡುಗಡೆಯಾಗಿ, ರಶ್ಮಿಕಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಅಭಿನಯದ ಮಿಷನ್ ಮಜ್ನು ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ಬೇರೆ ಭಾಷೆಯ ಸಿನಿಮಾಗಳಲ್ಲೂ ರಶ್ಮಿಕಾ ಅವರು ಬ್ಯುಸಿ ಆಗಿದ್ದು, ಪುಷ್ಪ2, ವಾರಿಸು, ಹಾಗೂ ಕಾರ್ತಿಕ್ ಆರ್ಯನ್ ನಾಯಕನಾಗಲಿರುವ ಆಶಿಕಿ3 ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ರಣಬೀರ್ ಕಪೂರ್ ಅವರು ನಾಯಕನಾಗಿರುವ ಅನಿಮಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಈ ಸಿನಿಮಾ ಚಿತ್ರೀಕರಣದಲ್ಲಿ ಕೆಲವು ದಿನಗಳ ಕಾಲ ಪಾಲ್ಗೊಂಡಿದ್ದಾರೆ. ರಶ್ಮಿಕಾ ಅವರು ಅನಿಮಲ್ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಟ ರಣಬೀರ್ ಅವರಿಂದ ಕಣ್ಣೀರು ಹಾಕಿದ್ದಾರಂತೆ, ಈ ವಿಚಾರದ ಬಗ್ಗೆ ರಶ್ಮಿಕಾ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರು ರೇಗಿಸಿದ್ದಕ್ಕೆ ಅಥವಾ ತಮಾಷೆ ಮಾಡಿದ್ದಕ್ಕೆ ರಶ್ಮಿಕಾ ಕಣ್ಣೀರು ಹಾಕಿಲ್ಲ. ಬದಲಾಗಿ, ರಣಬೀರ್ ಕಪೂರ್ ಅವರು ತಮ್ಮ ಮೇಲೆ ತೋರಿಸಿದ ಕಾಳಜಿ ಇಂದ ಕಣ್ಣೀರು ಹಾಕಿದ್ದರಂತೆ ರಶ್ಮಿಕಾ, ಆ ಘಟನೆ ಬಗ್ಗೆ ಮಾತನಾಡಿ, ರಶ್ಮಿಕಾ ಅವರು ಹೇಳಿದ್ದು ಹೀಗೆ..

“ಶೂಟಿಂಗ್ ಸೆಟ್ ನಲ್ಲಿ ನನ್ನ ಬೆಳಗ್ಗಿನ ಬ್ರೇಕ್ ಫಾಸ್ಟ್ ತುಂಬಾ ಬೋರಿಂಗ್ ಆಗಿರುತ್ತದೆ ಎಂದು ಬಹಳ ಸಲ ದೂರು ನೀಡಿದ್ದೆ, ಅದರಿಂದ ಮರುದಿನವೇ ರಣಬೀರ್ ಕಪೂರ್ ಅವರು ನನಗೆ ತುಂಬಾ ಇಷ್ಟವಾದ ಎಲ್ಲಾ ತಿಂಡಿಗಳನ್ನು ತಯಾರಿಸಿ, ತರಿಸಿದ್ದರು. ಅವರ ಕುಕ್ ಗೆ ಹೇಳಿ ನನಗೋಸ್ಕರ ಅಡುಗೆ ಮಾಡಿಸಿ ತರಿಸಿದ್ದರು. ಅಂತಹ ರುಚಿಕರವಾದ ಆಹಾರ ತಿನ್ನುವಾಗ ನನಗೆ ಕಣ್ಣಲ್ಲಿ ನೀರು ಬಂದಿತು.” ಎಂದು ಹೇಳಿದ್ದಾರೆ ರಶ್ಮಿಕಾ. ಈ ಮೂಲಕ ರಣಬೀರ್ ಕಪೂರ್ ಅವರ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸಿದ್ದಾರೆ. ಅನಿಮಲ್ ಸಿನಿಮಾಗೆ ಮೊದಲು ಪರಿಣಿತಿ ಚೋಪ್ರಾ ಆಯ್ಕೆಯಾಗಿದ್ದರು, ಬಳಿಕ ರಶ್ಮಿಕಾ ಮಂದಣ್ಣ ಅವರು ಆಯ್ಕೆಯಾದರು.

Get real time updates directly on you device, subscribe now.